ನವದೆಹಲಿ, ಮೇ 3: ಪಾಕಿಸ್ತಾನದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ರಾಮಮಂದಿರಕ್ಕೆ (Ram Temple) ಪಾಕಿಸ್ತಾನದಿಂದ 200 ಮಂದಿ ಭಕ್ತರು ಭೇಟಿ ನೀಡಲಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದ ಈ ಜನರು ಬಾಲರಾಮನ ದರ್ಶನ ಪಡೆದು ಗೌರವಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಈ 200 ಜನರು ಪಾಕಿಸ್ತಾನದಿಂದ ಪ್ರಯಾಣ ಬೆಳೆಸಿದ್ದಾರೆ. ವರದಿಗಳ ಪ್ರಕಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಹೊರಟಿರುವ ಈ ಗುಂಪು ಪ್ರಯಾಗ್ರಾಜ್ ನಗರದಿಂದ (ಔರಂಗಾಬಾದ್) ಅಯೋಧ್ಯೆಗೆ ಬಸ್ ಮೂಲಕ ತೆರಳಲಿದೆಯಂತೆ. ಪಾಕಿಸ್ತಾನದ ಈ 200 ಮಂದಿ ಸಿಂಧಿ ಜನರ ಪ್ರಯಾಣದಲ್ಲಿ ಭಾರತೀಯ ಸಿಂಧಿ ಸಮುದಾಯದ 150 ಮಂದಿಯೂ ಜೊತೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಈ ಮಾಹಿತಿಯನ್ನು ರಾಮಮಂದಿರ ಟ್ರಸ್ಟ್ ಅಧಿಕಾರಿಗಳು ನೀಡಿದ್ದಾರೆ.
ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಯೋಧ್ಯೆಯಲ್ಲಿರುವ ರಾಮ್ ಕೀ ಪೈಡಿ ಎಂಬ ಘಾಟ್ ಪ್ರದೇಶದಲ್ಲಿ ಈ ಪಾಕ್ ಭಕ್ತರ ನಿಯೋಗವನ್ನು ಸ್ವಾಗತ ಮಾಡಲಿದ್ದಾರೆ. ಅದಕ್ಕಾಗಿ ವಿಶೇಷ ಕಾರ್ಯಕ್ರಮ ಯೋಜಿಸಲಾಗಿದೆ.
ಇದನ್ನೂ ಓದಿ: 370ನೇ ವಿಧಿ ರದ್ದುಪಡಿಸಿ ಸಂವಿಧಾನಕ್ಕೆ ಶ್ರೇಷ್ಟ ಸೇವೆ ಸಲ್ಲಿಸಿದ್ದೇನೆ; ಪ್ರಧಾನಿ ಮೋದಿ
ಕೇಂದ್ರ ಸರ್ಕಾರಕ್ಕೆ ಸೇರಿದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಸಿಂಧಿ ವಿಕಾಸ್ ಪರಿಷದ್ನ ಸದಸ್ಯ ವಿಶ್ವಪ್ರಕಾಶ್ ರೂಪನ್ ಪ್ರಕಾರ ಪಾಕಿಸ್ತಾನದಿಂದ ಬರುತ್ತಿರುವ ಸಿಂಧಿಗಳ ನಿಯೋಗವು ಮೊದಲಿಗೆ ಭರತ್ ಕುಂಡ್ನಲ್ಲಿ ಸೇರಲಿದ್ದಾರೆ. ಬಳಿಕ ಗುಪ್ತರ್ ಘಾಟ್ಗೆ ಬರಲಿದ್ದಾರೆ. ಉದಾಸಿನ್ ಋಷಿ ಆಶ್ರಮ್ ಮತ್ತು ಶಬರಿ ರಸೋಯ್ನಲ್ಲಿ ಈ ನಿಯೋಗಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಇಂದು ಶುಕ್ರವಾರ ಸಂಜೆ ರಾಮ್ ಕೀ ಪೈಡಿಯಲ್ಲಿ ನಡೆಯಲಿರುವ ಸರಯೂ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಯೋಧ್ಯೆಯ ಸಿಂಧಿ ಧಾಮ್ ಆಶ್ರಮ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಭಾರತದ ವಿವಿಧ ಸಿಂಧಿ ಸಂಘಟನೆಗಳು ಪಾಕಿಸ್ತಾನದಿಂದ ಬಂದಿರುವ ತಮ್ಮ ಬಾಂಧವರನ್ನು ಸ್ವಾಗತಿಸಲಿದ್ದಾರೆ. ಸಂತ್ ಸಾದಾ ರಾಮ್ ದರ್ಬಾರ್ ಪೀಠದ ಮುಖ್ಯಸ್ಥ ಯುದಿಷ್ಠಿರ್ ಲಾಲ್ ಕೂಡ ಈ ವೇಳೆ ಇರಲಿದ್ದಾರೆ.
ಇದನ್ನೂ ಓದಿ: 25 ವರ್ಷದ ರಾಜಕೀಯದಲ್ಲಿ ನನಗೆ ಒಂದೂ ಕಪ್ಪು ಚುಕ್ಕಿ ಅಂಟಿಲ್ಲ; ಪ್ರಧಾನಿ ಮೋದಿ
ಈ ಪಾಕ್ ಸಿಂಧಿ ಸಮುದಾಯದ ರಾಮಭಕ್ತರು ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಿದ ಬಳಿಕ ಇಂದು ರಾತ್ರಿ (ಮೇ 3) ಲಕ್ನೋಗೆ ಹೋಗಿ ಅಲ್ಲಿಂದ ಛತ್ತೀಸ್ಗಡದ ರಾಜಧಾನಿ ರಾಯಪುರಕ್ಕೆ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ