ರೋಸ್​​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಹಿಳೆ

ರೋಸ್​ ಡೇ(Rose Day) ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ವಿರುದ್ಧ ಎಫ್​ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕೇವಲ ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ಆಕೆ ಪತಿಗೆ ಗುಲಾಬಿ ನೀಡುವ ಮೊದಲು ಗಂಡನಿಗೆ ವೈನ್ ಬಾಟಲಿಯನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರದಲ್ಲಿ ಮದ್ಯಪಾನ ನಿಷೇಧವಿರುವ ಕಾರಣ ಅವರಿಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ

ರೋಸ್​​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಹಿಳೆ
ರೋಸ್ ಡೇ

Updated on: Feb 13, 2026 | 8:14 AM

ಪಾಟ್ನಾ, ಫೆಬ್ರವರಿ 13: ರೋಸ್​ ಡೇ(Rose Day) ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ವಿರುದ್ಧ ಎಫ್​ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕೇವಲ ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ಆಕೆ ಪತಿಗೆ ಗುಲಾಬಿ ನೀಡುವ ಮೊದಲು ಗಂಡನಿಗೆ ವೈನ್ ಬಾಟಲಿಯನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರದಲ್ಲಿ ಮದ್ಯಪಾನ ನಿಷೇಧವಿರುವ ಕಾರಣ ಅವರಿಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕಾಂಚನ್ ಬ್ಯೂಟಿ ಪಾರ್ಲರ್ ಒಳಗೆ ಪಿಸ್ತೂಲ್ ಹಿಡಿದು ಪೋಸ್ ನೀಡುತ್ತಿರುವ ಪ್ರತ್ಯೇಕ ಫೋಟೋ ವಿಡಿಯೋ ಕಾಣಿಸಿಕೊಂಡಾಗ ಮತ್ತಷ್ಟು ಸಂಕಷ್ಟವಾಗಿ ಪರಿಣಮಿಸಿತ್ತು. ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಮುಂಗರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೈಯದ್ ಇಮ್ರಾನ್ ಮಸೂದ್ ದೃಢಪಡಿಸಿದರು. ನಂತರ ಪೊಲೀಸರು ಮಹಿಳೆಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ತನಿಖೆಯಲ್ಲಿ ಫೋಟೋದಲ್ಲಿರುವ ಪಿಸ್ತೂಲ್ ದೀನದಯಾಳ್ ಚೌಕ್ ನಿವಾಸಿ ವಿಶಾಲ್ ಕುಮಾರ್ ಅವರಿಗೆ ಸೇರಿದ ಪರವಾನಗಿ ಪಡೆದ ಗನ್ ಅದಾಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಈಗ ಕಾಂಚನ್ ದೇವಿ ಮತ್ತು ಗನ್ ಮಾಲೀಕ ವಿಶಾಲ್ ಕುಮಾರ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಕಾಂಚನ್ ದೇವಿ ಎಂಬ ಮಹಿಳೆ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸ್ವತಃ ಪೋಸ್ಟ್ ಮಾಡಿದ್ದರು. ವೀಡಿಯೊದಲ್ಲಿ, ಅವರು ತಮ್ಮ ಪತಿಗೆ ಗುಲಾಬಿಯನ್ನು ನೀಡಿ, ಅವರಿಗೆ ಒಂದು ಲೋಟ ವೈನ್ ಬಡಿಸಿ, ವೈನ್ ಬಾಟಲಿಯನ್ನು ನೀಡುತ್ತಿರುವುದನ್ನು ಕಾಣಬಹುದು.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ಅನ್ನು ತೆಗೆದುಹಾಕುವ ಮೊದಲು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಆದಾಗ್ಯೂ, ನಂತರ ಮಹಿಳೆ ಪಿಸ್ತೂಲ್ ಹಿಡಿದು ಭೋಜ್‌ಪುರಿ ಹಾಡಿಗೆ ಲಿಪ್ ಸಿಂಕ್ ಮಾಡುತ್ತಿರುವುದನ್ನು ತೋರಿಸುವ ಮತ್ತೊಂದು ವೀಡಿಯೊ ಕಾಣಿಸಿಕೊಂಡಿತ್ತು.

ಮತ್ತಷ್ಟು ಓದಿ: Valentine’s Week 2026: ರೋಸ್‌ ಡೇಯಂದು ನಿಮ್ಮ ಲೈಫ್‌ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ

ವೀಡಿಯೊದಲ್ಲಿರುವ ವ್ಯಕ್ತಿ ಉದ್ಯಮಿಯಾಗಿದ್ದರೆ, ಅವರ ಪತ್ನಿ ಇನ್​ಫ್ಲುಯೆನ್ಸರ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರಾಗಿದ್ದಾರೆ. ಈ ವೀಡಿಯೊವನ್ನು ಫೆಬ್ರವರಿ 7, ರೋಸ್ ಡೇ ರಂದು ರೆಕಾರ್ಡ್ ಮಾಡಲಾಗಿದೆ. ವೀಡಿಯೊವನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಕಾಂಚನ್ ಇನ್ಸ್ಟಾಗ್ರಾಮ್ನಲ್ಲಿ 2.99 ಲಕ್ಷ ಫಾಲೋವರ್ಸ್​​ ಹೊಂದಿದ್ದಾರೆ. ಕಾಂಚನ್ ವೀಡಿಯೊವನ್ನು ಮಾಡಿದ್ದು ವಿಶಾಲ್ ಅವರ ಪರವಾನಗಿ ಪಡೆದ ಗನ್​ ಇಂದ ಆಗಿದ್ದರೂ ಮೂವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us