Ram Mandir: ಅಯೋಧ್ಯೆಯ ರಾಮ ಮಂದಿರ ಹೇಗಿರುತ್ತದೆ ಎಂಬ ಕುತೂಹಲವಾ?; 3ಡಿ ವಿಡಿಯೋ ಇಲ್ಲಿದೆ
Ayodhya Ram Temple: ರಾಮಜನ್ಮಭೂಮಿಯ ಭವ್ಯವಾದ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ನಂತರ ಹೇಗೆ ಕಾಣುತ್ತದೆ ಎಂದು ಕುತೂಹಲದಿಂದ ತಿಳಿಯಲು ಬಯಸುತ್ತಿರುವ ಭಕ್ತರಿಗಾಗಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ 3D ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಅಯೋಧ್ಯೆ: 2023ರ ವೇಳೆಗೆ ಅಯೋಧ್ಯೆಯ ರಾಮ ಮಂದಿರದ (Ram Temple) ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಮುಂದಿನ ವರ್ಷದಿಂದ ಭಕ್ತರು ರಾಮ ಮಂದಿರದ ದರ್ಶನ ಪಡೆಯಬಹುದು. ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಇಡೀ ದೇಶದ ಹಿಂದೂಗಳು ವರ್ಷಗಳಿಂದ ಕಾಯುತ್ತಿರುವ ರಾಮಜನ್ಮಭೂಮಿಯ ಭವ್ಯವಾದ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ನಂತರ ಹೇಗೆ ಕಾಣುತ್ತದೆ ಎಂದು ಕುತೂಹಲದಿಂದ ತಿಳಿಯಲು ಬಯಸುತ್ತಿರುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ 3D ವೀಡಿಯೊವನ್ನು ಬಿಡುಗಡೆ ಮಾಡಿದೆ.
ರಾಮಜನ್ಮಭೂಮಿಯ ಮುನ್ನೋಟದ ವಿಡಿಯೋ ಭಾರತದ ಭೂಪಟದಲ್ಲಿ ಭವ್ಯವಾದ ದೇವಾಲಯದ ಹೊರನೋಟವನ್ನು ತೋರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ರಾಮನ ದೇವಾಲಯಕ್ಕಾಗಿ ಗುರುತಿಸಲಾದ 67 ಎಕರೆ ಭೂಮಿಯ ಪಕ್ಷಿನೋಟವನ್ನು ನೋಡಬಹುದು. ಶ್ರೀರಾಮ ಮಂದಿರದ ಮುಖ್ಯ ದೇವಾಲಯದ ಎಲ್ಲಾ 4 ಕಡೆಗಳಲ್ಲಿ ಹಲವಾರು ಚಿಕ್ಕ ದೇವಾಲಯಗಳು ಕೂಡ ಇವೆ. ಈ ರಾಮ ಮಂದಿರದ ಸುತ್ತಲೂ ಹಚ್ಚ ಹಸಿರಿನ ಹುಲ್ಲುಹಾಸುಗಳು ಇರಲಿವೆ. ಒಳಗಿರುವ ಮುಖ್ಯ ದೇವಾಲಯದಲ್ಲಿ ಕಂಬಗಳು ಮತ್ತು ಗೋಡೆಗಳು ಅಮೃತಶಿಲೆಯ ನೆಲಹಾಸು ಮತ್ತು ಮರಳುಗಲ್ಲಿನ ಗೋಡೆಗಳೊಂದಿಗೆ ದೇವರು ಮತ್ತು ದೇವತೆಗಳ ವಿನ್ಯಾಸಗಳನ್ನು ಹೊಂದಿವೆ ಎಂದು ತ್ರೀಡಿ ವಿಡಿಯೋದಲ್ಲಿ ತೋರಿಸಲಾಗಿದೆ.
ಕಳೆದ ವರ್ಷ ಬಿಡುಗಡೆಯಾದ ದೇವಾಲಯದ ಅಂತಿಮ ನೀಲನಕ್ಷೆಯ ಪ್ರಕಾರ, ರಾಮ ಜನ್ಮಭೂಮಿ ಆವರಣದಲ್ಲಿ ವಿವಿಧ ದೇವತೆಗಳ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ದೇವತೆಗಳಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರ ದೇವಸ್ಥಾನಗಳನ್ನು ನಿರ್ಮಿಸಲಾಗುವುದು. ರಾಮ ಮಂದಿರದ ನೆಲಮಹಡಿಯಲ್ಲಿ 160 ಅಂಕಣಗಳು, ಮೊದಲ ಮಹಡಿಯಲ್ಲಿ 132 ಅಂಕಣಗಳು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳು ಇರಲಿವೆ. ಈ ದೇವಾಲಯದ ನಿರ್ಮಾಣದಲ್ಲಿ ಉಕ್ಕು ಅಥವಾ ಇಟ್ಟಿಗೆಗಳನ್ನು ಬಳಸಲಾಗುವುದಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಈ ಹಿಂದೆ ತಿಳಿಸಿತ್ತು. ಮೂರು ಅಂತಸ್ತಿನ ರಚನೆಯು ಐದು ಮಂಟಪಗಳನ್ನು ಹೊಂದಿರುತ್ತದೆ.
आप सबको निश्चित ही यह उत्कंठा रहती होगी कि प्रभु श्रीराम की जन्मभूमि पर भव्य मंदिर बनने पर कैसा दिखेगा।
आपको इस भव्य और दिव्य कृति का पूर्वाभास देने के लिए हमने एक 3D वीडियो के माध्यम से उसे प्रदर्शित करने का प्रयास किया है।
जय श्री राम!https://t.co/FiBNYJgooo
— Shri Ram Janmbhoomi Teerth Kshetra (@ShriRamTeerth) February 13, 2022
ರಾಮ ಮಂದಿರ ಸಂಕೀರ್ಣವು ಯಾತ್ರಿಕರ ಅನುಕೂಲ ಕೇಂದ್ರ, ಸಂಶೋಧನಾ ಕೇಂದ್ರ, ಸಭಾಂಗಣ, ವಸ್ತುಸಂಗ್ರಹಾಲಯ, ದಾಖಲೆಗಳು, ಗೋಶಾಲೆ, ಧಾರ್ಮಿಕ ಕ್ರಿಯೆಗಳಿಗೆ ಸ್ಥಳ, ಅರ್ಚಕರಿಗೆ ಕೊಠಡಿಗಳು ಮತ್ತು ಆಡಳಿತ ಕಟ್ಟಡವನ್ನು ಹೊಂದಲು ಯೋಜಿಸಿದೆ. ಮುಖ್ಯ ದೇವಾಲಯದ ನಿರ್ಮಾಣಕ್ಕೆ ರಾಜಸ್ಥಾನದಿಂದ ಸುಮಾರು 4 ಲಕ್ಷ ಅಡಿ ಕಲ್ಲು ಮತ್ತು ಅಮೃತಶಿಲೆಯನ್ನು ತರಿಸಲಾಗುತ್ತಿದೆ.
ಮೂಲಗಳ ಪ್ರಕಾರ, ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯವು 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. 2025ರ ವೇಳೆಗೆ ಭವ್ಯ ರಾಮ ಮಂದಿರದ ನಿರ್ಮಾಣ ಕೂಡ ಪೂರ್ಣಗೊಳ್ಳಲಿದೆ. ಮಗುವಿನ ರೂಪದಲ್ಲಿ ಗರ್ಭಗುಡಿಯಲ್ಲಿ ಶ್ರೀ ರಾಮನನ್ನು ಪ್ರತಿಷ್ಟಾಪಿಸಲಾಗುವುದು. ಮೊದಲ ಮಹಡಿಯಲ್ಲಿ ರಾಮನ ಆಸ್ಥಾನ ಇರುತ್ತದೆ. ಇಲ್ಲಿ ಶ್ರೀರಾಮನ ಜೊತೆಯಲ್ಲಿ ಸೀತಾ ಮಾತೆ ವಿಗ್ರಹ ಕೂಡ ಇರಲಿದೆ. ಒಟ್ಟು 110 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 1,000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು. ರಾಮ ಮಂದಿರ ನಿರ್ಮಾಣದಲ್ಲಿ ಸ್ಟೀಲ್ ಬಳಸುತ್ತಿಲ್ಲ. ದೇವಸ್ಥಾನದಲ್ಲಿ ಉಕ್ಕಿನ ಬದಲು ತಾಮ್ರವನ್ನು ಬಳಸಲಾಗುವುದು.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ನೀಡಿದ 22 ಕೋಟಿ ಮೊತ್ತದ 15 ಸಾವಿರ ಚೆಕ್ ಬೌನ್ಸ್
ಒಂದು ಎಕರೆ ಜಾಗ ಕೊಡುತ್ತೇನೆ.. ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಿ -ಸಿದ್ದರಾಮಯ್ಯಗೆ ರೈತನ ನೇರ ಸವಾಲ್