ಮನೆಯಲ್ಲಿ ಮಲಗಿದ್ದವರೂ ಇಲ್ಲ, ಜಗಳವಾಡಿ ಹೋದವರೂ ಹಿಂದಿರುಗಿಲ್ಲ, ದೆಹಲಿಯಲ್ಲಿ ಹೆಚ್ಚುತ್ತಿವೆ ಮಕ್ಕಳ ನಾಪತ್ತೆ ಪ್ರಕರಣಗಳು
ದೆಹಲಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿವೆ. 2026ರ ಜನವರಿಯ ಮೊದಲ 27 ದಿನಗಳಲ್ಲಿ 800ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ಅವರಲ್ಲಿ ಅನೇಕ ಅಪ್ರಾಪ್ತ ಮಕ್ಕಳು ಸೇರಿದ್ದಾರೆ. ನಿದ್ರಿಸುತ್ತಿದ್ದವರು, ಜಗಳವಾಡಿ ಹೋದವರೂ ಮರಳಿಲ್ಲ. ದಶಕದಿಂದಲೂ ಸಾವಿರಾರು ಮಕ್ಕಳು ನಾಪತ್ತೆಯಾಗಿದ್ದು, ಇವರಲ್ಲಿ ಶೇಕಡಾ 11ರಷ್ಟು ಮಕ್ಕಳು ಇದುವರೆಗೂ ಪತ್ತೆಯಾಗಿಲ್ಲ.

ನವದೆಹಲಿ, ಫೆಬ್ರವರಿ 06: ದೆಹಲಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಮಕ್ಕಳು(Children) ರಾತ್ರಿ ಮಲಗಿದ್ದವರು ಬೆಳಗಾಗುವಷ್ಟರಲ್ಲಿ ಕಾಣುತ್ತಿಲ್ಲ, ಇನ್ನೂ ಕೆಲವರು ಮನೆಯಿಂದ ಜಗಳವಾಡಿ ಹೋದವರು ಹಿಂದಿರುಗಿಲ್ಲ, ಒಟ್ಟಿನಲ್ಲಿ ನಾಪತ್ತೆ ಪ್ರಕರಣಗಳು ತೀರಾ ಹೆಚ್ಚಾಗಿದೆ. ಜನವರಿ ಮೊದಲ 15 ದಿನಗಳಲ್ಲಿ 800ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದರೆ.120 ಹುಡುಗಿಯರಿದ್ದರೆ , 137 ಮಂದಿ ಅಪ್ರಾಪ್ತ ಬಾಲಕರಿದ್ದಾರೆ. 27 ದಿನಗಳ ಬಳಿಕವೂ ಅವರ ಒಂದೇ ಒಂದು ಸುಳಿವು ಕೂಡಾ ಸಿಕ್ಕಿಲ್ಲ.
2026ರ ಮೊದಲ 27 ದಿನಗಳಲ್ಲಿ807 ಮಂದಿ ಕಾಣೆಯಾಗಿರುವ ಬಗ್ಗೆ ಅಂಕಿ ಅಂಶಗಳು ಲಭ್ಯವಾಗಿವೆ. ಅದರಲ್ಲಿ 235 ಮಂದಿ ಪತ್ತೆಯಾಗಿದ್ದಾರೆ, 572 ಮಂದಿ ಇನ್ನೂ ಪತ್ತೆಯಾಗಿಲ್ಲ. 191 ಅಪ್ರಾಪ್ತ ವಯಸ್ಕರಲ್ಲಿ 48 ಮಂದಿ ಪತ್ತೆಯಾಗಿದ್ದಾರೆ.137 ಮಂದಿ ಪತ್ತೆಯಾಗಿಲ್ಲ.ಕಳೆದ ದಶಕದಲ್ಲಿ (2016-2026): 60,694 ಮಕ್ಕಳು (0-18) ಕಣ್ಮರೆಯಾಗಿದ್ದಾರೆ. 53,763 ಮಂದಿ ಸಿಕ್ಕಿದ್ದಾರೆ. ಶೇ. 11 ರಷ್ಟು ಮಂದಿ ಹಿಂದಿರುಗಲೇ ಇಲ್ಲ. 2015-2025, 5,559 ಮಕ್ಕಳು ಕಾಣೆಯಾಗಿದ್ದಾರೆ, 695 ಪ್ರಕರಣಗಳು ಇತ್ಯರ್ಥಗೊಂಡಿಲ್ಲ.
8 ವರ್ಷ ವಯಸ್ಸಿನವರು: 9 ಕಾಣೆಯಾಗಿದ್ದಾರೆ (6 ಪತ್ತೆಯಾಗಿದ್ದಾರೆ); ಎಂಟರಿಂದ ಹನ್ನೆರಡು ವರ್ಷದೊಳಗಿನವರಲ್ಲಿ, ಎಂಟು ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳು ಸೇರಿದಂತೆ 13 ಮಕ್ಕಳು ಕಾಣೆಯಾಗಿದ್ದಾರೆ. ಕೇವಲ ಮೂವರು ಗಂಡು ಮಕ್ಕಳು ಪತ್ತೆಯಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಒಂಬತ್ತು ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಪೊಲೀಸರು ಮೂವರು ಗಂಡು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ.
ಮತ್ತಷ್ಟು ಓದಿ: ಪೋಷಕರು ಬೈದಿದ್ದಕ್ಕೆ ಬಸ್ ಫ್ರೀ ಎಂದು ತಮ್ಮನ ಜೊತೆ ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ
ಬಿಹಾರದ ಕಿಶನ್‌ಗಂಜ್ ಮೂಲದ ತೆಮುಲ್ ಹಕ್ ಮತ್ತು ರೂಬಿ ದೆಹಲಿಯ ಬುರಾರಿಯ ಮೌರ್ಯ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮೂವರು ಮಕ್ಕಳು , ಹಿರಿಯ ಮಗ ವಾಸಿಮ್ ರಜಾ, ಡಿಸೆಂಬರ್ 27 ರಾತ್ರಿ, ವಾಸಿಮ್ ಮನೆಯಲ್ಲಿ ಮಲಗಿದ್ದ, ಡಿಸೆಂಬರ್ 28 ಬೆಳಗ್ಗೆ 9 ಗಂಟೆಗೆ ಮನೆಬಿಟ್ಟು ಹೋದವನು ಇನ್ನೂ ವಾಪಸಾಗಿಲ್ಲ.
ಇನ್ನು ಬುರಾರಿಯ ಸಂತನಗರದಲ್ಲಿ ರಿತಿಕ್ ಝಾ ಜೆಇಇ ಮೇನ್ಸ್ಗೆ ತಯಾರಿ ನಡೆಸುತ್ತಿದ್ದ, ಡಿಸೆಂಬರ್ 17ರಂದು ಪರೀಕ್ಷೆಗೆ ಓದಿಕೋ ಎಂದು ಅವನ ತಾಯಿ ಗದರಿದಾಗ ಬೇಸರದಿಂದ ಮನೆಬಿಟ್ಟು ಹೋದವನು ಹಿಂದಿರುಗಿ ಬಂದಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಯಾವುದೇ ಏರಿಕೆ ಇಲ್ಲ – ಜನವರಿ 2026 ರ ವರದಿಗಳು ಕಡಿಮೆಯಾಗಿವೆ.
2025 ರಲ್ಲಿ ದೆಹಲಿಯಲ್ಲಿ 24,508 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದು, 14,870 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದು ಒಂದೇ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚು ಪ್ರಕರಣಗಳು. 9,638 ಪುರುಷರು ನಾಪತ್ತೆಯಾಗಿದ್ದಾರೆ. ಪೊಲೀಸರು 15,421 ವ್ಯಕ್ತಿಗಳನ್ನು ಪತ್ತೆಹಚ್ಚಿದ್ದರೂ, 9,087 ಪ್ರಕರಣಗಳು ಬಗೆಹರಿಯದೆ ಉಳಿದಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
