ಸೋಮವಾರದವರೆಗೆ ಇಡಿ ಅಧಿಕಾರಿ, ಮಂಗಳವಾರ ಬಿಜೆಪಿ ಅಭ್ಯರ್ಥಿ; ಯುಪಿ ಚುನಾವಣೆಗೆ ಟಿಕೆಟ್ ಪಡೆದ ರಾಜೇಶ್ವರ್ ಸಿಂಗ್ ಯಾರು?

ಪಕ್ಷಕ್ಕೆ ಸೇರಿದ ಕೂಡಲೇ ರಾಜೇಶ್ವರ್ ಸಿಂಗ್ ಅವರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್!! ಯಾರಿಗುಂಟು ಯಾರಿಗಿಲ್ಲ ಇಂಥ ಬಾಗ್ಯ? ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಲವಾರು ವರ್ಷಗಳಿಂದ ಬೆವರು ಸುರಿಸಿ ದುಡಿದರೂ ಅವರಿಗೆ ತಾಲ್ಲೂಕು ಪಂಚಾಯತ್ ಚುನಾವಣೆಗೂ ಟಿಕೆಟ್ ಸಿಕ್ಕಲಾರದು.

ಸೋಮವಾರದವರೆಗೆ ಇಡಿ ಅಧಿಕಾರಿ, ಮಂಗಳವಾರ ಬಿಜೆಪಿ ಅಭ್ಯರ್ಥಿ; ಯುಪಿ ಚುನಾವಣೆಗೆ ಟಿಕೆಟ್ ಪಡೆದ ರಾಜೇಶ್ವರ್ ಸಿಂಗ್ ಯಾರು?
ರಾಜೇಶ್ವರ್ ಸಿಂಗ್
Follow us
TV9 Web
| Updated By: shivaprasad.hs

Updated on: Feb 03, 2022 | 7:29 AM

ಉತ್ತರ ಪ್ರದೇಶ ವಿಧಾನ ಸಭೆಯಲ್ಲಿ ಚುನಾವಣೆಯಲ್ಲಿ ಹಲವಾರು ಕೌತುಕಗಳು ನಮಗೆ ನೋಡಲು ಸಿಗುತ್ತಿವೆ ಮತ್ತು ಮುಂದೆಯೂ ಸಿಗಲಿವೆ. ಕಳೆದ ಮಂಗಳವಾರದ ಕೌತುಕ ನಿಮ್ಮ ಗಮನಕ್ಕೆ ತರುತ್ತೇವೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದು ಜಾರಿ ನಿರ್ದೇಶನಾಲಯದ (ಇಡಿ) (Enforcement Directorate) ಜಂಟಿ ನಿರ್ದೇಶಕರಾಗಿದ್ದ ರಾಜೇಶ್ವರ್ ಸಿಂಗ್ (Rajeshwar Singh) ಅವರಿಗೆ ಲಖನೌ ಸರೋಜಿನಿ ನಗರ (Lucknow Sarojiningar) ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಬ್ರಿಜೇಶ್ ಪಾಠಕ್ (Brijesh Pathak) ಅವರನ್ನು ಕಣಕ್ಕಿಳಿಸಲಾಗಿದೆ. ಮೊನ್ನೆಯಷ್ಟೇ ಬಿಜೆಪಿ ಸೇರಿದ ಸಮಾಜವಾದಿ ಪಕ್ಷದ ಪಿತಾಮಹ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ಬಹು ಅಪರ್ಣಾ ಯಾದವ್ ಈ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಟಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅವರ ಬಯಕೆಯನ್ನು ತಿರಸ್ಕರಿಸಿದೆ. ಹಾಗೆಯೇ ಕಳೆದ ಬಾರಿ ಇದೇ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದೆ ರೀಟಾ ಬಹುಗುಣ ಅವರು ತಮ್ಮ ಪುತ್ರ ಮಾಯಾಂಕ್ ಗಾಗಿ ಟಿಕೆಟ್ ಕೇಳಿದ್ದರು. ಅವರು ಸಹ ನಿರಾಶರಾಗಿದ್ದಾರೆ. ಮಾಯಾಂಕ್ ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂಬ ವದಂತಿಗಳು ಹರಡಿವೆ.

ಓಕೆ ನಾವು ರಾಜೇಶ್ವರ್ ಸಿಂಗ್ ಅವರ ಬಗ್ಗೆ ಕೊಂಚ ಚರ್ಚಿಸೋಣ. ಸೋಮವಾರದವರೆಗೆ ಅವರು ‘ಇಡಿ’ಯ ಉದ್ಯೋಗಿಯಾಗಿದ್ದರು. ಅವರು ಸ್ವಯಂ ನಿವೃತ್ತಿ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿ ಪುರಸ್ಕೃತಗೊಂಡಿದೆ. ವಿಷಯ ಗೊತ್ತಾಗುತ್ತಿದಂತೆ ಅವರು ಮಾಡಿದ ಮೊದಲ ಕೆಲಸವೆಂದರೆ ಬಿಜೆಪಿ ಸೇರಿದ್ದು!

ಸೋಜಿಗದ ವಿಷಯ ನೋಡಿ, ಪಕ್ಷಕ್ಕೆ ಸೇರಿದ ಕೂಡಲೇ ರಾಜೇಶ್ವರ್ ಸಿಂಗ್ ಅವರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್!! ಯಾರಿಗುಂಟು ಯಾರಿಗಿಲ್ಲ ಇಂಥ ಬಾಗ್ಯ? ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಲವಾರು ವರ್ಷಗಳಿಂದ ಬೆವರು ಸುರಿಸಿ ದುಡಿದರೂ ಅವರಿಗೆ ತಾಲ್ಲೂಕು ಪಂಚಾಯತ್ ಚುನಾವಣೆಗೂ ಟಿಕೆಟ್ ಸಿಕ್ಕಲಾರದು. ಆದರೆ, ರಾಜೇಶ್ವರ್ ಸಿಂಗ್ ಅವರಿಗೆ ಒಂದೇ ದಿನದಲ್ಲಿ ಎಲ್ಲವೂ ಆಗಿದೆ.

ಅದೃಷ್ಟವೆಂದರೆ ಇದಪ್ಪಾ! ಸಿಂಗ್ 2007 ರಲ್ಲಿ ಇಡಿಗೆ ಸೇರುವ ಮೊದಲು ಸುಮಾರು 10 ವರ್ಷಗಳ ಕಾಲ ಉತ್ತರ ಪ್ರದೇಶ ಪೊಲೀಸ್ ಸೇವೆಯಲ್ಲಿದ್ದರು. ಅವರ ನಿವೃತ್ತಿಗೆ ಇನ್ನೂ 11 ವರ್ಷ ಬಾಕಿಯಿತ್ತು.

ದೇಶದೆಡೆ ಸಂಪೂರ್ಣವಾದ ಬದ್ಧತೆ ಮತ್ತು ಸಂಕಲ್ಪವನ್ನಿಟ್ಟುಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂಬ ತುಡಿತ ನನ್ನಲ್ಲಿ ಪದೇಪದೆ ಉದ್ಭವಿಸುತಿತ್ತು. ನನ್ನಾಸೆಯನ್ನು ಸಾಕಾರಗೊಳಿಸಿಕೊಳ್ಳಲು ಸೂಕ್ತವಾದ ಮಾಧ್ಯಮವೆಂದರೆ ರಾಜಕೀಯ ಅನ್ನೋದನ್ನು ನಾನು ಮನಗಂಡಿದ್ದೇನೆ,’ ಎಂದು ಸಿಂಗ್ ಸೋಮವಾರ ಮಾಧ್ಯಮಗಳಿಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

ಉತ್ತರ ಪ್ರದೇಶ ಪೊಲೀಸ ಸೇವೆಯಲ್ಲಿದ್ದಾಗ ಸಿಂಗ್ ಅವರು ಸೂಪರ್ ಕಾಪ್ ಅನಿಸಿಕೊಂಡಿದ್ದರು. ಮಹಿಳೆಯರು ಮತ್ತು ಮಕ್ಕಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೆ ಬೇಗ ನ್ಯಾಯ ದೊರಕಿಸಿ ಕೊಡಲು ಅವರು ಪ್ರಯತ್ನಿಸುತ್ತಿದ್ದರು.

‘ಪೊಲೀಸ್ ವ್ಯವಸ್ಥೆಯಲ್ಲಿ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶ್ವಾಸ ಕಳೆದುಕೊಳ್ಳಬಾರದೆಂಬ ಗುರಿಯೊಂದಿಗೆ ಕೆಲಸ ಮಾಡಿದೆ. ಮಕ್ಕಳು, ಮಹಿಳೆಯರು ಮತ್ತು ಯುವಕರನ್ನು ಅಪರಾಧ ಮತ್ತು ಆಪರಾಧಿಗಳಿಂದ ರಕ್ಷಿಸಿದ್ದು, ಉತ್ತರ ಪ್ರದೇಶದಲ್ಲಿ ಒಂದು ಉದ್ಯಮವಾಗಿ ಬೆಳೆಯಲಾರಂಭಿಸಿದ್ದ ಅಪಹರಣದ ಅಪರಾಧಗಳನ್ನು ಮಟ್ಟ ಹಾಕಿದ್ದು ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಯಶಸ್ವೀಯಾಗಿ ಅಳವಡಿಸಿದ್ದು-ಹೀಗೆ ಪ್ರತಿದಿನ ಏನಾದರೂ ಒಂದು ಹೊಸತನ್ನು, ಮಾಡುವ ಉಮೇದಿ ನನ್ನಲ್ಲಿರುತ್ತಿತ್ತು,’ ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:   Explainer: ‘ಉತ್ತರ ಪ್ರದೇಶ ಈಗ ‘ಸೈಫಈ’ಗೆ ಕುಖ್ಯಾತಿ ಪಡೆದಿಲ್ಲ’ ಎಂದ ಯೋಗಿ ಆದಿತ್ಯನಾಥ್; ಏನಿದು ‘ಸೈಫಈ? ಕುಖ್ಯಾತಿಯೇಕೆ? ಇಲ್ಲಿದೆ ವಿವರ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ