ಕೇರಳದಲ್ಲಿ ಮುಂದುವರಿದ ಮಳೆ; 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

TV9 Digital Desk

| Edited By: Rashmi Kallakatta

Updated on:Aug 02, 2022 | 1:41 PM

ಇಂದು (ಆಗಸ್ಟ್ 2)ರಂಂದು  ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೇರಳದಲ್ಲಿ ಮುಂದುವರಿದ ಮಳೆ; 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಮಳೆ

ಕೇರಳದಲ್ಲಿ ಮಳೆ (Kerala Rains) ಅಬ್ಬರ ಮುಂದುವರಿದಿದ್ದು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನದಿ ಉಕ್ಕಿ ಹರಿದಿದೆ. ಹಲವೆಡೆ ಭ ಕುಸಿತವುಂಟಾಗಿದ್ದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಕಾಸರಗೋಡಿನಲ್ಲಿ ಆಗಸ್ಟ್ 2 ಮತ್ತು 3ರಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 5ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿವಿಧ ಜಿಲ್ಲೆ ಮತ್ತು ಪ್ರವಾಸಿ ತಾಣಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇಡುಕ್ಕಿಯ ಹೈರೇಂಜ್ ಪ್ರದೇಶಗಳಲ್ಲಿರುವ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ, ರಾಜ್ಯದಾದ್ಯಂತ 757 ಮಂದಿಯನ್ನು ಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಇಂದು (ಆಗಸ್ಟ್ 2)ರಂಂದು  ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಕೇರಳ  ಸರ್ಕಾರ ಟ್ವೀಟ್ ಮಾಡಿದೆ. ಮಂಗಳವಾರ 2 ವರ್ಷದ ಮಗು ಸೇರಿದಂತೆ ಮೂರು ಮಂದಿ ಮಳೆಯಿಂದಾಗಿ ಪ್ರಾಣಕಳೆದುಕೊಂಡಿದ್ದಾರೆ. ಕೋಟ್ಟಯಂನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಕೋಟ್ಟಿಕ್ಕಲ್ ಚಪ್ಪತ್ ಪ್ರದೇಶದಲ್ಲಿ ಪತ್ತೆಯಾಗಿದೆ.

ತ್ರಿಶ್ಶೂರ್​​ನ ಚಾಲಕ್ಕುಡಿ ನದಿ ನೀರಿನ ಮಟ್ಟ ಮಂಗಳವಾರ 5 ಮೀಟರ್ ಎತ್ತರಕ್ಕೆ ಏರಿದ್ದು, ನದಿ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ. ಕೇರಳದ ಏಳು ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶೀಘ್ರದಲ್ಲೇ ಮಲಂಬುಳ ಡ್ಯಾಮ್ ಮತ್ತು ಪೊತುಂಡಿ ಡ್ಯಾಂ ತೆರೆಯಲಾಗುವುದು.

24 ಗಂಟೆಗಳಲ್ಲಿ 20 ಸೆಮಿಗಿಂತ ಹೆಚ್ಚು ಮಳೆಯಾಗುತ್ತಿದ್ದರೆ ರೆಡ್ ಅಲರ್ಟ್, 6ರಿಂದ 20 ಸೆಮಿ ಮಳೆಯಾಗುತ್ತಿದ್ದರೆ ಆರೆಂಜ್ ಅಲರ್ಟ್, ಅದೇ ವೇಳೆ 6 ರಿಂದ 11 ಸೆಮಿ ಮಳೆಯಾಗುತ್ತಿದ್ದರೆ ಯೆಲ್ಲೋ ಅಲರ್ಟ್ ಘೋಷಿಸಲಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada