ಪಂಜಾಬ್: ಪಟಿಯಾಲದಲ್ಲಿರುವ ಐತಿಹಾಸಿಕ ಶ್ರೀ ಕಾಳಿ ದೇವಿ ಮಂದಿರ ಅಪವಿತ್ರ ಮಾಡಲು ಯತ್ನಿಸಿದ ವ್ಯಕ್ತಿ ಬಂಧನ

ಪಂಜಾಬ್: ಪಟಿಯಾಲದಲ್ಲಿರುವ ಐತಿಹಾಸಿಕ ಶ್ರೀ ಕಾಳಿ ದೇವಿ ಮಂದಿರ ಅಪವಿತ್ರ ಮಾಡಲು ಯತ್ನಿಸಿದ ವ್ಯಕ್ತಿ ಬಂಧನ
ದೇವೀ ಮಂದಿರಲ್ಲಿ ಅಪವಿತ್ರ ಮಾಡಲು ಯತ್ನಿಸಿದ ವ್ಯಕ್ತಿ (ಸಿಸಿಟಿವಿ ದೃಶ್ಯ)

ನೈನ್‌ಕಲನ್ ಗ್ರಾಮದ ನಿವಾಸಿ ರಾಜ್‌ಬೀರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿ, ದೇವಿಯ ವಿಗ್ರಹವನ್ನು ಇರಿಸಲಾಗಿರುವ ದೇವಾಲಯದ ಆವರಣ ಹತ್ತುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ

TV9kannada Web Team

| Edited By: Rashmi Kallakatta

Jan 25, 2022 | 4:07 PM

ಪಟಿಯಾಲ: ಪಟಿಯಾಲದಲ್ಲಿರುವ ಐತಿಹಾಸಿಕ ಶ್ರೀ ಕಾಳಿ ದೇವಿ ಮಂದಿರವನ್ನು(Shri Kali Devi Mandir )ಅಪವಿತ್ರ ಮಾಡಲು ಯತ್ನಿಸಿದ ಆರೋಪದ ಮೇಲೆ ಪಂಜಾಬ್ (Punjab) ಪೊಲೀಸರು ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಿದ್ದಾರೆ. ನೈನ್‌ಕಲನ್ ಗ್ರಾಮದ ನಿವಾಸಿ ರಾಜ್‌ಬೀರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿ, ದೇವಿಯ ವಿಗ್ರಹವನ್ನು ಇರಿಸಲಾಗಿರುವ ದೇವಾಲಯದ ಆವರಣ ಹತ್ತುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ವಿಗ್ರಹ ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ತಲುಪಲು ಯಶಸ್ವಿಯಾದ ನಂತರ ದೇವಿಯ ಮೂರ್ತಿಯನ್ನು ಅಪ್ಪಿಕೊಂಡನು. ಕರ್ತವ್ಯ ನಿರತ ಅರ್ಚಕರು ತಕ್ಷಣವೇ ಕೆಲವು ಭಕ್ತರ ಸಹಾಯದಿಂದ ಆರೋಪಿಯನ್ನು ಹಿಡಿದು ಪೊಲೀಸರು ಬರುವವರೆಗೂ ಅವರನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಟಿಯಾಲ ಉಪ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.  ಘಟನೆ ಬೆಳಕಿಗೆ ಬಂದ ತಕ್ಷಣ, ರಾಜ್ಯದ ರಾಜಕೀಯ ಮುಖಂಡರು ಖಂಡನೆಗಳನ್ನು ಪ್ರಕಟಿಸಿದರು ಮತ್ತು ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ಕೋಮು ದ್ವೇಷವನ್ನು ಹರಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು, “ಇಂದು ಮಧ್ಯಾಹ್ನ 2.30 ರ ಸುಮಾರಿಗೆ ವ್ಯಕ್ತಿಯೊಬ್ಬರು ಪಟಿಯಾಲಾದ ಶ್ರೀ ಕಾಳಿ ಮಾತಾ ಮಂದಿರಕ್ಕೆ ಬಂದು   ಶ್ರೀ ಕಾಳಿ ಮಾತಾಜೀಯ ವಿಗ್ರಹವನ್ನು ಪ್ರತಿಷ್ಠಾಪಿಸಿರುವ ಜಾಗಕ್ಕೆ ಹತ್ತಿದ ನಂತರ, ಅವರು ಸಿಕ್ಕಿಬಿದ್ದರು ಮತ್ತು ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು  ಟ್ವೀಟ್ ಮಾಡಿದ್ದಾರೆ. “ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಜಾಬ್‌ನ ಸಾಮಾಜಿಕ ಸಾಮರಸ್ಯವನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ ಆದರೆ ಅವರ ದುರುದ್ದೇಶಪೂರಿತ ಉದ್ದೇಶಗಳಲ್ಲಿ ಯಶಸ್ವಿಯಾಗಲು ನಾನು ಅವರನ್ನು ಬಿಡುವುದಿಲ್ಲ” ಎಂದು ಚನ್ನಿ ಹೇಳಿದ್ದಾರೆ.

ರಾಜ್ಯದಲ್ಲಿ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ಪುನರಾವರ್ತಿತ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಮಾಜಿ ಸಿಎಂ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಹೇಳಿದ್ದಾರೆ. “ರಾಜ್ಯದ ವಾತಾವರಣಕ್ಕೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆಗೆ ನಾನು ಒತ್ತಾಯಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡಾ ಈ ಯತ್ನವನ್ನು ಖಂಡಿಸಿದ್ದಾರೆ ಮತ್ತು ಪಂಜಾಬ್‌ನಲ್ಲಿ ವಾತಾವರಣವನ್ನು ಹಾಳು ಮಾಡುವ ಪಿತೂರಿಗಳು ಮುಂದುವರೆದಿದೆ ಎಂದು ಹೇಳಿದ್ದಾರೆ.  “ಪಟಿಯಾಲದ ಶ್ರೀ ಕಾಳಿ ಮಾತಾ ಮಂದಿರದಲ್ಲಿ ಅಪವಿತ್ರ ಯತ್ನವು ಅತ್ಯಂತ ಖಂಡನೀಯವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು” ಎಂದು ಎಎಪಿ ನಾಯಕ ಟ್ವೀಟ್ ಮಾಡಿದ್ದಾರೆ.

ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು “ಹಿಂದೂಗಳು ಮತ್ತು ಸಿಖ್ ದೇಗುಲಗಳ ನಡುವೆ ಕೋಮು ದ್ವೇಷವನ್ನು ಹರಡಲು ಪಂಜಾಬ್ ಹೊರಗಿನ ಶಕ್ತಿಗಳ ಪಿತೂರಿಯ ವಿರುದ್ಧ ನಾವು ಭಯಭೀತರಾಗಿದ್ದೇವೆ ಮತ್ತು ಎಚ್ಚರಿಕೆ ನೀಡಿದ್ದೇವೆ. ಕೆಟ್ಟ ಭಯಗಳು ನಿಜವಾಗುತ್ತವೆ. ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಅವರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿರೋಣ” ಎಂದಿದ್ದಾರೆ.

ಕಾಂಗ್ರೆಸ್ ಆಡಳಿತದ ಅಡಿಯಲ್ಲಿ ಪಂಜಾಬ್‌ನಲ್ಲಿ ನಡೆದ ಅಸಂಖ್ಯಾತ ಅಪವಿತ್ರ ಕೃತ್ಯಗಳಲ್ಲಿ ಇದು ಕೇವಲ ಒಂದು. ಈ ಹೇಯ ಕೃತ್ಯಗಳಲ್ಲಿ ಜಟಿಲತೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾಮರಸ್ಯವನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆಯೇ? ಎಂದು ಅವರು ಕೇಳಿದ್ದಾರೆ. ಪಂಜಾಬ್ ಬಿಜೆಪಿ ನಾಯಕ ಸುಭಾಷ್ ಶರ್ಮಾ ಕೂಡ ಘಟನೆಯನ್ನು ಖಂಡಿಸಿದ್ದಾರೆ.

ಕಳೆದ ತಿಂಗಳು ಅಮೃತಸರದ ಗೋಲ್ಡನ್ ಟೆಂಪಲ್‌ನ ಗರ್ಭಗುಡಿಯೊಳಗೆ ಅಪವಿತ್ರ ಯತ್ನ ನಡೆದಿದ್ದು, ನಂತರ ಆರೋಪಿಯನ್ನು ಜನರು ಹೊಡೆದು ಕೊಂದಿದ್ದನ್ನು ಸ್ಮರಿಸಬಹುದಾಗಿದೆ. ಅದೇ ತಿಂಗಳು, ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ನಿಜಾಂಪುರ್‌ನಲ್ಲಿ ಗ್ರಾಮದ ಗುರುದ್ವಾರದಲ್ಲಿ ‘ನಿಶಾನ್ ಸಾಹಿಬ್’ಗೆ ಅಗೌರವ ತೋರಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜನರು ಹತ್ಯೆಗೈದರು.

ಇದನ್ನೂ ಓದಿ: Crime News: ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದವನ ವಿರುದ್ಧ ಆಕ್ರೋಶ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Follow us on

Related Stories

Most Read Stories

Click on your DTH Provider to Add TV9 Kannada