ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸದ್ ಟಿವಿಯ ಯುಟ್ಯೂಬ್ ಖಾತೆ ರದ್ದು
ಯುಟ್ಯೂಬ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಖಾತೆಯನ್ನು ರದ್ದು ಮಾಡಲಾಗಿದೆ. ಚಾನೆಲ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಖಾತೆ ರದ್ದು ಮಾಡಲಾಗಿದೆ ಎಂದು ತೋರಿಸುವ ಸ್ಕ್ರೀನ್ ಶಾಟ್ನ್ನು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ದೆಹಲಿ: ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಪ್ರಸಾರ ಮಾಡುವ ಸಂಸದ್ ಟಿವಿಯ (Sansad TV) ಯುಟ್ಯೂಬ್ ಖಾತೆಯನ್ನು(YouTube account) ರದ್ದುಗೊಳಿಸಲಾಗಿದೆ. ಯುಟ್ಯೂಬ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಖಾತೆಯನ್ನು ರದ್ದು ಮಾಡಲಾಗಿದೆ. ಚಾನೆಲ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಖಾತೆ ರದ್ದು ಮಾಡಲಾಗಿದೆ ಎಂದು ತೋರಿಸುವ ಸ್ಕ್ರೀನ್ ಶಾಟ್ನ್ನು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ವರದಿಯ ಪ್ರಕಾರ ಸಂಸದ್ ಟಿವಿಯ ಯುಟ್ಯೂಬ್ ಚಾನಲ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ಹೆಸರನ್ನು Ethereum ಎಂದು ಬದಲಾಯಿಸಲಾಗಿದೆ ಎಂದು ದಿ ಕ್ವಿಂಟ್ ಡಾಟ್ ಕಾಂ ವರದಿ ಮಾಡಿದೆ. ಆದಾಗ್ಯೂ, ಯುಟ್ಯೂಬ್ ಚಾನೆಲ್‌ನಿಂದ ಯಾವ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಯುಟ್ಯೂಬ್ ಅನ್ನು ಹೊಂದಿರುವ ಗೂಗಲ್ ಗೆ ಕಳುಹಿಸಲಾದ ಮೇಲ್ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ನಂತರ ಬೆಳಿಗ್ಗೆ ಯುಟ್ಯೂಬ್ ಖಾತೆಯು 404 Error ತೋರಿಸಿದೆ. ಇದರ ಜತೆಗೆ ಈ ಪುಟವು ಲಭ್ಯವಿಲ್ಲ. ಆ ಬಗ್ಗೆ ಕ್ಷಮಿಸಿ. ಬೇರೆ ಯಾವುದನ್ನಾದರೂ ಹುಡುಕಲು ಪ್ರಯತ್ನಿಸಿ ಎಂಬ ಸಂದೇಶವನ್ನೂ ತೋರಿಸಿದೆ.
ಯುಟ್ಯೂಬ್ ಪ್ರಕಾರ, ಅದರ ಸಮುದಾಯ ಮಾರ್ಗಸೂಚಿಗಳು ಪ್ಲಾಟ್‌ಫಾರ್ಮ್‌ನಲ್ಲಿ “ಯಾವ ರೀತಿಯ ವಿಷಯವನ್ನು ಅನುಮತಿಸಲಾಗುವುದಿಲ್ಲ” ಎಂಬುದನ್ನು ವಿವರಿಸುತ್ತದೆ. ಇದು ವಿಡಿಯೊಗಳು, ವಿಡಿಯೊಗಳಲ್ಲಿನ ಕಾಮೆಂಟ್‌ಗಳು ಮತ್ತು ಲಿಂಕ್‌ಗಳು ಮತ್ತು ಥಂಬ್‌ನೇಲ್‌ಗಳು ಸೇರಿದಂತೆ ಎಲ್ಲಾ ರೀತಿಯ ವಿಷಯಗಳಿಗೆ ಅನ್ವಯಿಸುತ್ತದೆ.
ವೇದಿಕೆಯ ಪ್ರಕಾರ ವಿಮರ್ಶಕರು ಮತ್ತು ಮೆಷಿನ್ ಲರ್ನಿಂಗ್ ಸಂಯೋಜನೆಯನ್ನು ಬಳಸಿಕೊಂಡು” ಎಲ್ಲರಿಗೂ ಸಮಾನವಾಗಿ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತದೆ. ನಮ್ಮ ನೀತಿಗಳು ಯುಟ್ಯೂಬ್ ಅನ್ನು ಸುರಕ್ಷಿತ ಸಮುದಾಯವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ, ಆದರೆ ಕ್ರಿಯೇಟರ್ ಗಳಿಗೆ ವ್ಯಾಪಕವಾದ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಸ್ವಾತಂತ್ರ್ಯವನ್ನು ನೀಡುತ್ತವ ಪ್ಲಾಟ್‌ಫಾರ್ಮ್‌ನ ಸಮುದಾಯ ಮಾರ್ಗಸೂಚಿಗಳು ಹೇಳುತ್ತದೆ.
ಸ್ಪಾಮ್ ಮತ್ತು ಮೋಸಗೊಳಿಸುವ ಕ್ರಿಯೆ, ಸೂಕ್ಷ್ಮ ವಿಷಯ, ಫೇಕ್ ಎಂಗೇಜ್ಮೆಂಟ್, ಮಕ್ಕಳ ಸುರಕ್ಷತೆ, ಸೋಗು ಹಾಕುವಿಕೆ, ನಗ್ನತೆ ಮತ್ತು ಲೈಂಗಿಕ ವಿಷಯ, ಆತ್ಮಹತ್ಯೆ ಮತ್ತು ಸ್ವಯಂ-ಗಾಯ, ಮತ್ತು ಇತರ ಅಸಭ್ಯ ಭಾಷೆಗಳು ವಿಡಿಯೊದ ಪ್ಲೇಬ್ಯಾಕ್ ಯುಟ್ಯೂಬ್ ಖಾತೆ ರದ್ದುಗೊಳಿಸಲಿರುವ ಕಾರಣಗಳಾಗಿವೆ.
Published On - 12:11 pm, Tue, 15 February 22