ಇಡಿ ಕಚೇರಿಗೆ ಆಗಮಿಸಿದ ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್

ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಇಂದು ಬೆಳಗ್ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಮನ್ಸ್ ಬಳಿಕ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದಾರೆ. ಆಕೆಯ ಮಗಳು ಮತ್ತು ಸಂಜಯ್ ರಾವುತ್ ಸಹೋದರ ಸನಿಲ್ ರಾವುತ್ ಅವರೊಂದಿಗೆ ಬಂದಿದ್ದಾರೆ.

ಇಡಿ ಕಚೇರಿಗೆ ಆಗಮಿಸಿದ ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್
Sanjay Raut's wife Varsha Raut
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 06, 2022 | 12:08 PM

ಮುಂಬೈ: ಬಂಧಿತ ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಇಂದು ಬೆಳಗ್ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಮನ್ಸ್ ಬಳಿಕ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದಾರೆ. ಆಕೆಯ ಮಗಳು ಮತ್ತು ಸಂಜಯ್ ರಾವುತ್ ಸಹೋದರ ಸನಿಲ್ ರಾವುತ್ ಅವರೊಂದಿಗೆ ಬಂದಿದ್ದಾರೆ. ಎರಡು ದಿನಗಳ ಹಿಂದೆ ಮುಂಬೈನ ವಿಶೇಷ ನ್ಯಾಯಾಲಯವು ಸಂಜಯ್ ರಾವುತ್ ಅವರ ಇಡಿ ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದ ಕೆಲವೇ ಗಂಟೆಗಳ ನಂತರ ವಸತಿ ಯೋಜನೆಯಲ್ಲಿನ ಆಪಾದಿತ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತನಿಖಾ ಸಂಸ್ಥೆಯಿಂದ Ms ರಾವುತ್ ಅವರನ್ನು ಕರೆಸಲಾಯಿತು.

ಕೇಂದ್ರ ತನಿಖಾ ಸಂಸ್ಥೆ ವರ್ಷಾ ರಾವತ್ ಅವರನ್ನು ಪದೇ ಪದೇ ಹೆಸರಿಸಿದೆ ಆದರೆ ಇಲ್ಲಿಯವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ನಾಲ್ಕು ತಿಂಗಳ ಹಿಂದೆ, ಮುಂಬೈನ ಗೋರೆಗಾಂವ್‌ನಲ್ಲಿರುವ ಪತ್ರಾ ಚಾಲ್‌ನ ಮರು ಅಭಿವೃದ್ಧಿಯಲ್ಲಿ 1,000 ಕೋಟಿ ರೂಪಾಯಿ ಹಗರಣವನ್ನು ಆರೋಪಿಸಿರುವ ಇಡಿ ವರ್ಷಾ ರಾವುತ್ ಮತ್ತು ಸಂಜಯ್ ರಾವುತ್ ಅವರ ಇಬ್ಬರು ಸಹಚರರ 11 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಇವುಗಳಲ್ಲಿ ವರ್ಷಾ ರಾವುತ್ ಹೊಂದಿದ್ದ ದಾದರ್‌ನಲ್ಲಿನ ಫ್ಲಾಟ್, ಅಲಿಬಾಗ್‌ನಲ್ಲಿ ಅವರು ಸ್ವಪ್ನಾ ಪಾಟ್ಕರ್ ಜೊತೆ ಜಂಟಿಯಾಗಿ ಹೊಂದಿದ್ದ ಎಂಟು ಪ್ಲಾಟ್‌ಗಳನ್ನು ಒಳಗೊಂಡಿತ್ತು.

ಸಂಜಯ್ ರಾವುತ್ ಅವರ ಆಪ್ತ ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಈಗ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ. ಕಳೆದ ತಿಂಗಳು ಆಕೆಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬಂದಿತ್ತು ಆದರೆ ಸಂಜಯ್ ರಾವತ್ ಇದನ್ನು ನಿರಾಕರಿಸಿದ್ದಾರೆ.ಪತ್ರಾ ಚಾಲ್ ಯೋಜನೆಗಾಗಿ ರಾವುತ್ ಕುಟುಂಬವು 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಪರಾಧದ ಆದಾಯ ಪಡೆದಿದೆ ಎಂದು ಇಡಿ ಆರೋಪಿಸಿದೆ . ಆರೋಪಗಳನ್ನು ತಿರಸ್ಕರಿಸಿದ ಸಂಜಯ್ ರಾವುತ್ ಅವರು ಈ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ
Image
Rakshabandhan: ರಕ್ಷಾಬಂಧನಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ ಯೋಗಿ ಆದಿತ್ಯನಾಥ್
Image
Vice President Election 2022: ಇಂದು ಉಪರಾಷ್ಟ್ರಪತಿ ಚುನಾವಣೆ; ಜಗದೀಪ್ ಧನಕರ್- ಮಾರ್ಗರೆಟ್ ಆಳ್ವ ಮಧ್ಯೆ ಸ್ಪರ್ಧೆ
Image
Karnataka Rain: ಭಾರೀ ಮಳೆಯಿಂದ ಮಲೆನಾಡು, ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ; ಕೊಡಗಿನಲ್ಲಿ ಇಂದು ಶಾಲಾ- ಕಾಲೇಜುಗಳಿಗೆ ರಜೆ
Image
ಕಾಂಗ್ರೆಸ್ ಇಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರ ಹಿಂದೆ ಈ ಉದ್ದೇಶವೂ ಇದೆ: ಅಮಿತ್ ಶಾ ಹೇಳಿದ್ದೇನು?

ಸೋಮವಾರ ಮಧ್ಯರಾತ್ರಿಯ ನಂತರ ಜಾರಿ ನಿರ್ದೇಶನಾಲಯವು ರಾವುತ್ ಅವರನ್ನು ಉಪನಗರ ಗೋರೆಗಾಂವ್‌ನಲ್ಲಿ ಚಾಲ್ ಅಥವಾ ಹಳೆಯ ಸಾಲು ವಠಾರದ ಮರುಅಭಿವೃದ್ಧಿಯಲ್ಲಿನ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Sat, 6 August 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು