ಸಲ್ಮಾನ್​ ಖಾನ್ ಮನೆ ಬಳಿ ಗುಂಡಿನ ದಾಳಿಗೂ ಮುನ್ನ ಅನ್ಮೋಲ್​ ಶೂಟರ್​ಗೆ ಹೇಳಿದ್ದೇನು?

|

Updated on: Jul 25, 2024 | 11:27 AM

ಏಪ್ರಿಲ್ 14 ರಂದು ಸಲ್ಮಾನ್ ಖಾನ್ ಅವರ ಮನೆ ಬಳಿ ನಡೆದ ಗುಂಡಿನ ದಾಳಿಗೆ ಮುನ್ನ, ಅನ್ಮೋಲ್ ಬಿಷ್ಣೋಯ್ ಶೂಟರ್‌ಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದರು, ಆ ಸೂಚನೆಗಳೇನು ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಸಲ್ಮಾನ್​ ಖಾನ್ ಮನೆ ಬಳಿ ಗುಂಡಿನ ದಾಳಿಗೂ ಮುನ್ನ ಅನ್ಮೋಲ್​ ಶೂಟರ್​ಗೆ ಹೇಳಿದ್ದೇನು?
ಲಾರೆನ್ಸ್​
Follow us on

ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಕ್ರೈಂ ಬ್ರಾಂಚ್ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ.

ಚಾರ್ಜ್ ಶೀಟ್ ಪ್ರಕಾರ, ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ ಅನ್ಮೋಲ್ ಅವರು ಮನೆಯ ಹೊರಗೆ ಗುಂಡು ಹಾರಿಸಿದ ಶೂಟರ್‌ಗಳಲ್ಲಿ ಒಬ್ಬರಿಗೆ ಸಂದೇಶವನ್ನು ನೀಡಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಖಾನ್ ಭಯಪಡುವ ರೀತಿಯಲ್ಲಿ ಗುಂಡು ಹಾರಿಸುವಂತೆ ಕೇಳಿದ್ದರು.

ಏಪ್ರಿಲ್ 14 ರ ಬೆಳಗ್ಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ವಿಕ್ಕಿ ಕುಮಾರ್ ಗುಪ್ತಾ ಮತ್ತು ಸಾಗರ್ ಪಾಲ್ ಎಂಬ ಇಬ್ಬರು ಬೈಕ್​ನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದರು.

ಕ್ರೈಂ ಬ್ರ್ಯಾಂಚ್ ​ 1,735 ಪುಟಗಳ ಚಾರ್ಜ್ ಶೀಟ್ ಅನ್ನು ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯಕ್ಕೆ ಈ ತಿಂಗಳ ಆರಂಭದಲ್ಲಿ ಸಲ್ಲಿಸಿತು.
ಮುಂಬೈನಲ್ಲಿ ತನ್ನ ಭದ್ರಕೋಟೆ ಮತ್ತು ಪ್ರಾಬಲ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಬಾಲಿವುಡ್ ಸೂಪರ್‌ಸ್ಟಾರ್ ಖಾನ್ ಅವರ ಮನೆಗೆ ಗುಂಡಿನ ಸಂಚು ರೂಪಿಸಲಾಗಿತ್ತು.

ಮತ್ತಷ್ಟು ಓದಿ: ಗುಂಡಿನ ದಾಳಿ ಕೇಸ್​: ಯಾರ ಮೇಲೆ ಅನುಮಾನ ಇದೆ ಎಂಬುದು ತಿಳಿಸಿದ ಸಲ್ಮಾನ್​ ಖಾನ್

ವಿಕ್ಕಿ ಕುಮಾರ್ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಹೊರತುಪಡಿಸಿ, ಸೋನು ಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಹರ್ಪಾಲ್ ಸಿಂಗ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅದೇ ಸಮಯದಲ್ಲಿ, ಮುಂಬೈ ಪೊಲೀಸರ ಅಪರಾಧ ವಿಭಾಗವು ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್ ಮತ್ತು ರಾವತರನ್ ಬಿಷ್ಣೋಯ್ ಅವರನ್ನು ಚಾರ್ಜ್ ಶೀಟ್‌ನಲ್ಲಿ ವಾಂಟೆಡ್ ಆರೋಪಿಗಳಾಗಿ ತೋರಿಸಿದೆ.

ಅನ್ಮೋಲ್​ ಶೂಟರ್​ ಬಳಿ ನಿಮಗೆ ಸಿಗರೇಟ್ ಸೇದುವ ಅಭ್ಯಾಸವಿದ್ದರೆ ಮೊದಲು ಅವರ ಮನೆ ಬಳಿಗೆ ಹೋಗಿ ಸಿಗರೇಟ್​ ಸೇದಿ ಆಗ ನೀವು ನಿರ್ಭೀತ ವ್ಯಕ್ತಿಯಂತೆ ಕಾಣುತ್ತೀರಿ ಆಗ ಫೈರಿಂಗ್ ಶುರುಮಾಡಿ ಎಂದು ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:27 am, Thu, 25 July 24