ಭಾರತೀಯ ವಾಯುಸೇನೆಗೆ ಸೇರಿದ ಯುಎವಿ ರಾಜಸ್ಥಾನದಲ್ಲಿ ಪತನ; ತನಿಖೆಗೆ ಆದೇಶ
ಯುಎವಿಯನ್ನು ಸಾಮಾನ್ಯವಾಗಿ ಡ್ರೋನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೈಲಟ್ಗಳು ಇರುವುದಿಲ್ಲ. ಈಗೀಗಂತೂ ಹಲವು ಕಾರಣಕ್ಕೆ ಡ್ರೋನ್ ಬಳಕೆಯಾಗುತ್ತದೆ.
ಜೈಪುರ: ಭಾರತೀಯ ವಾಯುಸೇನೆಯ ಯುಎವಿ (ಮಾನವರಹಿತ ವೈಮಾನಿಕ ವಾಹನ) ರಾಜಸ್ಥಾನದ ಜೈಸಲ್ಮೇರ್ ಎಂಬಲ್ಲಿ ಪತನಗೊಂಡಿದೆ. ಸೇನಾ ಕಾರ್ಯಾಚರಣೆಯ ಒಂದು ಭಾಗವಾಗಿ ಹಾರಾಟ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಯುಎವಿ ಪತನಕ್ಕೆ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ಕೂಡಲೇ ತನಿಖೆ ನಡೆಸಲಾಗುತ್ತದೆ. ಅಪಘಾತಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಯುಎವಿಯನ್ನು ಸಾಮಾನ್ಯವಾಗಿ ಡ್ರೋನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೈಲಟ್ಗಳು ಇರುವುದಿಲ್ಲ. ಈಗೀಗಂತೂ ಹಲವು ಕಾರಣಕ್ಕೆ ಡ್ರೋನ್ ಬಳಕೆಯಾಗುತ್ತದೆ. 2019ರಲ್ಲಿ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ)ಗೆ ಸೇರಿದ ಯುಎವಿಯೊಂದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಕೃಷಿಭೂಮಿಯೊಂದರಲ್ಲಿ ಪತನಗೊಂಡಿತ್ತು. ಇನ್ನು ನೆರೆರಾಷ್ಟ್ರ ಪಾಕಿಸ್ತಾನದಿಂದ ಗಡಿದಾಟಿ ಬಂದ ಹಲವು ಡ್ರೋನ್ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ ಉದಾಹರಣೆಗಳು ಇವೆ.
Published On - 8:18 pm, Mon, 4 April 22