AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆನಿಜುವೆಲಾ ಅಧ್ಯಕ್ಷರನ್ನು ಅಮೆರಿಕದವರು ಸೆರೆಹಿಡಿದ ರೀತಿ ಮುಂಬೈ ದಾಳಿ ಮಾಸ್ಟರ್​ಮೈಂಡನ್ನೂ ಹಿಡಿಯಿರಿ: ಒವೈಸಿ ಆಗ್ರಹ

Asaduddin Owaisi asks PM Modi to capture Mumbai Attack Mastermind in Pakistan: ಅಮೆರಿಕದ ಮಿಲಿಟರಿ ಪಡೆಗಳು ವೆನಿಜುವೆಲಾ ಅಧ್ಯಕ್ಷರನ್ನು ಹಿಡಿದ ರೀತಿಯಲ್ಲಿ ಮುಂಬೈ ದಾಳಿಯ ಸಂಚುಕೋರರನ್ನು ಹಿಡಿಯಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ. ಭಾರತವು ತನ್ನ ಸೇನೆಯನ್ನು ಪಾಕಿಸ್ತಾನಕ್ಕೆ ನುಗ್ಗಿಸಿ, ಉಗ್ರ ಹಫೀಜ್​ನನ್ನಾಗಲೀ, ಲಷ್ಕರೆಯ ರಕ್ಕಸರನ್ನೇ ಆಗಲೀ ಸೆರೆಹಿಡಿಯಬೇಕು ಎಂದಿದ್ದಾರೆ. ಟ್ರಂಪ್​ಗೆ ಸಾಧ್ಯವಾಗುತ್ತೆಂದಾದರೆ ಮೋದಿಜಿಗೂ ಸಾಧ್ಯ ಎಂದು ಅಸಾದುದ್ದೀನ್ ವ್ಯಂಗ್ಯ ಕೂಡ ಮಾಡಿದ್ದಾರೆ.

ವೆನಿಜುವೆಲಾ ಅಧ್ಯಕ್ಷರನ್ನು ಅಮೆರಿಕದವರು ಸೆರೆಹಿಡಿದ ರೀತಿ ಮುಂಬೈ ದಾಳಿ ಮಾಸ್ಟರ್​ಮೈಂಡನ್ನೂ ಹಿಡಿಯಿರಿ: ಒವೈಸಿ ಆಗ್ರಹ
ಅಸಾದುದ್ದೀನ್ ಒವೈಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 04, 2026 | 7:56 PM

Share

ನವದೆಹಲಿ, ಜನವರಿ 4: ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ (Nocolas Maduro) ಅವರನ್ನು ಅಮೆರಿಕದ ಭದ್ರತಾ ಪಡೆಗಳು ಶನಿವಾರ ಬೆಳಗ್ಗೆ ಸೆರೆಹಿಡಿದಿರುವ ಘಟನೆಗೆ ಜಾಗತಿಕವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕದಲ್ಲಿರುವ ಪರಿಸ್ಥಿತಿ ಮತ್ತು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ (Asaduddin Owaisi) ಅವರು ನಿಲೋಲಾಸ್ ಮಡುರೊ ಬಂಧಿಸಿದ ರೀತಿಯಲ್ಲೇ 2009ರ ಮುಂಬೈ ದಾಳಿ ಘಟನೆಯ ಸಂಚುಕೋರರನ್ನೂ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

ಚುನಾವಣಾ ಸಮಾವೇಶವೊಂದರಲ್ಲಿ ಭಾಷಣ ಮಾಡುತ್ತಿದ್ದ ಒವೈಸಿ, ಅಮೆರಿಕದವರು ವೆನಿಜುವೆಲಾ ಮೇಲೆ ಏರ್ ಸ್ಟ್ರೈಕ್ ಮಾಡಿ ಅದರ ಅಧ್ಯಕ್ಷ ನಿಕೋಲಾಸ್ ಮಡುರೊ ಅವರನ್ನು ಸೆರೆಹಿಡಿದಿದೆ. ಆದರೆ, ಮುಂಬೈ ದಾಳಿ ಮಾಸ್ಟರ್​ಮೈಡ್​ಗಳನ್ನು ಅದೇ ರೀತಿ ಭಾರತಕ್ಕೆ ಸೆರೆಹಿಡಿಯಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಡೆಗಳು ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಅವರ ದೇಶದಲ್ಲೇ ಸೆರೆ ಹಿಡಿದು ಅಮೆರಿಕಕ್ಕೆ ಕರೆದೊಯ್ದಿದ್ದಾರೆ. ವೆನಿಜುವೆಲಾ ಅಧ್ಯಕ್ಷರನ್ನು ಅವರ ದೇಶದಿಂದಲೇ ಟ್ರಂಪ್ ಅಪಹರಿಸಬಲ್ಲರೆಂದರೆ ನೀವು ಕೂಡ ಪಾಕಿಸ್ತಾನಕ್ಕೆ ಹೋಗಿ ಮುಂಬೈ ಉಗ್ರ ದಾಳಿ ಘಟನೆಯ ಮಾಸ್ಟರ್​ಮೈಂಡ್​ನನ್ನೂ ಹಿಡಿದು ಭಾರತಕ್ಕೆ ತರಬಹುದಲ್ಲ’ ಎಂದು ಹೈದರಾಬಾದ್​ನ ಸಂಸದರಾದ ಅವರು ಒತ್ತಾಯಿಸಿದ್ದಾರೆ.

‘ಮೋದಿಜಿ, ಪಾಕಿಸ್ತಾನಕ್ಕೆ ಸೇನೆಗಳನ್ನು ನುಗ್ಗಿಸಿ ಮುಂಬೈ ದಾಳಿಯ ಸಂಚುಕೋರ ಮಸೂದ್ ಅಝರ್ ಆಗಲೀ ಅಥವಾ ಲಷ್ಕರೆ ತೈಯಬಾದ ರಕ್ಕರೇ ಆಗಲೀ ಸೆರೆಹಿಡಿದು ಭಾರತಕ್ಕೆ ಕರೆತನ್ನಿ ಎಂದು ನಾವು ಹೇಳುತ್ತಿದ್ದೇವೆ. ಟ್ರಂಪ್​ಗೆ ಸಾಧ್ಯವಾಗುತ್ತೆ ಎಂದಾದರೆ ಮೋದಿಜಿ ನೀವೇನೂ ಕಡಿಮೆ ಅಲ್ಲ. ನೀವೂ ಕೂಡ ಈ ಕೆಲಸ ಮಾಡಬಹುದು’ ಎಂದು ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯ ಮಿಶ್ರಿತ ವಾಗ್ದಾಳಿ ಮಾಡಿದ್ದಾರೆ ಒವೈಸಿ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಶನಿವಾರ ತಡರಾತ್ರಿ ಅಮೆರಿಕ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವೆನಿಜುವೆಲಾ ಅಧ್ಯಕ್ಷರ ಮಿಲಿಟರಿ ಬೇಸ್​ನಲ್ಲಿರುವ ಅವರ ಮನೆಗೆ ನುಗ್ಗಿ ನಿಕೋಲಾಸ್ ಮಡುರೊ ಮತ್ತವರ ಪತ್ನಿಯನ್ನು ಸೆರೆ ಹಿಡಿದಿದೆ. ನ್ಯೂಯಾರ್ಕ್​ಗೆ ಕರೆದೊಯ್ಯಲಾಗಿದ್ದು, ಕೋರ್ಟ್​ನಲ್ಲಿ ಹಾಜರುಪಡಿಸಿ ನಂತರ ಇದೀಗ ಬ್ರೂಕ್​ಲಿನ್​ನ ಮೆಟ್ರೊಪೊಲಿಟನ್ ಜೈಲಿನಲ್ಲಿ ಇಡಲಾಗಿದೆ.

ಇದೇ ವೇಳೆ, ನಿಕೋಲಾಸ್ ಮಡುರೊ ಜಾಗಕ್ಕೆ ವೆನಿಜುವೆಲಾಗೆ ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷ ಡೆಲ್ಸಿ ರಾಡ್ರಿಗೆಸ್ ಅವರಿಗೆ ಅಲ್ಲಿಯ ಕೋರ್ಟ್ ಜವಾಬ್ದಾರಿ ಕೊಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Sun, 4 January 26

ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!