Droupadi Murmu Speech: 74ನೇ ಗಣರಾಜ್ಯೋತ್ಸವ ಮುನ್ನಾ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
Republic Day Speech: ಜ 25ರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭಾಷಣವು ದೇಶದ ಎಲ್ಲ ದೂರದರ್ಶನ ಹಾಗೂ ಆಕಾಶವಾಣಿ (AIR) ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu Speech) ಅವರು ಇಂದು (ಜ 25) ದೇಶವನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಭಾಷಣ (Republic Day Speech) ಮಾಡಲಿದ್ದಾರೆ. ಸಂಜೆ 7 ಗಂಟೆಗೆ ರಾಷ್ಟ್ರಪತಿ ಭಾಷಣವು ದೇಶದ ಎಲ್ಲ ದೂರದರ್ಶನ ಹಾಗೂ ಆಕಾಶವಾಣಿ (AIR) ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ. ರಾಷ್ಟ್ರಪತಿ ಮೊದಲು ಹಿಂದಿಯಲ್ಲಿ ನಂತರ ಇಂಗ್ಲಿಷ್ನಲ್ಲಿ ಪ್ರಸಾರವಾಗಲಿದೆ. ನಂತರ ಪ್ರಾದೇಶಿಕ ಭಾಷೆಗಳಲ್ಲಿ ಭಾಷಣ ಪ್ರಸಾರವಾಗಲಿದೆ. ಆಕಾಶವಾಣಿಯಲ್ಲಿ 7:30ಕ್ಕೆ ಪ್ರಾದೇಶಿಕ ಭಾಷೆಯಲ್ಲಿ ಭಾಷಣ ಪ್ರಸಾರವಾಗಲಿದೆ ಎಂದು ರಾಷ್ಟ್ರಪತಿ ಭವನವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಭಾರತವು 74ನೇ ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸುತ್ತಿದೆ.
ಕರ್ತವ್ಯಪಥದಲ್ಲಿ ಸಶಸ್ತ್ರಪಡೆಗಳಿಂದ ವೈಭವದ ಪರೇಡ್ ನಡೆಯಲಿದೆ. ಸೇನೆ, ಪ್ಯಾರಾ ಮಿಲಿಟರಿ, ಎನ್ಸಿಸಿ ಸೇರಿದಂತೆ ಹಲವು ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ರವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ವಿವಿಧ ಇಲಾಖೆಗಳ ಟ್ಯಾಬ್ಲೊಗಳು ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿರಲಿದೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೋಟಾರ್ ಸೈಕಲ್ ಕಸರತ್ತು, ವೈಮಾನಿಕ ಕಸರತ್ತು, ಸೇನಾ ಬ್ಯಾಂಡ್ನಿಂದ ಬೀಟಿಂಗ್ ರಿಟ್ರೀಟ್ ಗಣರಾಜ್ಯೋತ್ಸವದ ಮೆರುಗು ಹೆಚ್ಚಿಸಲಿದೆ.
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈ ವರ್ಷ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಈಜಿಪ್ಟ್ ಸರ್ಕಾರದ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಭಾರತ ಮತ್ತು ಈಜಿಪ್ಟ್ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಆರಂಭವಾಗಿ ಇದು 75ನೇ ವರ್ಷ. ಈಜಿಪ್ಟ್ ಅಧ್ಯಕ್ಷರ ಭಾರತ ಭೇಟಿಯು ಈ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಭಾರತವು ಈ ಬಾರಿ ‘ಜಿ-20’ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿದೆ. ಈಜಿಪ್ಟ್ಗೆ ಅತಿಥಿ ದೇಶವಾಗಿ ಭಾರತವು ಆಹ್ವಾನ ನೀಡಿದೆ.
ಈ ಬಾರಿಯ ಗಣರಾಜ್ಯೋತ್ಸವ ಪ್ರತಿ ವರ್ಷಕ್ಕಿಂತ
ಈ ವರ್ಷದ ಗಣರಾಜ್ಯೋತ್ಸವವು ಪ್ರತಿ ವರ್ಷಕ್ಕಿಂತ ಹಲವರು ರೀತಿಯಲ್ಲಿ ಭಿನ್ನವಾಗಿರಲಿದೆ. ಮೊದಲ ವಿಷಯವೆಂದರೆ ಈ ಬಾರಿ ಪರೇಡ್ ರಾಜಪಥದಲ್ಲಿ ನಡೆಯದೆ ಕರ್ತವ್ಯ ಪಥದಲ್ಲಿ ನಡೆಯಲಿದೆ. ಇದಲ್ಲದೆ ಕೂಲಿ ಕಾರ್ಮಿಕರು, ತರಕಾರಿ ಮಾರಾಟಗಾರರು, ಆಟೋರಿಕ್ಷಾ ಡ್ರೈವರ್ಗಳು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೊರೊನಾಗೂ ಮೊದಲು 1.25 ಲಕ್ಷ ಮಂದಿಗೆ ಮೆರವಣಿಗೆಯನ್ನು ನೋಡಲು ಅವಕಾಶ ನೀಡಲಾಗುತ್ತಿತ್ತು ಆದರೆ ಇದೇ ಮೊದಲ ಬಾರಿಗೆ 32 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದೇ ಮೊದಲ ಬಾರಿಗೆ ಸಮಾರಂಭಕ್ಕೆ ಆಗಮಿಸುವ ಎಲ್ಲಾ ಅಧಿಕಾರಿಗಳಿಗೆ ಆನ್ಲೈನ್ ಮೂಲಕ ಆಹ್ವಾನ ಕಳುಹಿಸಲಾಗಿದೆ.
ಇದೇ ಮೊದಲ ಬಾರಿಗೆ ವಾಯುಪಡೆಯ ಗರುಡ ವಿಶೇಷ ಪಡೆ ಕೂಡ ಕರ್ತವ್ಯಪಥದಲ್ಲಿ ಸಾಗಲಿದೆ. ಸ್ಕ್ವಾಡ್ರನ್ ಲೀಡರ್ ಪಿಎಸ್ ಜೈತಾವತ್ ಇದು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಕೆಲಸಗಾರರು, ಕರ್ತವ್ಯ ಮಾರ್ಗ ನಿರ್ವಾಹಕರು, ತರಕಾರಿ ಮಾರಾಟಗಾರರು, ರಿಕ್ಷಾ ಚಾಲಕರು, ಸಣ್ಣ ಕಿರಾಣಿ ಅಂಗಡಿ ಮಾಲೀಕರು, ಹಾಲು-ಬೂತ್ ಕೆಲಸಗಾರರು ಮತ್ತು ಶಾಲಾ ಬ್ಯಾಂಡ್ ಸ್ಪರ್ಧೆಯ ಅಂತಿಮ ಸ್ಪರ್ಧಿಗಳ ಎಂಟು ತಂಡಗಳನ್ನು ಒಳಗೊಂಡಿದೆ.
ಜನವರಿ 26 ರಂದು ಭಾರತದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಈಜಿಪ್ಟ್ ಸೇನೆಯ ಸೇನಾ ತುಕಡಿಯೂ ಪಾಲ್ಗೊಳ್ಳಲಿದೆ. ಈಜಿಪ್ಟ್ ಸೇನಾ ತುಕಡಿಯಲ್ಲಿ 144 ಸಿಬ್ಬಂದಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Republic Day 2023 Dressing Ideas: ಗಣರಾಜ್ಯೋತ್ಸವದ ದಿನ ಸ್ಪೆಷಲ್ ಆಗಿ ಕಾಣಬೇಕಾ?; ಇಲ್ಲಿವೆ ಕೆಲವು ಡ್ರೆಸಿಂಗ್ ಐಡಿಯಾ
ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಮತ್ತಷ್ಟು ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:10 am, Wed, 25 January 23