ಚರ್ಚ್​ ನಡೆಸುತ್ತಿರುವ ಕಾಲೇಜಿನಲ್ಲಿ ನಮಾಜ್​ಗೆ​ ಅನುಮತಿ ನಿರಾಕರಣೆ, ವಿವಾದ ಉಲ್ಬಣ, ಪ್ರತಿಭಟನೆ

ಕೇರಳದಲ್ಲಿ ಚರ್ಚ್​ ಆಶ್ರಯದಲ್ಲಿ ನಡೆಯುತ್ತಿರುವ ಕಾಲೇಜಿನಲ್ಲಿ ಕೆಲವರು ನಮಾಜ್​ ಮಾಡಲು ಅವಕಾಶ ನೀಡಿಲ್ಲವೆಂದು ಪ್ರತಿಭಟನೆಗಿಳಿದಿದ್ದಾರೆ. ಕೇರಳದ ಮುವಾಟ್ಟುಪುಳ ಬಳಿಯ ಚರ್ಚ್ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ. ಸಂಸ್ಥೆಯ ಕೊಠಡಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಬೋಧಕೇತರ ಸಿಬ್ಬಂದಿ ತಡೆದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಚರ್ಚ್​ ನಡೆಸುತ್ತಿರುವ ಕಾಲೇಜಿನಲ್ಲಿ ನಮಾಜ್​ಗೆ​ ಅನುಮತಿ ನಿರಾಕರಣೆ, ವಿವಾದ ಉಲ್ಬಣ, ಪ್ರತಿಭಟನೆ
ನಮಾಜ್
Follow us
ನಯನಾ ರಾಜೀವ್
|

Updated on: Jul 29, 2024 | 10:34 AM

ಚರ್ಚ್ ಆಫ್ ಕೇರಳ ನಡೆಸುತ್ತಿರುವ ಕಾಲೇಜಿನ ಆವರಣದಲ್ಲಿ ನಮಾಜ್ ಮಾಡಲು ಅನುಮತಿ ನಿರಾಕರಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಒಂದು ತಂಡವು ಪ್ರತಿಭಟನೆ ನಡೆಸಿತು. ಕೇರಳದ ಮುವಾಟ್ಟುಪುಳ ಬಳಿಯ ಚರ್ಚ್ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.

ಸಂಸ್ಥೆಯ ಕೊಠಡಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಬೋಧಕೇತರ ಸಿಬ್ಬಂದಿ ತಡೆದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಶುಕ್ರವಾರ ನಿರ್ಮಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಒಂದು ವಿಭಾಗವು ಪ್ರತಿಭಟನೆ ನಡೆಸಿತು ಮತ್ತು ಬೋಧಕೇತರ ಸಿಬ್ಬಂದಿ ಶುಕ್ರವಾರ ಸಂಸ್ಥೆಯ ಕೊಠಡಿಯೊಳಗೆ ನಮಾಜ್ ಮಾಡದಂತೆ ತಡೆದಿದ್ದಾರೆ ಎನ್ನುವ ಆರೋಪ ಮಾಡಿದೆ.

ಕೆಲವು ಸ್ಥಳೀಯ ಚಾನೆಲ್‌ಗಳು ಪ್ರಸಾರ ಮಾಡಿದ ವಿಡಿಯೋದಲ್ಲಿ ಕಾಲೇಜು ಸಿಬ್ಬಂದಿ ಹಲವಾರು ದಿನಗಳಿಂದ ನಮಾಜ್ ಮಾಡಲು ಅವಕಾಶ ನೀಡಲಿಲ್ಲ ಎಂದು ವಿದ್ಯಾರ್ಥಿಗಳು ಹೇಳಿರುವುದನ್ನು ಕಾಣಬಹುದು. ಅಲ್ಲದೆ ಪ್ರಾಂಶುಪಾಲರು ಕ್ಷಮೆಯಾಚಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಚರ್ಚ್ ಸಂಬಂಧಿತ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಿರೋ-ಮಲಬಾರ್ ಚರ್ಚ್‌ನೊಂದಿಗೆ ಸಂಯೋಜಿತವಾಗಿರುವ ಕ್ಯಾಥೋಲಿಕ್ ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿದೆ ಮತ್ತು ಅಂತಹ ವಿಭಜಕ ಶಕ್ತಿಗಳನ್ನು ಬೇರುಸಹಿತ ಕಿತ್ತುಹಾಕಬೇಕು ಎಂದು ಹೇಳಿದರು.

ಮತ್ತಷ್ಟು ಓದಿ: Video: ನಮಾಜ್ ಸಂಸ್ಕೃತ ಪದ; ವೈರಲ್ ಆಗುತ್ತಿದೆ ಮುಸ್ಲಿಂ ಧರ್ಮಗುರು ಹೇಳಿಕೆ

ಇದೇ ವೇಳೆ ಬಿಜೆಪಿ ಮುಖಂಡ ಪಿ.ಸಿ.ಜಾರ್ಜ್ ಅವರು ಕಾಲೇಜಿನ ಒಳಗೆ ನಡೆದ ಪ್ರತಿಭಟನೆ ಖಂಡನೀಯ ಎಂದು ಬಣ್ಣಿಸಿದರು. ಮುಸ್ಲಿಂ ಕಾಲೇಜು ಹಿಂದೂಗಳಿಗೆ ಅಥವಾ ಕ್ರಿಶ್ಚಿಯನ್ನರಿಗೆ ಪ್ರಾರ್ಥನೆ ಮಾಡಲು ಕೊಠಡಿಗಳನ್ನು ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದರು. ಹಿಂದೂ ಮತ್ತು ಕ್ರೈಸ್ತ ಸಮುದಾಯದವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವರು ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ನಮಾಜ್ ಮಾಡಲು ಅವಕಾಶ ನೀಡದ ಕಾಲೇಜು ಪ್ರಾಂಶುಪಾಲರಿಗೆ ಕೆಲವರು ಬೆದರಿಕೆ ಹಾಕಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಕೇರಳ ಅಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ