ಬೆಳಗಿನ ಜಾವ ಟಿಪ್ಪರ್ ಲಾರಿ-ಟಾಟಾ ಸುಮೊ-ಕಾರು ಪರಸ್ಪರ ಡಿಕ್ಕಿ: 5 ಮಂದಿ ಸಜೀವ ದಹನ

ಹೈದರಾಬಾದ್: ಟಿಪ್ಪರ್ ಲಾರಿ, ಟಾಟಾ ಸುಮೊ ಮತ್ತು ಕಾರು ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ಐದು ಮಂದಿ ಸಜೀವ ದಹನವಾಗಿರುವ ಭೀಕರ ಅಪಘಾತ ಆಂಧ್ರಪ್ರದೇಶದ ಕಡಪ ಜಿಲ್ಲೆ ವಲ್ಲೂರು ತಾಲೂಕಿನ ಗೋಟೂರು ಬಳಿ ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ಸಂಭವಿಸಿದೆ. ಟಿಪ್ಪರ್ ಲಾರಿ ಡಿಕ್ಕಿ ರಭಸಕ್ಕೆ ಟಾಟಾ ಸುಮೊ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಇಂತಹ ದುರಂತ ಸಂಭವಿಸಿದೆ. ಟಾಟಾ ಸುಮೊದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ಒಬ್ಬರು ಮೃತಪ್ಟಿದ್ದು, […]

ಬೆಳಗಿನ ಜಾವ ಟಿಪ್ಪರ್ ಲಾರಿ-ಟಾಟಾ ಸುಮೊ-ಕಾರು ಪರಸ್ಪರ ಡಿಕ್ಕಿ: 5 ಮಂದಿ ಸಜೀವ ದಹನ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Nov 02, 2020 | 3:49 PM

ಹೈದರಾಬಾದ್: ಟಿಪ್ಪರ್ ಲಾರಿ, ಟಾಟಾ ಸುಮೊ ಮತ್ತು ಕಾರು ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ಐದು ಮಂದಿ ಸಜೀವ ದಹನವಾಗಿರುವ ಭೀಕರ ಅಪಘಾತ ಆಂಧ್ರಪ್ರದೇಶದ ಕಡಪ ಜಿಲ್ಲೆ ವಲ್ಲೂರು ತಾಲೂಕಿನ ಗೋಟೂರು ಬಳಿ ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ಸಂಭವಿಸಿದೆ.

ಟಿಪ್ಪರ್ ಲಾರಿ ಡಿಕ್ಕಿ ರಭಸಕ್ಕೆ ಟಾಟಾ ಸುಮೊ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಇಂತಹ ದುರಂತ ಸಂಭವಿಸಿದೆ. ಟಾಟಾ ಸುಮೊದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ಒಬ್ಬರು ಮೃತಪ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಕಡಪ ರಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಕಿಯ ಕೆನ್ನಾಲಗೆಗೆ ಮೂರೂ ವಾಹನಗಳು ಸುಟ್ಟು ಕರಕಲಾಗಿವೆ. ಮೃತರು ತಮಿಳು ನಾಡಿನವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಡಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 7:14 am, Mon, 2 November 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us