AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rose Day 2026 Date: ಪ್ರೇಮಿಗಳ ವಾರದ ಮೊದಲೇ ದಿನವೇ ರೋಸ್ ಡೇ; ಈ ದಿನದ ಇತಿಹಾಸ, ಮಹತ್ವವೇನು?

Valentine’s Week 2026: ನಾಳೆಯಿಂದ ಅಂದರೆ ಫೆಬ್ರವರಿ 7ರಿಂದ 14ರವರೆಗೆ ಪ್ರೇಮಿಗಳ ಪಾಲಿಗೆ ಹಬ್ಬವೇ ಸರಿ. ಹೌದು, ಪ್ರೇಮಿಗಳಿಗೆ ಮೀಸಲಿಟ್ಟ ಈ ಒಂದು ವಾರದಲ್ಲಿ ಬರುವ ದಿನವೇ ರೋಸ್ ಡೇ. ಈ ದಿನದ ಆಚರಣೆಗಾಗಿ ಮಾರುಕಟ್ಟೆಯ ತುಂಬೆಲ್ಲಾ ಬಣ್ಣ ಬಣ್ಣದ ಗುಲಾಬಿ ಹೂವುಗಳು ಈಗಾಗಲೇ ಬಂದಿವೆ. ನೀವು ನಿಮ್ಮ ಪ್ರೇಮಿಗೆ ಕೆಂಪು ಬಣ್ಣದ ಗುಲಾಬಿ ಹೂವು ನೀಡಿ ಆಚರಿಸುವ ಪ್ಲ್ಯಾನ್ ನಲ್ಲಿದ್ದೀರಬಹುದು. ಪ್ರೇಮಿಗಳ ವಾರದಲ್ಲಿ ಮೊದಲ ದಿನ ಬರುವ ಈ ರೋಜ್‌ ಡೇಯ ಇತಿಹಾಸ, ಮಹತ್ವದ ಬಗೆಗಿನ ಮಾಹಿತಿ ಇಲ್ಲಿದೆ.

Rose Day 2026 Date: ಪ್ರೇಮಿಗಳ ವಾರದ ಮೊದಲೇ ದಿನವೇ ರೋಸ್ ಡೇ; ಈ ದಿನದ ಇತಿಹಾಸ, ಮಹತ್ವವೇನು?
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Feb 06, 2026 | 4:17 PM

Share

ಪ್ರೇಮಿಗಳ ದಿನಕ್ಕೆ (Valentine’s Day) ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಆದರೆ ಫೆಬ್ರವರಿ 7 ರಿಂದ 14 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಇದು ಪ್ರೇಮಿಗಳಿಗಾಗಿಯೇ ಮೀಸಲಿಟ್ಟ ವಾರ. ಈ ವ್ಯಾಲೆಂಟೈನ್‌ ವೀಕ್‌ನಲ್ಲಿ ಮೊದಲ ದಿನದ ಆಚರಣೆಯೇ ರೋಸ್‌ ಡೇ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಯಾರಾದರೂ ವಿಶೇಷ ವ್ಯಕ್ತಿ ಇದ್ದರೆ, ರೋಸ್ ಡೇಯಂದು (Rose Day) ಕೆಂಪು ಬಣ್ಣದ ಗುಲಾಬಿ ಹೂವು ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಈ ದಿನದ ಆಚರಣೆಗೂ ಮುನ್ನ ಇದರ ಇತಿಹಾಸ, ಮಹತ್ವ ತಿಳಿದುಕೊಳ್ಳಿ.

ರೋಸ್‌ ಡೇಯ ಇತಿಹಾಸ, ಮಹತ್ವವೇನು?

ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನವೇ ರೋಸ್ ಡೇ. ಪ್ರೇಮಿಗಳ ವಾರ ಆರಂಭವಾಗುವುದೇ ಈ ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ. ಆದರೆ ಈ ರೋಜ್ ಡೇ ಇತಿಹಾಸದ ಬಗ್ಗೆ ಹೇಳುವುದಾದರೆ ರೋಸ್ ಡೇಗೂ ರೋಮನ್ ಪುರಾಣಗಳಿಗೂ ಸಂಬಂಧವಿದೆ. ಈ ಗುಲಾಬಿ ಹೂವುಗಳು ಪ್ರೀತಿ  ಪ್ರೇಮದ ಸಂಕೇತ.

ಇದನ್ನೂ ಓದಿ: Valentine’s Week 2026: ರೋಸ್‌ ಡೇಯಂದು ನಿಮ್ಮ ಲೈಫ್‌ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ

ಅದಲ್ಲದೇ, ಸೌಂದರ್ಯ ಹಾಗೂ ಪ್ರೀತಿಗೆ ಸಂಬಂಧಿಸಿದ ದೇವತೆಯಾದ ಶುಕ್ರಕ್ಕೆ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿತ್ತು. ಈ ಗುಲಾಬಿ ಹೂವುಗಳು ಏಷ್ಯನ್ ಹಾಗೂ ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಯಲ್ಲೂ ಪ್ರೀತಿಯೊಂದಿಗೆ ಸಂಬಂಧ ಹೊಂದಿದೆ.  ಇನ್ನು, ವಿಕ್ಟೋರಿಯನ್ನರು ಗುಲಾಬಿ ಹೂವುಗಳನ್ನು ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 7ರಂದು ರೋಸ್ ಡೇ ಯನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರೇಮಿಗಳು ಮಾತ್ರವಲ್ಲ, ಸ್ನೇಹಿತರು ಹಾಗೂ ತಮ್ಮ ಜೀವನದ ವಿಶೇಷ ವ್ಯಕ್ತಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಈ ದಿನವನ್ನು ಆಚರಿಸುತ್ತಾರೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ