AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೃಣಮೂಲ ಮಾಜಿ ನಾಯಕ ತನ್ನ ಹೆಂಡತಿಗೆ ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಎಕೆ 47 ಗಿಫ್ಟ್ ಕೊಟ್ಟ​​! ಆಮೇಲೇನಾಯ್ತು?

AK-47: ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಎಕೆ-47 ರೈಫಲ್ ಉಡುಗೊರೆಯಾಗಿ ನೀಡಿರುವುದಾಗಿ ತೃಣಮೂಲ ಮಾಜಿ ನಾಯಕ ಫೇಸ್​ಬುಕ್​​ ಪೋಸ್ಟ್‌ನಲ್ಲಿ ಬರೆದಿದ್ದರು. ಪತ್ನಿ ಸಬೀನಾ ಯಾಸ್ಮಿನ್​ ಗನ್ ಹಿಡಿದಿರುವ ಫೋಟೋವನ್ನೂ ಶೇರ್ ಮಾಡಿದ್ದರು. ಅಷ್ಟೇ ವೇಗವಾಗಿ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಿಯಾಜುಲ್ ಹಾಕಿರುವ ಪೋಸ್ಟ್‌ ಬಗ್ಗೆ ನೆಟಿಜನ್‌ಗಳು ಕಣ್ಣು ಕೆಂಪಗಾಗಿಸಿಕೊಂಡಿದ್ದರು. ಇನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು.

ತೃಣಮೂಲ ಮಾಜಿ ನಾಯಕ ತನ್ನ ಹೆಂಡತಿಗೆ ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಎಕೆ 47 ಗಿಫ್ಟ್ ಕೊಟ್ಟ​​! ಆಮೇಲೇನಾಯ್ತು?
ಪತ್ನಿಗೆ ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಎಕೆ 47 ಗಿಫ್ಟ್
ಸಾಧು ಶ್ರೀನಾಥ್​
|

Updated on: Aug 30, 2023 | 10:07 PM

Share

ಪತಿ ಮತ್ತು ಪತ್ನಿ ಸಾಮಾನ್ಯವಾಗಿ, ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ (wedding anniversary) ವಿವಿಧ ರೀತಿಯ ಉಡುಗೊರೆಗಳನ್ನು ಕೊಟ್ಟುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ರಾಜಕೀಯ ಮುಖಂಡ ವಿವಾಹ ವಾರ್ಷಿಕೋತ್ಸವದಂದು ತನ್ನ ಪತ್ನಿಗೆ ಎಕೆ 47 ಗನ್ (AK-47) ಉಡುಗೊರೆಯಾಗಿ (gifts) ನೀಡಿದ್ದಾರೆ. ಅಲ್ಲದೇ ಪತ್ನಿ ರೈಫಲ್ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ವೈರಲ್ ಆಗಿತ್ತು. ಪತ್ನಿಗೆ ಎಕೆ 47  ರೈಫಲ್​  ಕೊಟ್ಟಿದ್ದು ಏಕೆ ಎಂದು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಬಿಜೆಪಿ ಅಂತೂ ಸರಿಯಾಗಿ ಝಾಡಿಸಿತ್ತು. ಇದರಿಂದಾಗಿ ಆ ರಾಜಕೀಯ ನಾಯಕ ಪೋಸ್ಟ್ ಅನ್ನು ಅಳಿಸಿದ್ದಾರೆ. ಪತ್ನಿಯ ಕೈಯಲ್ಲಿದ್ದು ಆಟಿಕೆ ಬಂದೂಕು ಎಂದೂ ಈಗ ಸಬೂಬು ಹೇಳಿದ್ದಾನೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದಲ್ಲಿ. ವಿವರ ನೋಡುವುದಾದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ (TMC) ಮಾಜಿ ನಾಯಕ ರಿಯಾದುಲ್ ಹಕ್ (Riazul Haque) ಸೋಮವಾರ ತಮ್ಮ ಫೇಸ್‌ಬುಕ್‌ನಲ್ಲಿ ಈ ಪೋಸ್ಟ್ ಹಾಕಿದ್ದರು.

ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಪತ್ನಿಗೆ ಎಕೆ-47 ರೈಫಲ್ ಅನ್ನು ಉಡುಗೊರೆಯಾಗಿ ನೀಡಿರುವುದಾಗಿ ಅವರು ಪೋಸ್ಟ್‌ನಲ್ಲಿ ಬರೆದಿದ್ದರು. ಪತ್ನಿ ಸಬೀನಾ ಯಾಸ್ಮಿನ್​ (Sabina Yasmin) ಗನ್ ಹಿಡಿದಿರುವ ಫೋಟೋವನ್ನೂ ಶೇರ್ ಮಾಡಿದ್ದರು. ಅಷ್ಟೇ ವೇಗವಾಗಿ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ರಿಯಾಜುಲ್ ಹಾಕಿರುವ ಪೋಸ್ಟ್‌ ಬಗ್ಗೆ ನೆಟಿಜನ್‌ಗಳು ಕಣ್ಣು ಕೆಂಪಗಾಗಿಸಿಕೊಂಡಿದ್ದರು. ಇನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಅವರು ಪ್ರತಿಬಿಂಬಿಸುತ್ತಾರೆ ಎಂದು ಬಿಜೆಪಿ ಮತ್ತು ಸಿಪಿಎಂ ಪಕ್ಷಗಳು ಟೀಕಿಸಿವೆ. ಈ ಫೋಟೋ ಪೋಸ್ಟ್ ಮಾಡುವುದರ ಹಿಂದೆ ಅವರ ಉದ್ದೇಶವಾದರೂ ಏನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯವೂ ಕೇಳಿಬಂದಿದೆ. ವಿವಿಧ ಮುಖಂಡರು ಮತ್ತು ನೆಟಿಜನ್‌ಗಳಿಂದ ತೀವ್ರ ಟೀಕೆಗಳ ಹಿನ್ನೆಲೆಯಲ್ಲಿ ರಿಯಾಜುಲ್ ತಮ್ಮ ಫೇಸ್​ ಬುಕ್​​ ಪೋಸ್ಟ್ ಅನ್ನು ಅಳಿಸಿದ್ದಾರೆ.

ಜೊತೆಗೆ, ತಮ್ಮ ಆ ಫೇಸ್ ಬುಕ್ ಪೋಸ್ಟ್ ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಹೇಳಬೇಕು ಅಂದರೆ, ತನ್ನ ಪತ್ನಿ ಹಿಡಿದಿರುವುದು ನಿಜವಾದ ಎಕೆ-47 ಗನ್ ಅಲ್ಲ, ಅದು ಆಟಿಕೆ ಗನ್ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದರಿಂದ ಯಾವುದೇ ಅಕ್ರಮ, ಆಗಬಾರದ್ದೇನೂ ಆಗಿಲ್ಲ ಎಂದಿದ್ಚದಾರೆ. ನಕಲಿ ಗನ್ ಪ್ರಕರಣದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ. ಅದರೂ ಪೋಸ್ಟ್ ಡಿಲೀಟ್ ಮಾಡುವುದಾಗಿ ಹೇಳಿ, ತೆಗೆದುಹಾಕಿದ್ದಾರೆ. ಏತನ್ಮಧ್ಯೆ, ಡೆಪ್ಯೂಟಿ ಸ್ಪೀಕರ್ ಮತ್ತು ರಾಂಪುರ್​​ಪೋಟ್ ಶಾಸಕ ಆಶಿಶ್ ಬಂಡೋಪಾಧ್ಯಾಯ ಅವರಿಗೆ ಅತ್ಯಂತ ನಿಕಟವಾಗಿರುವ ರಿಯಾಜುಲ್ ಆ ಬ್ಲಾಕ್‌ನ ಟಿಎಂಸಿ ಅಲ್ಪಸಂಖ್ಯಾತ ಸೆಲ್‌ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಕಾರಣಾಂತರಗಳಿಂದ ರಿತಯಾ ಅವರು ತಮ್ಮ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್