ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮ್ಹಾಸವೆ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತಯೊಂದು ಸಂಭವಿಸಿದೆ. ಬೆಳಿಗ್ಗಿನ ಜಾವ ಏಳು ಗಂಟೆಯ ಸುಮಾರು ಖಾಸಗಿ ಬಸ್ ಗೆ ಟ್ರಕ್ ಡಿಕ್ಕಿಯಾದ ಪರಿಣಾಮ ಟ್ರಾವಲ್ಸ್ ಚಾಲಕ ಸೇರಿ ಸ್ಥಳದಲ್ಲೇ 6 ಜನರು ದುರ್ಮರಣ ಹೊಂದಿದ್ದಾರೆ.
ಭೀಕರ ಅಪಘಾತದಿಂದ ಟ್ರಾವೆಲ್ಸ್ ಬಸ್ ನ ಮುಂಬಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಸಂಕೇಶ್ವರ, ಹುಕ್ಕೇರಿ ತಾಲೂಕಿನ ವಿಶ್ವನಾಥ ವಿರೂಪಾಕ್ಷ ಗೌಡಿ (57) , ವಡಗಾಂವ್ ನ ರವೀಂದ್ರ ಕಲೇಗಾರ (45), ಅಬ್ಬಾಸಾಲಿ ಕಟಗಿ (45) ಮೃತರು. ಇನ್ನು ಮೂವರ ಹೆಸರು ವಿಳಾಸ ತಿಳಿದು ಬಂದಿಲ್ಲ.