Honeymoon Murder: ಏಳು ವರ್ಷಗಳ ಹಿಂದೆ ಮೊದಲ ಭೇಟಿ, 2024ರಲ್ಲಿ ಒಂದಾದ್ರು, 1 ವರ್ಷದ ನಂತರ ಇಬ್ಬರೂ ಸೇರಿ ಕೊಲೆ ಮಾಡಿದ್ರು

ರಾಜಸ್ಥಾನದಲ್ಲಿ ನಡೆದ ಭೀಕರ ಹನಿಮೂನ್ ಕೊಲೆ ಪ್ರಕರಣದ ವಿವರಗಳು ಹೊರಬಿದ್ದಿವೆ. ಏಳು ವರ್ಷಗಳ ಹಿಂದೆ ಆಕಸ್ಮಿಕವಾಗಿ ಭೇಟಿಯಾಗಿದ್ದ ನವವಿವಾಹಿತೆ ಅಂಜಲಿ ಮತ್ತು ಆಕೆಯ ಮಾಜಿ ಪ್ರಿಯಕರ ಸಂಜಯ್, ತನ್ನ ಪತಿ ಆಶಿಶ್ ಕುಮಾರ್‌ನನ್ನು ಹತ್ಯೆ ಮಾಡಿದ್ದಾರೆ. ಮದುವೆಯಾದ ಕೇವಲ ಮೂರೇ ತಿಂಗಳಿಗೆ ಪತಿಗೆ ವಾಯುವಿಹಾರಕ್ಕೆ ಕರೆಯಿಸಿ, ಅಡಗಿದ್ದ ಪ್ರಿಯಕರನ ಮೂಲಕ ಕತ್ತು ಹಿಸುಕಿ ಕೊಲೆ ಮಾಡಿಸಿದ್ದಾರೆ. ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

Honeymoon Murder: ಏಳು ವರ್ಷಗಳ ಹಿಂದೆ ಮೊದಲ ಭೇಟಿ, 2024ರಲ್ಲಿ ಒಂದಾದ್ರು, 1 ವರ್ಷದ ನಂತರ ಇಬ್ಬರೂ ಸೇರಿ ಕೊಲೆ ಮಾಡಿದ್ರು
ಸಂಜಯ್-ಅಂಜಲಿ-ಆಶಿಶ್
Image Credit source: NDTV

Updated on: Feb 09, 2026 | 8:12 AM

ಜೈಪುರ, ಫೆಬ್ರವರಿ 09: ಏಳು ವರ್ಷಗಳ ಹಿಂದೆ ಆಕಸ್ಮಿಕವಾಗಿ ಆಗಿದ್ದ ಭೇಟಿ ಇಂದು ಇಬ್ಬರೂ ಸೇರಿ ಒಂದು ಕೊಲೆಯನ್ನೇ ಮಾಡುವ ಹಂತಕ್ಕೆ ಬಂದು ತಲುಪಿದೆ. ಜನವರಿ 30ರಂದು ರಾಜಸ್ಥಾನದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತನ್ನ ಮದುವೆ(Marriage)ಯಾಗಿ ಮೂರೇ ತಿಂಗಳಿಗೆ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದಳು. ಆರೋಪಿ 23 ವರ್ಷದ ಅಂಜಲಿ, 25 ವರ್ಷದ ಸಂಜಯ್ ಅವರನ್ನು ತಾನು ವೇಟರ್ ಆಗಿ ಕೆಲಸ ಮಾಡುತ್ತಿದ್ದ ಸಮಾರಂಭವೊಂದರಲ್ಲಿ ಭೇಟಿಯಾದಳು. ಮೊದಲು ಆರಂಭವಾದ ಮಾತು ಕತೆ ನಂತರ ಆತ ಮೊಬೈಲ್ ಸಂಖ್ಯೆಯನ್ನು ಕೊಡುವವರೆಗೆ ಬಂದಿತ್ತು. ಆದರೆ ಆ ಸಮಯದಲ್ಲಿ ಅಂಜಲಿ ಬಳಿ ಮೊಬೈಲ್ ಫೋನ್ ಇರಲಿಲ್ಲ, ಇಬ್ಬರೂ ಸಂಪರ್ಕ ಕಳೆದುಕೊಂಡರು.

2024ರಲ್ಲಿ ಅಂಜಲಿ ಕೊನೆಗೂ ಫೋನ್ ಖರೀದಿಸಿ ಆಕೆ ಸಂಜಯ್ ಜತೆ ಮತ್ತೆ ಸಂಪರ್ಕಕ್ಕೆ ಬಂದಳು, ಕ್ರಮೇಣವಾಗಿ ಅವರ ನಡುವೆ ಮಾತುಕತೆ ಹೆಚ್ಚಾಗಿತ್ತು. ಆದರೆ ಆಕೆಯ ಕುಟುಂಬದವರ ಪ್ಲ್ಯಾನ್ ಬೇರೆಯೇ ಇತ್ತು. ಸಂಜಯ್ ಜತೆ ಸಂಬಂಧ ಹೊಂದಿದ್ದಾಳೆಂದು ತಿಳಿದ ಬಳಿಕವೂ ಬೇರೆ ವರನನ್ನು ನೋಡಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.
ಅಕ್ಟೋಬರ್ 30, 2025ರಂದು ಅಂಜಲಿಯ ಕುಟುಂಬ ರಾವ್ಲಾದ ಎಂಕಾ ಪದವೀಧರ ಆಶಿಶ್ ಕುಮಾರ್ ಅವರೊಂದಿಗೆ ವಿವಾಹ ಏರ್ಪಡಿಸಿದ್ದರು. ಅಂಜಲಿ ಬಿಕಾಂ ಪದವೀಧರೆಯಾಗಿದ್ದಾರೆ. ಮದುವೆಯ ನಂತರ ಅವರು ರಾವ್ಲಾಗೆ ತೆರಳಿದ್ದರು, ಆದರೆ ಆಕೆಯ ಮನಸ್ಸಿಗೆ ಸಮಾಧಾನವಿರಲಿಲ್ಲ.

ರಾವ್ಲಾದಲ್ಲಿ ಗಂಡನ ಮನೆ ಸಾದುಲ್ಶಹರ್‌ನಲ್ಲಿರುವ ಅವರ ಹುಟ್ಟೂರು ನಡುವಿನ 225 ಕಿಲೋಮೀಟರ್ ಅಂತರವಿತ್ತು. ಅದು ಆಕೆಗೆ ತಲೆನೋವಾಗಿ ಪರಿಣಮಿಸಿತ್ತು. ಆಕೆ ಸಂಜಯ್ ಜತೆ ಸಂಪರ್ಕದಲ್ಲಿದ್ದಳು. ಕೊಲೆಗೆ ಸುಮಾರು 16 ದಿನಗಳ ಮೊದಲು ಅಂಜಲಿ ತನ್ನ ಹೆತ್ತವರ ಮನೆಗೆ ಭೇಟಿ ನೀಡಿದ್ದಳು. ಪೊಲೀಸರ ಪ್ರಕಾರ, ಆ ಸಮಯದಲ್ಲಿ ಆಕೆ ಸಂಜಯ್ ಜತೆ ಸೇರಿ ಪತಿ ಆಶಿಶ್​ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.

ಮತ್ತಷ್ಟು ಓದಿ: ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು?

ಮದುವೆಯ ನಂತರ ಅವರು ನೇರವಾಗಿ ಭೇಟಿಯಾಗದಿದ್ದರೂ , ಆಗಾಗ ವಾಟ್ಸಾಪ್​ನಲ್ಲಿ ಕರೆ ಮಾಡಿ ಮಾತನಾಡುತ್ತಿದ್ದರು. ಕೊಲೆಯಾದ ದಿನ ಇಬ್ಬರೂ 5 ರಿಂದ 7 ಬಾರಿ ಮಾತನಾಡಿದ್ದರು. ಜನವರಿ 30 ರ ರಾತ್ರಿ, ಊಟದ ನಂತರ, ಅಂಜಲಿ ತನ್ನ ಪತಿಯನ್ನು ತನ್ನೊಂದಿಗೆ ವಾಕ್ ಮಾಡಲು ಹೋಗುವಂತೆ ಕೇಳಿಕೊಂಡಳು. ನಂತರ ಅವರು ಇರುವ ಸ್ಥಳದ ಬಗ್ಗೆ ಸಂಜಯ್‌ಗೆ ದೂರವಾಣಿ ಮೂಲಕ ತಿಳಿಸಿದ್ದಳು.

ಸಂಜಯ್, ತನ್ನ ಇಬ್ಬರು ಸಹಚರರಾದ ರೋಹಿತ್ ಅಲಿಯಾಸ್ ರಾಕಿ ಮತ್ತು ಬಾದಲ್ ಅಲಿಯಾಸ್ ಸಿದ್ಧಾರ್ಥ್ ಜೊತೆ ಪೊದೆಗಳಲ್ಲಿ ಅಡಗಿ ಕಾಯುತ್ತಿದ್ದರು. ಅಂಜಲಿ ತನ್ನ ಪತಿಯೊಂದಿಗೆ ಸ್ಥಳಕ್ಕೆ ಬಂದ ತಕ್ಷಣ ಅವರಿಗೆ ಸಂಕೇತ ನೀಡಿದ್ದಳು, ಗುಂಪು ಆಶಿಶ್ ಮೇಲೆ ಹೊಂಚು ಹಾಕಿ, ಕೋಲುಗಳಿಂದ ಪದೇ ಪದೇ ಹೊಡೆದರು, ಆಶಿಶ್ ಕೆಳಗೆ ಬಿದ್ದಾಗ ಆರೋಪಿಗಳು ಮಫ್ಲರ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಘಟನೆಯನ್ನು ದರೋಡೆ ಎಂದು ಬಿಂಬಿಸಲು ಅಂಜಲಿ ತನ್ನ ಕಿವಿಯೋಲೆ ಮತ್ತು ಆಶಿಶ್​ನ ಮೊಬೈಲ್ ಅನ್ನು ದಾಳಿಕೋರರಿಗೆ ಕೊಟ್ಟಿದ್ದಾಳೆ. ಆಕೆಯೂ ಪ್ರಜ್ಞೆ ಕಳೆದುಕೊಂಡವಳಂತೆ ರಸ್ತೆಯಲ್ಲಿ ಮಲಗಿದ್ದಳು.

ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಶಿಶ್ ತಲೆಯ ಹಿಂಭಾಗದಲ್ಲಿ ತೀವ್ರವಾದ ಗಾಯಗಳಾಗಿದ್ದು, ಕತ್ತು ಹಿಸುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು.ಈಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ವ್ಯಕ್ತಿಗಳನ್ನು 5 ದಿನಗಳ ಕಾಲ ವಶಕ್ಕೆ ಪಡೆಯಲಾಗಿದ್ದು, ಅಂಜಲಿಯನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ನಂತರ ಬಿಕಾನೇರ್ ಜೈಲಿಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 8:09 am, Mon, 9 February 26