ಶಬರಿಮಲೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಕೇರಳದಲ್ಲಿರುವ ಶಬರಿಮಲೆಗೆ (Sabarimala) ಭೇಟಿ ನೀಡಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ. ವಿಶೇಷವೆಂದರೆ ಇರುಮುಡಿ ಹೊತ್ತು, ಪಾದಯಾತ್ರೆ ಮೂಲಕವೇ ರಾಜೀವ್ ಚಂದ್ರಶೇಖರ್ ಶಬರಿಮಲೆ ಅಯ್ಯಪ್ಪ ಸ್ವಾಮಿ ಬೆಟ್ಟವನ್ನೇರಿದ್ದಾರೆ. ಬೇರೆ ಭಕ್ತರ ಜೊತೆ ಕಪ್ಪು ಬಟ್ಟೆ ಧರಿಸಿ, ಇರುಮುಡಿ ಹೊತ್ತು ಸಚಿವ ರಾಜೀವ್ ಚಂದ್ರಶೇಖರ್ ಬೆಟ್ಟ ಹತ್ತುತ್ತಿರುವ ಫೋಟೋಗಳು ವೈರಲ್ ಆಗಿವೆ. ಅಂದಹಾಗೆ, 26ನೇ ಬಾರಿ ರಾಜೀವ್ ಚಂದ್ರಶೇಖರ್ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಕೊವಿಡ್-19 ಅಲೆಯ ನಂತರ ಶಬರಿಮಲೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇಲ್ಲಿಗೆ ಆಗಮಿಸಿದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಅಯ್ಯಪ್ಪ ಭಕ್ತರನ್ನು ಭೇಟಿಯಾದ ಪೋಟೊಗಳನ್ನು ರಾಜೀವ್ ಚಂದ್ರಶೇಖರ್ ಅವರು ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
– Rajeev Chandrasekhar (@rajeev_chandrasekhar) 19 Aug 2022
ಇದನ್ನೂ ಓದಿ: Sabarimala Temple: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಇಂದಿನಿಂದ ಭಕ್ತರ ದರ್ಶನಕ್ಕೆ ಅವಕಾಶ
ಶಬರಿಮಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಅಯ್ಯಪ್ಪ ಭಕ್ತರನ್ನು ಭೇಟಿಯಾದ ಹೆಚ್ಚಿನ ಚಿತ್ರಗಳು ಇದಾಗಿದ್ದು, ಅವರಲ್ಲಿ ಹಲವರು ಕೋವಿಡ್ ನಂತರ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರು 26ನೇ ಬಾರಿ ಇಲ್ಲಿಗೆ ಭೇಟಿ ನೀಡುತ್ತಿದ್ದು, ‘ನನ್ನ 26ನೇ ವರ್ಷದ ಅಯ್ಯಪ್ಪನ ದರ್ಶನ ಇದಾಗಿದೆ. ಸಾವಿರಾರು ಭಕ್ತರೊಂದಿಗೆ ಶಬರಿಮಲೆಯಲ್ಲಿ ತೆರಳಿದಾಗ ತೆಗೆದ ಫೋಟೋ’ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kerala: ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿ ಪ್ರವೇಶದ್ವಾರ ಬಳಿ, ವಿಜಯ ಮಲ್ಯ ನೀಡಿದ್ದ ಚಿನ್ನದ ಲೇಪಿತ ಛಾವಣಿ ಸೋರುತಿದೆ!
Headng 4 my yearly prayers at #Sabarimalai Temple -after 2 years of missing it due to #COVID19
Startng wth my Irumudi Kettu ceremony in morning.
This is my 26th yr of this annual tradtn for me! #Swamisharanam ?? pic.twitter.com/WSY6rgtiSv
— Rajeev Chandrasekhar ?? (@Rajeev_GoI) August 17, 2022
ಬೆಂಗಳೂರಿನ ಅಯ್ಯಪ್ಪ ದೇವಸ್ಥಾನದಿಂದ ಇರುಮುಡಿಕಟ್ಟು ತುಂಬಿಕೊಂಡು ಕೇರಳದ ಪಟ್ಟಣಂತಿಟ್ಟಗೆ ತೆರಳಿದ ಸಚಿವರು, ಯಾತ್ರಾರ್ಥಿಗಳೊಂದಿಗೆ ಪಾದಯಾತ್ರೆ ಆರಂಭಿಸಿದ್ದರು. ಇಂದು ಬೆಳಗ್ಗೆ ಪಂಜಾಬದಿಂದ ಇರುಮುಡಿ ಹೊತ್ತುಕೊಂಡು ಪಾದಯಾತ್ರೆ ಆರಂಭಿಸಿದ ರಾಜೀವ್ ಚಂದ್ರಶೇಖರ್ ಒಂದೂವರೆ ಗಂಟೆಯಲ್ಲಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ತಲುಪಿದ್ದಾರೆ. ಅಯ್ಯಪ್ಪನ ದರ್ಶನ ಪಡೆದ ರಾಜೀವ್ ಚಂದ್ರಶೇಖರ್ ಬಳಿಕ ಪೂಜೆ ಸಲ್ಲಿಸಿದ್ದಾರೆ.