ಆಫೀಸ್ ಎದುರು ಕಾರು ನಿಲ್ಲಿಸಿ ನಿದ್ರೆಗೆ ಜಾರಿದ ವ್ಯಕ್ತಿ, ಗಂಟೆಗಳ ಕಾಲ ಟ್ರಾಫಿಕ್ ಜಾಮ್, ಆಮೇಲೇನಾಯ್ತು?
ವ್ಯಕ್ತಿಯೊಬ್ಬ ತಮ್ಮ ಕಚೇರಿ ಎದುರು ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದರು. ಇದರಿಂದಾಗಿ ಪ್ರಮುಖ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್(Traffic Jam) ಉಂಟಾಗಿತ್ತು. ಯಾರು ಎಷ್ಟೇ ಹಾರ್ನ್ ಮಾಡಿದರೂ, ಕರೆದರೂ ಅವರಿಗೆ ಎಚ್ಚರವಾಗದ ಕಾರಣ ಕೊನೆಗೆ ಬಳಿಕ ಜನ ಕಾರಿನ ಕಿಟಕಿ ಗಾಜು ಒಡೆದು ಅವರನ್ನು ಎಬ್ಬಿಸಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ನಡೆದಿದೆ.

ಭೋಪಾಲ್, ಸೆಪ್ಟೆಂಬರ್ 08: ವ್ಯಕ್ತಿಯೊಬ್ಬ ತಮ್ಮ ಕಚೇರಿ ಎದುರು ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದರು. ಇದರಿಂದಾಗಿ ಪ್ರಮುಖ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್(Traffic Jam) ಉಂಟಾಗಿತ್ತು. ಯಾರು ಎಷ್ಟೇ ಹಾರ್ನ್ ಮಾಡಿದರೂ, ಕರೆದರೂ ಅವರಿಗೆ ಎಚ್ಚರವಾಗದ ಕಾರಣ ಕೊನೆಗೆ ಬಳಿಕ ಜನ ಕಾರಿನ ಕಿಟಕಿ ಗಾಜು ಒಡೆದು ಅವರನ್ನು ಎಬ್ಬಿಸಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ನಡೆದಿದೆ.
ಚಾಲಕ ತುಂಬಾ ಗಾಢ ನಿದ್ರೆಯಲ್ಲಿದ್ದ ಕಾರಣ, ವಾಹನಗಳು ಅಷ್ಟೊಂದು ಹಾರ್ನ್ ಮಾಡಿದರೂ ಕೂಡ ಅವರಿಗೆ ಕೇಳಿಸಲೇ ಇಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಂದೋರ್-ಇಚ್ಛಾಪುರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ, ಶಿಕಾರ್‌ಪುರ ಪೊಲೀಸ್ ಠಾಣೆಯ ಬಳಿ ಇರುವ ಎಲ್‌ಐಸಿ ಕಚೇರಿ ಬಳಿ ವ್ಯಕ್ತಿಯೊಬ್ಬ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಕಾರನ್ನು ನಿಲ್ಲಿಸಿ ಒಳಗೆ ಮಲಗಿದ್ದರು.
ವಾಹನವು ರಸ್ತೆಯ ಪಕ್ಕದಲ್ಲಿ ನಿಲ್ಲಿಸದೆ ರಸ್ತೆಯ ಮೇಲೆ ಬಹುತೇಕ ವಾಹನಗಳಿಗೆ ಹೋಗಲು ಅಡ್ಡಿಯಾಗುವಂತೆ ನಿಲ್ಲಿಸಿದ್ದರು. ಆ ಪ್ರದೇಶದಲ್ಲಿ ಸಂಚಾರ ಸ್ಥಗಿತಗೊಂಡು ದೀರ್ಘ ಸಂಚಾರ ದಟ್ಟಣೆ ಉಂಟಾಯಿತು. ಪ್ರಯಾಣಿಕರು ಮತ್ತು ಸ್ಥಳೀಯರು ಪದೇ ಪದೇ ವಿಂಡೋ ಬಡಿದು ಅವರನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಆ ವ್ಯಕ್ತಿ ಎಚ್ಚರಗೊಳ್ಳಲಿಲ್ಲ.
ಮತ್ತಷ್ಟು ಓದಿ: Video: ವೇಗವಾಗಿ ಬಂದ ಕಾರೊಂದು ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡೆದ ಭಯಾನಕ ವಿಡಿಯೋ
ಮಾಹಿತಿ ಪಡೆದ ಶಿಕಾರಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳೀಯರೊಂದಿಗೆ ಸೇರಿ ಸುಮಾರು ಒಂದು ಗಂಟೆಗಳ ಕಾಲ ಚಾಲಕನನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು. ಹಲವಾರು ವಿಫಲ ಪ್ರಯತ್ನಗಳ ನಂತರ, ಅವರು ಕಾರಿನ ಹಿಂಭಾಗದ ಗಾಜನ್ನು ಒಡೆದು ಎಚ್ಚರಗೊಳಿಸುವಲ್ಲಿ ಯಶಸ್ವಿಯಾದರು.
ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಚಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಒಂದು ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿ, ಪ್ರದೇಶದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ನೂರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ಕೆಲವರು ಚಾಲಕನ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಇಂತಹ ಘಟನೆಗಳು ಹೆಚ್ಚಿನ ದಟ್ಟಣೆಯ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




