
ಸಾಗರ್, ಫೆಬ್ರವರಿ 13: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಆಗಸ್ಟ್ 20ರಂದು ಪ್ರಿನ್ಸ್ ಎಂಬುವವರು ಏಕಾಏಕಿ ನಾಪತ್ತೆ(Missing)ಯಾಗಿದ್ದರು. ಅವರು ಕಾಣೆಯಾಗಿದ್ದಾರೆಂದು ಪತ್ನಿ ತುಳಸಿ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಸದ್ದಿಲ್ಲದೆ ಪ್ರಕರಣದ ವಿಚಾರಣೆ ಅಂತ್ಯ ಕಂಡಿತ್ತು. ಆದರೆ ಕುಟುಂಬದವರಿಗೆ ಮಾತ್ರ ಅನುಮಾನ ಹಾಗೇ ಮುಂದುವರೆದಿತ್ತು.
ಸೆಪ್ಟಿಕ್ ಟ್ಯಾಂಕ್‌ನಲ್ಲಿ ಸಿಕ್ಕ ತಲೆ ಬುರುಡೆ, ಮೂಳೆಗಳು ಬೇರೆಯದೇ ಕಥೆಯನ್ನು ಹೇಳಿವೆ. ಪ್ರೇಮ, ಮದುವೆ, ದ್ರೋಹದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿವೆ. ಮಧ್ಯಪ್ರದೇಶದ ದಿಯೋರಿ ನಗರದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಆರು ತಿಂಗಳ ನಂತರ ಸತ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಶೋಯೆಬ್ನನ್ನು ನರಸಿಂಗ್ಪುರದಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ತುಳಸಲಿ ಹಾಗೂ ಶೋಯೆಬ್ಗೆ ಮದುವೆಗೂ ಮುಂಚೆಯೇ ಸಂಬಂಧವಿತ್ತು ಎಂಬುದು ತಿಳಿದುಬಂದಿದೆ. ಪ್ರಿನ್ಸ್‌ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಮನೆಯಲ್ಲಿ ಮಲಗಿದ್ದವರೂ ಇಲ್ಲ, ಜಗಳವಾಡಿ ಹೋದವರೂ ಹಿಂದಿರುಗಿಲ್ಲ, ದೆಹಲಿಯಲ್ಲಿ ಹೆಚ್ಚುತ್ತಿವೆ ಮಕ್ಕಳ ನಾಪತ್ತೆ ಪ್ರಕರಣಗಳು
ಮದುವೆಯಾದ ಒಂದು ತಿಂಗಳಿಗೆ ತುಳಸಿಯ ನಡವಳಿಕೆ ಬದಲಾಯಿತು, ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು, ಇಬ್ಬರೂ ಆಕೆಯ ಪೋಷಕರ ಮನೆಯಲ್ಲಿರಬೇಕೆಂದು ದಿಯೋರಿಗೆ ತೆರಳಿದ್ದರು. ನಂತರ ನಡೆದಿದ್ದು ಈ ಕೊಲೆ, ಶೋಯೆಬ್ ಪ್ರಿನ್ಸ್ ದೇವೋರಿಯಲ್ಲಿ ವಾಸಿಸುತ್ತಿದ್ದಾಗ ಅವನೊಂದಿಗೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಪದೇ ಪದೇ ಪ್ರಿನ್ಸ್‌ಗೆ ಮಾದಕ ದ್ರವ್ಯ ನೀಡುತ್ತಿದ್ದ. ಶೋಯೆಬ್ ತುಳಸಿಯನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದ. ಆದರೆ ಅದ್ಹೇಗೋ ಪ್ರಿನ್ಸ್‌ಗೆ ಈ ವಿಚಾರ ತಿಳಿದಾಗ ಇಬ್ಬರ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಆಗ ಉದ್ವಿಗ್ನತೆ ಹೆಚ್ಚಾಗಿತ್ತು.
ಆಗಸ್ಟ್ 20 ರಂದು ಪ್ರಿನ್ಸ್‌ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿದ್ದಾಗಿ ಶೋಯೆಬ್ ಒಪ್ಪಿಕೊಂಡಿದ್ದಾನೆ. ಅನುಮಾನ ಬರದಂತೆ ಶವವನ್ನು ತನ್ನ ಮನೆಯ ಹಿಂದಿನ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದು ಕಸದಿಂದ ಮುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಶೋಯೆಬ್ ಅವರನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದು ಸೆಪ್ಟಿಕ್ ಟ್ಯಾಂಕ್ ಅನ್ನು ಅಗೆದು, ತಲೆಬುರುಡೆ ಮತ್ತು ಇತರ ಅವಶೇಷಗಳನ್ನು ವಶಪಡಿಸಿಕೊಂಡರು. ಅವರ ಗುರುತನ್ನು ದೃಢೀಕರಿಸಲು ಅವಶೇಷಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.
ಕೊಲೆಯ ನಂತರ, ಶೋಯೆಬ್ ತುಳಸಿ ಜೊತೆ ಗುಜರಾತ್‌ಗೆ ಪರಾರಿಯಾಗಿದ್ದ ಎನ್ನಲಾಗಿದೆ, ಅಲ್ಲಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದು ಪ್ರಿನ್ಸ್ ಕುಟುಂಬ ಸದಸ್ಯರಲ್ಲಿ ಅನುಮಾನ ಹುಟ್ಟುಹಾಕಿತ್ತು. ಪೊಲೀಸರಿಗೆ ದೂರು ನೀಡಿದ್ದರು. ಪ್ರಿನ್ಸ್ ನಾಪತ್ತೆ ಆಕಸ್ಮಿಕವಲ್ಲ ಎಂದು ಕುಟುಂಬ ಸದಸ್ಯರು ಯಾವಾಗಲೂ ಹೇಳುತ್ತಲೇ ಇದ್ದರು. ಇಬ್ಬರ ವಿಡಿಯೋಗಳು ವೈರಲ್ ಆದಾಗ ಪೊಲೀಸರಿಗೆ ಅನುಮಾನ ಬಂದು ಶೋಯೆಬ್ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ