ಅಬ್ಬಾ! ಗನ್​ ತೋರಿಸಿ 1 ಕೋಟಿ ರೂಪಾಯಿ ಹೇಗೆ ದರೋಡೆ ಮಾಡಿದ್ದಾರೆ ನೋಡಿ, ವಿಡಿಯೋ ಇದೆ

| Updated By: ಸಾಧು ಶ್ರೀನಾಥ್​

Updated on: Feb 03, 2022 | 9:49 AM

Robbery: ಮುಂಬೈನ ಮುಲುಂಡ್​ ಪ್ರದೇಶದಲ್ಲಿ (Mulund, Mumbai) ಕಚೇರಿಯೊಂದಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಅಲ್ಲಿದ್ದವರನ್ನೆಲ್ಲ ಗುಡ್ಡೆ ಹಾಕಿ, ಗನ್​ ತೋರಿಸಿ 1 ಕೋಟಿ ರೂಪಾಯಿ ಚೀಲಕ್ಕೆ ತುಂಬಿಸಿಕೊಂಡು ದರೋಡೆ ಮಾಡಿಕೊಂಡು ಹೋಗಿದ್ದಾರೆ.

ಅಬ್ಬಾ! ಗನ್​ ತೋರಿಸಿ 1 ಕೋಟಿ ರೂಪಾಯಿ ಹೇಗೆ ದರೋಡೆ ಮಾಡಿದ್ದಾರೆ ನೋಡಿ, ವಿಡಿಯೋ ಇದೆ
ಅಬ್ಬಾ! ಗನ್​ ತೋರಿಸಿ 1 ಕೋಟಿ ರೂಪಾಯಿ ಹೇಗೆ ದರೋಡೆ ಮಾಡಿದ್ದಾರೆ ನೋಡಿ, ವಿಡಿಯೋ ಇದೆ
Follow us on

ಮುಂಬೈ: ಅಬ್ಬಾ! ಎಂದು ಸಖೇದ ಆಶ್ಚರ್ಯದಿಂದ ಉದ್ಘರಿಸುವಷ್ಟು ದರೋಡೆ ಪ್ರಕರಣಗಳು ವಾಣಿಜ್ಯ ನಗರಿ ಮುಂಬೈನಲ್ಲಿ ಹಗಲು ವೇಳೆಯೇ ನಡೆಯುತ್ತಿವೆ. ಮುಂಬೈನ ಮುಲುಂಡ್​ ಪ್ರದೇಶದಲ್ಲಿ (Mulund, Mumbai) ಕಚೇರಿಯೊಂದಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಅಲ್ಲಿದ್ದವರನ್ನೆಲ್ಲ ಗುಡ್ಡೆ ಹಾಕಿ, ಗನ್​ ತೋರಿಸಿ (gunpoint) 1 ಕೋಟಿ ರೂಪಾಯಿ ಚೀಲಕ್ಕೆ ತುಂಬಿಸಿಕೊಂಡು ದರೋಡೆ ಮಾಡಿಕೊಂಡು (robbery) ಹೋಗಿದ್ದಾರೆ. ವಿಡಿಯೋ ಇದೆ ನೋಡಿ.

ಸಿಸಿಟಿವಿ ವಿಡಿಯೋದಲ್ಲಿ ಇಡೀ ಘಟನಾವಳಿ ಸೆರೆಯಾಗಿದ್ದು, ಮೂವರು ದುಷ್ಕರ್ಮಿಗಳು ಕಚೇರಿಯಲ್ಲಿದ್ದ ಉದ್ಯೋಗಿಗಳನ್ನು ಬೆದರಿಸಿ, ಬಂಧಿಯಾಗಿಸಿಕೊಂಡು ಸಾವಕಾಶವಾಗಿ ಕೋಟಿ ರೂಪಾಯಿ ದರೋಡೆ ಮಾಡಿದ್ದಾರೆ. ಮುಂಬೈ ಪೊಲೀಸರು ಮೂವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಬುಧವಾರ ಮಧ್ಯಾಹ್ನ 3.30 ರಲ್ಲಿ ಘಟನೆ ನಡೆದಿದೆ. ಪಶ್ಚಿಮ ಮುಲುಂಡ್​ ಪ್ರದೇಶದ ಪಿಕೆ ರಸ್ತೆಯಲ್ಲಿ ಪಂಚ ರಸ್ತಾ ಏರಿಯಾದಲ್ಲಿರುವ ವಿ ಪಟೇಲ್​ ವಾಣಿಜ್ಯ ಸಂಕೀರ್ಣದಲ್ಲಿ ನೆಲ ಮಹಡಿಯಲ್ಲಿರುವ ಕಚೇರಿಯಲ್ಲಿ ಈ ದರೋಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಎಸ್​ಬಿಐ ಬ್ಯಾಂಕ್ ಶಾಖೆಯಲ್ಲಿ ರಾಬರಿ ನಡೆಸಿದ್ದ ದುಷ್ಕರ್ಮಿಗಳು ಓರ್ವ ಉದ್ಯೋಗಿಯನ್ನು ಹತ್ಯೆ ಮಾಡಿದ್ದರು. ಮುಂಬೈನ ಸ್ಟೇಟ್​ ಬ್ಯಾಂಕ್​​ ಆಫ್​ ಇಂಡಿಯಾದ ದಹಿಸರ್​ ಶಾಖೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿತ್ತು. ಘಟನೆಯ ವೇಳೆ ಓರ್ವ ಉದ್ಯೋಗಿ ಹತ್ಯೆಗೀಡಾಗಿ, ಅಂದಿನ ಘಟನೆಯೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳೆದ ವರ್ಷಾಂತ್ಯದಲ್ಲಿ ಈ ಘಟನೆ ನಡೆದಿತ್ತು. ಬ್ಯಾಂಕ್​ನ ಸರ್ವೈಲೆನ್ಸ್ ಕ್ಯಾಮರಾಗಳಲ್ಲಿ ಇಡೀ ವೃತ್ತಾಂತ ದಾಖಲಾಗಿ, ಪೊಲೀಸರು ಪರಿಶೀಲನೆ ನಡೆಸಿದ್ದರು. ದರೋಡೆಯ ಬಳಿಕ ಇಬ್ಬರೂ ಆಗುಂತಕರು ಪರಾರಿಯಾಗಿದ್ದರು. ಮೃತ ಉದ್ಯೋಗಿ ಎಸ್​ಬಿಐನ ಹೊರಗುತ್ತಿಗೆ ನೌಕರ ಎಂದು ತಿಳಿದುಬಂದಿತ್ತು.

ಇಬ್ಬರು ಮುಸುಕುಧಾರಿ ಆಗುಂತಕರು ಒಳ ಪ್ರವೇಶಿಸಿದ್ದರು. ಒಬ್ಬ ದರೋಡೆ ಮಾಡುತ್ತಿದ್ದರೆ ಮತ್ತೊಬ್ಬ ಗನ್​ ಝಳಪಿಸುತ್ತಾ ಬ್ಯಾಂಕ್​ ಸಿಬ್ಬಂದಿಯನ್ನು ಬೆದರಿಸುತ್ತಿರುವುದು ಕಂಡುಬಂದಿತ್ತು. ದರೋಡೆಯ ಬಳಿಕ ಸುದ್ದಿ ತಲುಪುತ್ತಿದ್ದಂತೆ ಉನ್ನತ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದರು.

ಕೋಟಿ ರೂಪಾಯಿ ದರೋಡೆ, ವಿಡಿಯೋ ನೋಡಿ

ಇದನ್ನೂ ಓದಿ
ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿ, ಡಿಲೀಟ್ ಮಾಡಿದ ಕಂಗನಾ; ಅದರಲ್ಲಿತ್ತು ಹೊಸ ಸಮಾಚಾರ!

ಇದನ್ನೂ ಓದಿ:
ನಟಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದ ಕಿಡಿಗೇಡಿಗಳು; ಇಲ್ಲಿದೆ ಒರಿಜಿನಲ್​ ಫೋಟೋ

Published On - 9:23 am, Thu, 3 February 22