Rohini Court Blast: ವಿಜ್ಞಾನಿ vs ವಕೀಲ ಜಗಳ; ದೆಹಲಿ ಕೋರ್ಟ್​ನಲ್ಲಿ ಬಾಂಬ್​ ಇಟ್ಟವರು ಯಾರು ಗೊತ್ತಾ?

ರೋಹಿಣಿ ಕೋರ್ಟ್ ಸ್ಫೋಟಕ್ಕೆ ಕಾರಣವಾದ ಆರೋಪಿಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Rohini Court Blast: ವಿಜ್ಞಾನಿ vs ವಕೀಲ ಜಗಳ; ದೆಹಲಿ ಕೋರ್ಟ್​ನಲ್ಲಿ ಬಾಂಬ್​ ಇಟ್ಟವರು ಯಾರು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 18, 2021 | 4:31 PM

ನವದೆಹಲಿ: ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಡಿ. 9ರಂದು ಸ್ಫೋಟ ಸಂಭವಿಸಿತ್ತು. ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಕೊಲ್ಲಲು ಟಿಫಿನ್ ಬಾಕ್ಸ್​ನಲ್ಲಿ ಬಾಂಬ್ ಇಟ್ಟಿದ್ದಕ್ಕಾಗಿ ವಿಜ್ಞಾನಿಯೊಬ್ಬರನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಡಿಸೆಂಬರ್ 9ರಂದು ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು. ಆ ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ರೋಹಿಣಿ ಕೋರ್ಟ್ ಸ್ಫೋಟಕ್ಕೆ ಕಾರಣವಾದ ಆರೋಪಿಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ವಕೀಲರೊಂದಿಗೆ ಜಗಳವಾಡಿದ್ದರು. ಅವರೇ ಬಾಂಬ್ ತಯಾರಿಸಿ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಿಜ್ಞಾನಿ ಕಠಾರಿಯಾ ಮತ್ತು ವಕೀಲ ಅಮಿತ್ ವಸಿಷ್ಠ ಅವರ ನಡುವೆ ಹಳೆಯ ಭಿನ್ನಾಭಿಪ್ರಾಯವಿತ್ತು. ಅದೇ ಕಾರಣಕ್ಕೆ ವಕೀಲನ ಸೋಗಿನಲ್ಲಿ ಕಠಾರಿಯಾ ನ್ಯಾಯಾಲಯಕ್ಕೆ ಪ್ರವೇಶಿಸಿ, ಬಾಂಬ್ ಇಟ್ಟು, ಸ್ಫೋಟದ ನಂತರ ಪರಾರಿಯಾಗಿದ್ದರು. ಕಠಾರಿಯಾ ಮತ್ತು ಅವರ ನೆರೆಹೊರೆಯವರಾದ ವಕೀಲ ಅಮಿತ್ ವಶಿಷ್ಟ್ ನಡುವೆ ಹಳೆಯ ವಿವಾದವಿತ್ತು. ನೀರು ಸರಬರಾಜು ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ವಿಚಾರಣೆ ಸಂಬಂಧ ಡಿ. 9ರಂದು ನ್ಯಾಯಾಲಯಕ್ಕೆ ಹಾಜರಾದ ಅಮಿತ್ ವಸಿಷ್ಠ ಅವರನ್ನು ಕೊಲ್ಲಲು ಕಠಾರಿಯಾ ವಕೀಲನ ವೇಷದಲ್ಲಿ ಕೋರ್ಟ್​ಗೆ ಬಂದು ನ್ಯಾಯಾಲಯದಲ್ಲಿ ಸ್ಫೋಟ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ವಿಜ್ಞಾನಿ ಪೊಲೀಸರ ಮುಂದೆ ತಾನು ವಕೀಲರನ್ನು ಕೊಲ್ಲುವ ಉದ್ದೇಶದಿಂದಲೇ ಬಾಂಬ್ ಇಟ್ಟಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಕೋಶವು ಸಿಟಿವಿಟಿ ಫೂಟೇಜ್ ಮತ್ತು ಡಂಪ್ ಡೇಟಾ ಸೇರಿದಂತೆ ವಿಜ್ಞಾನಿ ವಿರುದ್ಧ ಅನೇಕ ಸುಳಿವುಗಳು ಮತ್ತು ಸಾಕ್ಷಿಗಳನ್ನು ಕಲೆಹಾಕಿದೆ. ಅದರ ಆಧಾರದ ಮೇಲೆ ಅವರನ್ನು ಬಂಧಿಸಲಾಯಿತು.

ಇದುವರೆಗೆ ಪೊಲೀಸರ ತನಿಖೆಯಲ್ಲಿ ವಿಜ್ಞಾನಿಯ ಹೆಸರೇ ಹರಿದಾಡುತ್ತಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಡಿ. 9ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಸಣ್ಣ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿತ್ತು. ಕೋರ್ಟ್​ ಆವರಣದಲ್ಲಿ ಉಂಟಾದ ಸ್ಫೋಟದಿಂದಾಗಿ ಅಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಲ್ಯಾಪ್​ಟಾಪ್​ನ ಬ್ಯಾಟರಿ ಸ್ಫೋಟಗೊಂಡು ಈ ಬ್ಲಾಸ್ಟ್​ ಉಂಟಾಗಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ನಂತರ ಅದು ಟಿಫನ್ ಬಾಕ್ಸ್​ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟ ಎಂಬುದು ಗೊತ್ತಾಗಿತ್ತು. ಮಾಹಿತಿ ಪಡೆದ ನಂತರ ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.

ಇದನ್ನೂ ಓದಿ: Rohini Court Blast: ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಸ್ಫೋಟ; ಒಬ್ಬರಿಗೆ ಗಾಯ

Rohini Sindhuri : ಅಧಿಕಾರಿನ ತೆಗೆದು ಈ ರೀತಿ ಮಿಷನ್ ಕಂಪ್ಲೀಟ್ ಮಾಡೋದು ತಪ್ಪು

Published On - 2:46 pm, Sat, 18 December 21