Republic Day 2024: ಮೊದಲ ಬಾರಿಗೆ ಪರೇಡ್​​​​ನಲ್ಲಿ ಭಾಗವಹಿಸಲು ಮಹಿಳಾ ಪೊಲೀಸ್​​​​ ತುಕಡಿಗೆ ಅವಕಾಶ

ಈ ಬಾರಿಯ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ದೆಹಲಿಯ ಮಹಿಳಾ ಪೊಲೀಸ್​​​ ತುಕಡಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸ್​​​ ಸಿಬ್ಬಂದಿಗಳು ಗಣರಾಜೋತ್ಸವ ಪರೇಡ್​​​​ ಭಾಗವಹಿಸುತ್ತಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿ ಶ್ವೇತಾ ಕೆ ಸುಗತನ್ ಅವರು 194 ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗಳ ಹಾಗೂ ಕಾನ್‌ಸ್ಟೆಬಲ್‌ಗಳ ಪಡೆಯನ್ನು ಮುನ್ನಡೆಸಲಿದ್ದಾರೆ

Republic Day 2024: ಮೊದಲ ಬಾರಿಗೆ ಪರೇಡ್​​​​ನಲ್ಲಿ ಭಾಗವಹಿಸಲು ಮಹಿಳಾ ಪೊಲೀಸ್​​​​ ತುಕಡಿಗೆ ಅವಕಾಶ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jan 10, 2024 | 12:32 PM

ದೆಹಲಿ, ಜ.10: ಈ ಬಾರಿಯ ಗಣರಾಜ್ಯೋತ್ಸವದಂದು (Republic Day) ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈ ಬಾರಿ ಪರೇಡ್​​​ನಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಅವಕಾಶವನ್ನು ನೀಡಲಾಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಸೇನಾನಿಗಳಿಗೆ ಈ ಬಾರಿಯ ಪರೇಡ್​​ನಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲಾಗಿದೆ. ಜತೆಗೆ ಅಗ್ನಿವೀರ್​​​ ಮೂಲಕ ಆಯ್ಕೆ ಆಗಿರುವ ಮಹಿಳಾ ಸೈನಿಕರು ಈ ಬಾರಿಯ ಪರೇಡ್​​​ನಲ್ಲಿ ಭಾಗವಹಿಸಲಿದ್ದಾರೆ. ಇದೀಗ ದೆಹಲಿಯ ಮಹಿಳಾ ಪೊಲೀಸ್​​​ ತುಕಡಿಗಳಿಗೆ ಪರೇಡ್​​​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸ್​​​ ಸಿಬ್ಬಂದಿಗಳು ಗಣರಾಜೋತ್ಸವ ಪರೇಡ್​​​​ ಭಾಗವಹಿಸುತ್ತಿದ್ದಾರೆ.

ಈ ವರ್ಷ ಭಾಗವಹಿಸುವವರಲ್ಲಿ 80 ಪ್ರತಿಶತದಷ್ಟು ಜನರು ಈಶಾನ್ಯ ರಾಜ್ಯಗಳಿಂದ ಬಂದವರು ಎಂದು ಹೇಳಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ಪೊಲೀಸರು ಮತ್ತು ಎಂಟು ಈಶಾನ್ಯ ರಾಜ್ಯಗಳ ಜನರ ಅಂತರವನ್ನು ತೆಗೆದು ಹಾಕಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಹಿಳಾ ಐಪಿಎಸ್ ಅಧಿಕಾರಿ ಶ್ವೇತಾ ಕೆ ಸುಗತನ್ ಅವರು 194 ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗಳ ಹಾಗೂ ಕಾನ್‌ಸ್ಟೆಬಲ್‌ಗಳ ಪಡೆಯನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ದೆಹಲಿಯಲ್ಲಿ ನಡೆಯುತ್ತಿರುವ ಪರೇಡ್​​​​ ಅಭ್ಯಾಸದಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್​​ಗಳು ಪ್ರತಿದಿನ ಬೆಳಿಗ್ಗೆ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ವಿಶೇಷ ಪೊಲೀಸ್ ಆಯುಕ್ತ (ಸಶಸ್ತ್ರ ಪೊಲೀಸ್) ರಾಬಿನ್ ಹಿಬು ಅವರ ಪ್ರಕಾರ ಮೊದಲು ಬಾರಿಗೆ ಮಹಿಳಾ ಪೊಲೀಸ್​​​ ಸಿಬ್ಬಂದಿಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರೀ ಉತ್ಸಾಹದಿಂದ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಮೆರವಣಿಗೆಗೆ ನಮ್ಮ ಪಡೆಯ ಸಶಸ್ತ್ರ ಘಟಕದಿಂದ ಆಯ್ಕೆ ಮಾಡಲಾಗಿದೆ. ಹೆಚ್ಚಿನವರು ಈಶಾನ್ಯ ಭಾಗದ ಪೊಲೀಸ್​​ ಸಿಬ್ಬಂದಿಗಳು ಇದರಲ್ಲಿ ಇರಲಿದ್ದಾರೆ. ಹಾಗಾಗಿ ಈ ಬಾರಿ ದೆಹಲಿ ಪೊಲೀಸರಲ್ಲಿ ಈಶಾನ್ಯದ ಜನರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಮಹಿಳಾ ಪೈಪ್ ಬ್ಯಾಂಡ್ ಕೂಡ ಇದರಲ್ಲಿ ಇರಲಿದೆ. ಕಾನ್‌ಸ್ಟೆಬಲ್ ರುಯಾಂಗುನುವೋ ಕೆನ್ಸ್ ನೇತೃತ್ವದಲ್ಲಿ ಈ ಪರೇಡ್​​​​ ಸಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಪರೇಡ್​​​ನಲ್ಲಿ ಭಾಗವಹಿಸುವುದು ಹೇಗೆ? ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಟಿಕೆಟ್ ಎಲ್ಲಿ ಖರೀದಿಸಬೇಕು?

135 ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡಿರುವ ಈ ಬ್ಯಾಂಡ್ “ದೆಹಲಿ ಪೊಲೀಸ್ ಸಾಂಗ್”ನ್ನು ನುಡಿಸಲಿದೆ. ಕಳೆದ ವರ್ಷವು ಮಹಿಳಾ ಪೈಪ್ ಬ್ಯಾಂಡ್ ಭಾಗವಹಿಸಿತ್ತು . ಆದರೆ ಅಂದು ಇದರ ನೇತೃತ್ವವನ್ನು ಪುರುಷರೊಬ್ಬರು ವಹಿಸಿದರು. ಆದರೆ ಈ ಬಾರಿ ರಕ್ಷಣಾ ಸಚಿವಾಲಯವು ಎಲ್ಲ ಪಡೆಗಳು, ರಾಜ್ಯ ಸರ್ಕಾರಗಳು ಹಾಗೂ ಇಲಾಖೆಗಳಿಗೆ ಮಹಿಳೆಯರು ಈ ಬಾರಿಯಲ್ಲಿ ಪ್ರಮುಖ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ