ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಐವರು ದೋಷಿಗಳು: ಸಾಕೇತ್ ಕೋರ್ಟ್ ತೀರ್ಪು
Soumya Vishwanathan Murder Case: ಆರೋಪಿಗಳ ವಿರುದ್ಧ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಯನ್ನು ಜಾರಿಗೊಳಿಸಿದ್ದರು. 2009ರಲ್ಲಿ ಬಿಪಿಒ ಉದ್ಯೋಗಿ ಜಿಗೀಷಾ ಹತ್ಯೆ ಪ್ರಕರಣದ ತನಿಖೆಯ ವೇಳೆ ಆರೋಪಿಯೊಬ್ಬ ಪತ್ರಕರ್ತೆಯ ಹತ್ಯೆಯಲ್ಲೂ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಾಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿತ್ತು.
ದೆಹಲಿ ಅಕ್ಟೋಬರ್ 18: ಟಿವಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ (Journalist Soumya Vishwanathan) ಅವರ ಹತ್ಯೆ ಪ್ರಕರಣದಲ್ಲಿ ನಾಲ್ವರು ದೋಷಿಗಳು ಎಂದು ನವದೆಹಲಿಯ ಸಾಕೇತ್ ನ್ಯಾಯಾಲಯವು (Saket court )ಇಂದು (ಬುಧವಾರ) ತೀರ್ಪು ನೀಡಿದೆ. ಕಳ್ಳತನದ ಆಸ್ತಿ ಪಡೆದಿದ್ದಕ್ಕಾಗಿ ಮತ್ತೊಬ್ಬ ವ್ಯಕ್ತಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಪಾಂಡೆ ಶುಕ್ರವಾರ ತೀರ್ಪನ್ನು ಕಾಯ್ದಿರಿಸಿದ್ದರು. 2008 ರ ಸೆಪ್ಟೆಂಬರ್ 30 ರಂದು ದಕ್ಷಿಣ ದೆಹಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ (Nelson Mandela Marg) 3:30 ಕ್ಕೆ ತನ್ನ ಕಾರಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಸೌಮ್ಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ದೆಹಲಿಯ ವಸಂತ ವಿಹಾರ್‌ನಲ್ಲಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರ ಹತ್ಯೆ ನಡೆದು ಬರೋಬ್ಬರಿ 15 ವರ್ಷಗಳ ನಂತರ ಅಪರಾಧಿಗಳನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ. 2008 ರ ಸೆಪ್ಟೆಂಬರ್ 30 ರ ಮುಂಜಾನೆ ಶಸ್ತ್ರಸಜ್ಜಿತ ದರೋಡೆ ಪ್ರಕರಣವೆಂದು ಪೋಲೀಸರು ಪ್ರತಿಪಾದಿಸಿದ ಹೆಡ್‌ಲೈನ್ಸ್ ಟುಡೇ – ಈಗಿನ ಇಂಡಿಯಾ ಟುಡೇ – 25 ವರ್ಷದ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರನ್ನು ವಸಂತ್ ವಿಹಾರ್‌ನ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಹತ್ಯೆ ಮಾಡಲಾಗಿತ್ತು
ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್, ಅಜಯ್ ಕುಮಾರ್ ಮತ್ತು ಅಜಯ್ ಸೇಥಿ ಎಂಬ ಐದು ಜನರನ್ನು ಈ ಹತ್ಯಾ ಪ್ರಕರಣದಲ್ಲಿ ಬಂಧಿಸಿದ್ದು, ಇವರು ಮಾರ್ಚ್ 2009 ರಿಂದ ಬಂಧನದಲ್ಲಿದ್ದಾರೆ.
ಆರೋಪಿಗಳ ವಿರುದ್ಧ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಯನ್ನು ಜಾರಿಗೊಳಿಸಿದ್ದರು. 2009ರಲ್ಲಿ ಬಿಪಿಒ ಉದ್ಯೋಗಿ ಜಿಗೀಷಾ ಹತ್ಯೆ ಪ್ರಕರಣದ ತನಿಖೆಯ ವೇಳೆ ಆರೋಪಿಯೊಬ್ಬ ಪತ್ರಕರ್ತನ ಹತ್ಯೆಯಲ್ಲೂ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಾಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿತ್ತು.
ಮಲಿಕ್ ಮತ್ತು ಇತರ ಇಬ್ಬರು – ರವಿ ಕಪೂರ್ ಮತ್ತು ಅಮಿತ್ ಶುಕ್ಲಾ – ಈ ಹಿಂದೆ 2009 ರಲ್ಲಿ ಐಟಿ ಎಕ್ಸಿಕ್ಯೂಟಿವ್ ಜಿಗಿಶಾ ಘೋಷ್ ಹತ್ಯೆಯಲ್ಲಿ ದೋಷಿಗಳಾಗಿದ್ದರು. ಜಿಗೀಷಾ ಹತ್ಯೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದು, ಪತ್ರಕರ್ತೆಯ ಕೊಲೆ ಪ್ರಕರಣ ಭೇದಿಸುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬೆಲೆ ಹೆಚ್ಚಳದ ಹಿಂದೆ ಅದಾನಿ ಗ್ರೂಪ್ ಕೈವಾಡ, ₹32,000 ಕೋಟಿ ಹಗರಣ ಆರೋಪ ಹೊರಿಸಿದ ರಾಹುಲ್ ಗಾಂಧಿ ವಿಚಾರಣಾ ನ್ಯಾಯಾಲಯವು 2017 ರಲ್ಲಿ ಜಿಗಿಶಾ ಕೊಲೆ ಪ್ರಕರಣದಲ್ಲಿ ಕಪೂರ್ ಮತ್ತು ಶುಕ್ಲಾಗೆ ಮರಣದಂಡನೆ ಮತ್ತು ಮಲಿಕ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಮುಂದಿನ ವರ್ಷ, ಆದಾಗ್ಯೂ, ದೆಹಲಿ ಹೈಕೋರ್ಟ್ ಕಪೂರ್ ಮತ್ತು ಶುಕ್ಲಾ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದು, ಜಿಗೀಷಾ ಕೊಲೆ ಪ್ರಕರಣದಲ್ಲಿ ಮಲಿಕ್ ಅವರ ಜೀವಾವಧಿಯನ್ನು ಶಿಕ್ಷೆ ತೀರ್ಪನ್ನು ಎತ್ತಿಹಿಡಿದಿತ್ತು.
ಸೌಮ್ಯ ಕೊಲೆ ಪ್ರಕರಣದ ಟೈಮ್ಲೈನ್
- ಸೆಪ್ಟೆಂಬರ್ 30, 2008: ದಕ್ಷಿಣ ದೆಹಲಿಯ ವಸಂತ್ ಕುಂಜ್‌ನ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಸೌಮ್ಯ ವಿಶ್ವನಾಥನ್ ಅವರು ಬೆಳಿಗ್ಗೆ 3.30 ರ ಸುಮಾರಿಗೆ ತಮ್ಮ ಕಾರಿನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.
- ಮಾರ್ಚ್ 28, 2009: ಐಟಿ ಎಕ್ಸಿಕ್ಯೂಟಿವ್ ಜಿಗೀಶಾ ಘೋಷ್ ಅವರ ಹತ್ಯೆಗೆ ಬಳಸಲಾದ ಆಯುಧವನ್ನು ವಶಪಡಿಸಿಕೊಂಡ ನಂತರ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್, ಅಜಯ್ ಕುಮಾರ್ ಮತ್ತು ಅಜಯ್ ಸೇಥಿ ಎಂಬವರನ್ನು ಬಂಧಿಸಲಾಗಿತ್ತು. ಸೌಮ್ಯ ಕೊಲೆಯಲ್ಲಿ ಅದೇ ಆರೋಪಿಗಳ ಕೈವಾಡವನ್ನು ಬಹಿರಂಗ.
- ಏಪ್ರಿಲ್ 2009: ಸೌಮ್ಯ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಕಟ್ಟುನಿಟ್ಟಾದ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಯನ್ನು ಜಾರಿಗೊಳಿಸಿದರು.
- ಜೂನ್ 22, 2009: ಐವರು ಆರೋಪಿಗಳ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಕೆ.
- ಫೆಬ್ರವರಿ 6, 2010: ರವಿ ಕಪೂರ್, ಬಲ್ಜೀತ್ ಸಿಂಗ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಮತ್ತು ಅಜಯ್ ಸೇಥಿ ವಿರುದ್ಧ ಕೊಲೆ, ದರೋಡೆ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು.
- ಮೇ 9, 2011: ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪಗಳನ್ನು ರಚಿಸಲಾಗಿದೆ.
- ಆಗಸ್ಟ್ 2016: ವಿಚಾರಣಾ ನ್ಯಾಯಾಲಯವು ಕಪೂರ್ ಮತ್ತು ಶುಕ್ಲಾಗೆ ಮರಣದಂಡನೆ ವಿಧಿಸಿದರೆ, 2009 ರ ಜಿಗಿಶಾ ಘೋಷ್ ಹತ್ಯೆ ಪ್ರಕರಣದಲ್ಲಿ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
- ಜನವರಿ 2018: ದೆಹಲಿ ಹೈಕೋರ್ಟ್ ಕಪೂರ್ ಮತ್ತು ಶುಕ್ಲಾ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಮಲಿಕ್ ಅವರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಲಾಯಿತು.
- ಫೆಬ್ರವರಿ 27, 2019: ಮಲಿಕ್ ಸಲ್ಲಿಸಿದ ಮನವಿಯ ಆಧಾರದ ಮೇಲೆ ಸೌಮ್ಯಾ ಹತ್ಯೆ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ದೆಹಲಿ ಹೈಕೋರ್ಟ್ ಆದೇಶ.
- ಮಾರ್ಚ್ 2022: ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ಸಲ್ಲಿಸಿದ ನಂತರ ನ್ಯಾಯಾಲಯವು ಆರೋಪಿಯ ಸಾಕ್ಷ್ಯವನ್ನು ದಾಖಲಿಸಲು ಪ್ರಾರಂಭಿಸುತ್ತದೆ.
- ಮೇ 2023: ಸಾಕ್ಷ್ಯದ ರೆಕಾರ್ಡಿಂಗ್ ಮುಕ್ತಾಯವಾದ ನಂತರ ಅಂತಿಮ ವಾದಗಳು ಪ್ರಾರಂಭವಾಗುತ್ತವೆ.
- ಅಕ್ಟೋಬರ್ 13, 2023: ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಪಾಂಡೆ ಅವರು ಪ್ರತಿವಾದ ಮತ್ತು ಪ್ರಾಸಿಕ್ಯೂಷನ್‌ನಿಂದ ವಾದಗಳನ್ನು ಪೂರ್ಣಗೊಳಿಸಿದ ನಂತರ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದಾರೆ. ಅಕ್ಟೋಬರ್ 14 ರೊಳಗೆ ಎಲ್ಲಾ ಕಕ್ಷಿದಾರರು ಯಾವುದೇ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
- ಅಕ್ಟೋಬರ್ 18, 2023: ಕೊಲೆ ಪ್ರಕರಣದಲ್ಲಿ ಕಪೂರ್, ಶುಕ್ಲಾ, ಕುಮಾರ್ ಮತ್ತು ಮಲಿಕ್ ಅವರನ್ನು ಅಪರಾಧಿಗಳೆಂದು ಘೋಷಿಸಿದ ದೆಹಲಿ ನ್ಯಾಯಾಲಯ. ಕದ್ದ ಆಸ್ತಿಯನ್ನು ಪಡೆದಿದ್ದಕ್ಕಾಗಿ ಸೇಥಿಗೆ ಶಿಕ್ಷೆ ವಿಧಿಸಲಾಗಿದೆ. MCOCA ಅಡಿಯಲ್ಲಿ ಎಲ್ಲಾ ಐವರು ಅಪರಾಧಿಗಳು ಎಂದು ಸಾಕೇತ್ ನ್ಯಾಯಾಲಯ ಹೇಳಿದೆ.
- ಅಕ್ಟೋಬರ್ 26, 2023: ನ್ಯಾಯಾಲಯವು ಅಕ್ಟೋಬರ್ 26 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Wed, 18 October 23