ಆರೋಗ್ಯದಲ್ಲಿ ಮತ್ತೆ ಏರುಪೇರು; ಅಮೆರಿಕಾಗೆ ಹಾರಿದ ತಲೈವಾ ರಜನಿಕಾಂತ್​

| Updated By: ಸಾಧು ಶ್ರೀನಾಥ್​

Updated on: Jan 02, 2021 | 9:49 AM

ಕೆಲದಿನಗಳ ಹಿಂದೆ ರಜನಿ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ರು. ತಮ್ಮ ನೆಚ್ಚಿನ ನಟ ದಿಢೀರ್ ಅಂತಾ ಆಸ್ಪತ್ರೆ  ಸೇರಿದ್ದು ಎಲ್ಲರಿಗೂ ಶಾಕ್ ನೀಡಿತ್ತು. ಆರೋಗ್ಯದಲ್ಲಿ ಏರುಪೇರಾದ ಕಾರಣ ರಜನಿಕಾಂತ್ ಪರದಾಡಿದ್ದರು. ಈಗಲೂ ರಜನಿಕಾಂತ್ ಆರೋಗ್ಯ ಸುಧಾರಿಸಿಲ್ಲ. ಹೀಗಾಗಿಯೇ ಸದ್ಯ ರಜನಿ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಗೆ ತೆರಳಿದ್ದಾರಂತೆ.

ಆರೋಗ್ಯದಲ್ಲಿ ಮತ್ತೆ ಏರುಪೇರು; ಅಮೆರಿಕಾಗೆ ಹಾರಿದ ತಲೈವಾ ರಜನಿಕಾಂತ್​
ಸೂಪರ್​ ಸ್ಟಾರ್ ರಜನಿಕಾಂತ್ ಅಮೆರಿಕಕ್ಕೆ ಪಯಣ..
Follow us on

ಚೆನ್ನೈ: ತಮಿಳರ ಪಾಲಿನ ತಲೈವಾ, ಭಾರತದ ಸಿನಿ ರಂಗದ ಅನಭಿಶಕ್ತ ದೊರೆಯಾಗಿರುವ ಸೂಪರ್​ ಸ್ಟಾರ್ ರಜನಿಕಾಂತ್ ಅಮೆರಿಕಕ್ಕೆ ಹಾರಿದ್ದಾರೆ. ಇಷ್ಟಕ್ಕೂ ಸೂಪರ್ ಸ್ಟಾರ್ ರಜನಿಕಾಂತ್ ಅಮೆರಿಕಕ್ಕೆ ಹೋಗಿದ್ದಾದ್ರೂ ಏಕೆ..? ಇದರ ಹಿಂದಿನ ಉದ್ದೇಶವಾದ್ರೂ ಏನು ಅಂದ್ರೆ..

ಕೆಲದಿನಗಳ ಹಿಂದೆ ರಜನಿ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ರು. ತಮ್ಮ ನೆಚ್ಚಿನ ನಟ ದಿಢೀರ್ ಅಂತಾ ಆಸ್ಪತ್ರೆ  ಸೇರಿದ್ದು ಎಲ್ಲರಿಗೂ ಶಾಕ್ ನೀಡಿತ್ತು. ಆರೋಗ್ಯದಲ್ಲಿ ಏರುಪೇರಾದ ಕಾರಣ ರಜನಿಕಾಂತ್ ಪರದಾಡಿದ್ದರು. ಈಗಲೂ ರಜನಿಕಾಂತ್ ಆರೋಗ್ಯ ಸುಧಾರಿಸಿಲ್ಲ. ಹೀಗಾಗಿಯೇ ಸದ್ಯ ರಜನಿ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಾಗೆ ತೆರಳಿದ್ದಾರಂತೆ.

ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಹೊರ ಬಂದಿದ್ರೂ..
ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಹೈದ್ರಾಬಾದ್​ನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ರು. ಈ ಮಧ್ಯೆ ರಕ್ತದೊತ್ತಡ ಏರುಪೇರಾಗಿದ್ದು, ರಜನಿ ಆರೋಗ್ಯ ಸುಧಾರಿಸಿರಲಿಲ್ಲ. ಚಿಕಿತ್ಸೆ ಪಡೆದು ಇತ್ತೀಚಿಗಷ್ಟೇ ಆಸ್ಪತ್ರೆಯಿಂದ ಹೊರ ಬಂದಿದ್ರೂ, ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ರಜನಿ ಮತ್ತೆ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

ಅಂದಹಾಗೆ ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಬೇಕಿದ್ದ ತಲೈವಾಗೆ ಆರೋಗ್ಯ ಕೈಕೊಟ್ಟಿದೆ. ಇದು ಅವ್ರಿಗೆ ಅತೀವ ನೋವುಂಟು ಮಾಡಿದೆ. ಇದು ರಜನಿಕಾಂತ್ ಅಭಿಮಾನಿಗಳಿಗೂ ನೋವು ತಂದಿದ್ದು, ನೆಚ್ಚಿನ ನಟನಿಗೆ ಏನಾಯ್ತೋ ಅಂತಾ ಚಿಂತೆಯಲ್ಲಿದ್ದಾರೆ. ಇಷ್ಟೆಲ್ಲದರ ನಡುವೆ ಸದ್ಯಕ್ಕೆ ರಾಜಕೀಯದಿಂದ ದೂರ ಉಳಿಯುವ ನಿರ್ಧಾರವನ್ನ ರಜನಿ ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡಿದಂತಾಗಿದೆ.

ಒಟ್ನಲ್ಲಿ ರಜನಿ ಅನಾರೋಗ್ಯದ ವಿಚಾರ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಆದ್ರೆ ರಜನಿ ಸದ್ಯಕ್ಕೆ ರಾಜಕೀಯದಿಂದ ಮಾತ್ರ ರೆಸ್ಟ್ ಪಡೆಯಲಿದ್ದಾರೆ. ಆದರೆ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ. ಅಣ್ಣಾತೆ ಚಿತ್ರದ ಶೂಟಿಂಗ್ ನಡೀತಿದ್ದು, ರಜನಿ ಸಂಪೂರ್ಣ ಗುಣಮುಖರಾದ ಬಳಿಕ ಶೂಟಿಂಗ್ ಮುಂದುವರೆಯಲಿದೆ.

Published On - 9:41 am, Sat, 2 January 21