AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rs 75 Coin: 75 ರೂ ನಾಣ್ಯ ಬಿಡುಗಡೆ; ಎಲ್ಲಿ ಸಿಗುತ್ತೆ ಈ ಕಾಯಿನ್? ಏನಿದರ ವಿಶೇಷತೆ? ಇಲ್ಲಿದೆ ಡೀಟೇಲ್ಸ್

How To Get Rs 75 Coin: ವಿಶೇಷ ಸಂದರ್ಭಗಳ ಸ್ಮರಣಾರ್ಥವಾಗಿ ಸರ್ಕಾರ ನಾಣ್ಯ ಮತ್ತಿತರ ಕರೆನ್ಸಿ, ಅಂಚೆ ಚೀಟಿ ಇತ್ಯಾದಿ ಬಿಡುಗಡೆ ಮಾಡುವುದುಂಟು. ಈಗ 75 ವರ್ಷದ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ 75 ರೂ ನಾಣ್ಯ ಬಿಡುಗಡೆ ಆಗಿದೆ. ಈ ನಾಣ್ಯದ ವಿಶೇಷತೆ ಬಗ್ಗೆ ಇಲ್ಲಿದೆ ವಿವರ.

Rs 75 Coin: 75 ರೂ ನಾಣ್ಯ ಬಿಡುಗಡೆ; ಎಲ್ಲಿ ಸಿಗುತ್ತೆ ಈ ಕಾಯಿನ್? ಏನಿದರ ವಿಶೇಷತೆ? ಇಲ್ಲಿದೆ ಡೀಟೇಲ್ಸ್
75 ರೂ ನಾಣ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 1:43 PM

ನವದೆಹಲಿ: ಕೇಂದ್ರ ರಾಜಧಾನಿ ನಗರಿಯಲ್ಲಿ ಹೊಸ ಸಂಸದೀಯ ಭವನದ ಉದ್ಘಾಟನೆ ಆಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75 ರೂ ಮುಖಬೆಲೆಯ ನಾಣ್ಯ (Rs. 75 coin) ಹಾಗೂ ವಿಶೇಷ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಸಂಸತ್ ಭವನದ ಸ್ಮರಣಾರ್ಥ ಹಾಗೂ ಸ್ವಾತಂತ್ರ್ಯದ ಅಮೃತಮಹೋತ್ಸವದ ಸ್ಮರಣಾರ್ಥ 75 ರೂ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಈ ನಾಣ್ಯ ಮಾರುಕಟ್ಟೆಯಲ್ಲಿ ಚಲಾವಣೆಗೆಂದು ತಯಾರಿಸಿದ್ದಾಗಿರುವುದಿಲ್ಲ. ಹಾಗಂತ ಇದು ಚಲಾವಣೆಗೆ ಅಸಿಂಧುವಂತೂ ಅಲ್ಲ. ಇದು ಸ್ಮರಣಾರ್ಥ ವಿಶೇಷ ನಾಣ್ಯವಾಗಿದೆ. ಹಿಂದೆ ಬಹಳಷ್ಟು ಸಂದರ್ಭಗಳಲ್ಲಿ ಈ ರೀತಿಯ ಸ್ಮರಣಾರ್ಥ ನಾಣ್ಯಗಳು ಬಿಡುಗಡೆ ಆಗಿದ್ದಿದೆ. ಮಾಹಿತಿ ಪ್ರಕಾರ 1947ರಿಂದೀಚೆ ಆರ್​ಬಿಐ ಈ ರೀತಿಯ 350ಕ್ಕೂ ಹೆಚ್ಚು ಸ್ಮಾರಕ ನಾಣ್ಯಗಳನ್ನು ಬಿಡುಗಡೆ ಮಾಡಿರುವುದು ತಿಳಿದುಬಂದಿದೆ.

75 ರೂ ವಿಶೇಷ ನಾಣ್ಯದ ವಿಶೇಷತೆಗಳೇನು?

ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಸ್ಮರಣೆಯಲ್ಲಿ ತಯಾರಾಗಿರುವ 75 ರೂ ವಿಶೇಷ ನಾಣ್ಯವನ್ನು ಸಂವಿಧಾನದ ಮೊದಲ ಸ್ಕೆಡ್ಯೂಲ್​ನಲ್ಲಿ ನೀಡಲಾಗಿರುವ ಮಾರ್ಗಸೂಚಿ ಪ್ರಕಾರ ತಯಾರಿಸಲಾಗಿದೆ. ಇದು ವೃತ್ತಾಕಾರದಲ್ಲಿದ್ದು, ತುದಿಯಲ್ಲಿ 200 ಸೀಳುಗಳನ್ನು ಹೊಂದಿದೆ. ಇದರ ವ್ಯಾಸ 44 ಮಿಲಿಮೀಟರ್ ಇದೆ. ತೂಕ 35 ಗ್ರಾಮ್ ಇದೆ.

ಈ ನಾಣ್ಯವನ್ನು ಹೆಚ್ಚಾಗಿ ಬೆಳ್ಳಿ ಮತ್ತು ತಾಮ್ರ ಲೋಹಗಳಿಂದ ತಯಾರಿಸಲಾಗಿದೆ. ಶೇ. 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ಶೇ. 5ರಷ್ಟು ನಿಕೆಲ್, ಶೇ. 5ರಷ್ಟು ಜಿಂಕ್ ಲೋಹಗಳ ಮಿಶ್ರಣದಿಂದ ಈ ನಾಣ್ಯವನ್ನು ತಯಾರಿಸಲಾಗಿದೆ.

ಇದನ್ನೂ ಓದಿNew Parliament Building: ಭಾರತ ಮುಂದೆ ಸಾಗಿದರೆ ವಿಶ್ವವೂ ಮುಂದೆ ಹೋಗುವುದು, ಭಾರತ ಪ್ರಜಾತಂತ್ರ ರಾಷ್ಟ್ರ ಮಾತ್ರವಲ್ಲ ಪ್ರಜಾತಂತ್ರದ ಜನನಿ ಕೂಡ: ಮೋದಿ

ನಾಣ್ಯದ ಮುಂಭಾಗದಲ್ಲಿ ಮಧ್ಯದಲ್ಲಿ ಅಶೋಕ ಪಿಲ್ಲರ್ ಇದ್ದರೆ ಕೆಳಗೆ ದೇವನಾಗರಿಯಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಎಡಗಡೆ ಭಾರತ್ ದೇವನಾಗರಿಯಲ್ಲಿ ಬರೆದರೆ, ಬಲಗಡೆ ಇಂಗ್ಲೀಷ್​ನಲ್ಲಿ ಇಂಡಿಯಾ ಎಂದಿದೆ.

75 ರೂ ನಾಣ್ಯದ ಹಿಂಭಾಗದಲ್ಲಿ ಹೊಸ ಸಂಸತ್ ಸಂಕೀರ್ಣದ ಫೋಟೋ ಇದೆ. ಮೇಲಿನ ಭಾಗದಲ್ಲಿ ದೇವನಾಗರಿಯಲ್ಲಿ ಸಂಸದ್ ಸಂಕುಲ್ ಎಂದರೆ ಬರೆಯಲಾದರೆ, ಕೆಳಭಾಗದಲ್ಲಿ ಇಂಗ್ಲೀಷ್​ನಲ್ಲಿ ಪಾರ್ಲಿಯಾಮೆಂಟ್ ಕಾಂಪ್ಲೆಕ್ಸ್ ಎಂಬ ಇನ್ಸ್​ಕ್ರಿಪ್ಷನ್ ಇರುತ್ತದೆ.

ಇದನ್ನೂ ಓದಿNew Parliament Building: ಭವ್ಯ ಭವನದ ಒಳಗಿನ ಕಣ್ಮನ ಸೆಳೆಯುವ ವಾಸ್ತುಶಿಲ್ಪಪದ ಕೆಲವು ಚಿತ್ರಗಳು

ಎಲ್ಲಿ ಸಿಗುತ್ತೆ 75 ರೂ ನಾಣ್ಯ? ಹೇಗೆ ಪಡೆಯುವುದು?

ಈ ಹಿಂದೆ ಹಲವಾರು ವಿಶೇಷ ಸಂದರ್ಭಗಳಿಗೆ ಸ್ಮರಣಾರ್ಥವಾಗಿ ಆರ್​ಬಿಐ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ್ದಿದೆ. ಆದರೆ, ಇವು ಸಾರ್ವಜನಿಕವಾಗಿ ಲಭ್ಯ ಇರುವುದಿಲ್ಲ. ಕಡಿಮೆ ಬೆಲೆಯ ನಾಣ್ಯವಾದರೆ ಒಂದಷ್ಟು ಕಾಲ ಸಾರ್ವಜನಿಕ ಬಳಕೆಯಲ್ಲಿದ್ದು ನಂತರ ಮಾಯವಾಗುತ್ತದೆ. ಅಧಿಕ ಬೆಲೆಯ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದು ತೀರಾ ಅಪರೂಪ. ಇವು ಕಲೆಕ್ಷನ್ ವಸ್ತುವಾಗಿ ಬಳಕೆ ಆಗುತ್ತದೆ. ಇವುಗಳನ್ನು ಪಡೆಯಬೇಕೆಂದರೆ ಏಜೆನ್ಸಿಗಳ ಮೂಲಕ ಪ್ರಯತ್ನಿಸಬಹುದು.

ಕೇಂದ್ರ ಸರ್ಕಾರ ಸ್ವಾಮ್ಯದ ಮುಂಬೈ ಮಿಂಟ್, ಕೋಲ್ಕತಾ ಮಿಂಟ್, ಹೈದರಾಬಾದ್ ಮಿಂಟ್ ಮತ್ತು ನೋಯ್ಡಾ ಮಿಂಟ್​ಗಳು ಈ ನಾಣ್ಯಗಳನ್ನು ತಯಾರಿಸುತ್ತವೆ. ಇಂಥ ನಾಣ್ಯ ಬೇಕಾದವರು ಈ ಸಂಸ್ಥೆಗಳ ವೆಬ್​ಸೈಟ್​ಗೆ ಹೋಗಿ ಅಲ್ಲಿ ಪಡೆಯಲು ಯತ್ನಿಸಬಹುದು. ಅಥವಾ ಕಾಯಿನ್ ಡೀಲರ್​ಗಳ ಮೂಲಕ ನಾಣ್ಯ ಪಡೆಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್