Viral Video: ಸಂಪ್ರದಾಯಬದ್ಧವಾಗಿ ಸೀರೆಯುಟ್ಟು ಕುದುರೆ ಸವಾರಿ ಮಾಡ್ತಾರೆ ಈ ಮೊನಾಲಿಸಾ; ಹಳ್ಳಿ ಮಹಿಳೆಗೆ ಯೂಟ್ಯೂಬ್​​ನಲ್ಲಿ ಭರ್ಜರಿ ಫಾಲೋವರ್ಸ್​​

| Updated By: Digi Tech Desk

Updated on: Jun 07, 2021 | 4:39 PM

ಮೊನಾಲಿಸಾ ತನ್ನ ಸಾಧನೆಯ ಎಲ್ಲ ಕ್ರೆಡಿಟ್​​ನ್ನೂ ಪತಿ ಬದ್ರಿ ನಾರಾಯಣ ಭದ್ರಾ ಅವರಿಗೇ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದು, ಕ್ರಿಯೇಟಿವ್​ ಡೈರೆಕ್ಟರ್​ ಕೂಡ ಹೌದು.

Viral Video: ಸಂಪ್ರದಾಯಬದ್ಧವಾಗಿ ಸೀರೆಯುಟ್ಟು ಕುದುರೆ ಸವಾರಿ ಮಾಡ್ತಾರೆ ಈ ಮೊನಾಲಿಸಾ; ಹಳ್ಳಿ ಮಹಿಳೆಗೆ ಯೂಟ್ಯೂಬ್​​ನಲ್ಲಿ ಭರ್ಜರಿ ಫಾಲೋವರ್ಸ್​​
ಮೊನಾಲಿಸಾ ಭದ್ರಾ
Follow us on

ಒಡಿಶಾದ ಜೈಪುರ ಜಿಲ್ಲೆಯ ಜಹಾಲ್​​ ಎಂಬ ಹಳ್ಳಿಯಲ್ಲಿ ಮಹಿಳೆಯೊಬ್ಬರಿದ್ದಾರೆ..ಹೆಸರು ಮೊನಾಲಿಸಾ ಭದ್ರಾ. ಇವರೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬ ಟ್ರೆಂಡ್ ಆಗುತ್ತಿರುವ ಮಹಿಳೆ. ಸಂಪ್ರದಾಯಬದ್ಧವಾಗಿ ಸೀರೆಯುಟ್ಟು, ಕುದುರೆ ಸವಾರಿ ಮಾಡ್ತಾರೆ..ಟ್ರಕ್, ಬುಲೆಟ್​​ ಓಡಿಸ್ತಾರೆ..ಅಷ್ಟೇ ಅಲ್ಲ, ಟ್ರ್ಯಾಕ್ಟರ್​​ನಿಂದ ಹೊಲವನ್ನೂ ಉಳುತ್ತಾರೆ. ನೆನಪಿರಲಿ ಅಷ್ಟೂ ಕೆಲಸವನ್ನೂ ಸೀರೆ ಉಟ್ಟು, ಕೈತುಂಬ ಬಳೆತೊಟ್ಟು ಮಾಡೋದ್ರಿಂದ ತುಂಬ ವಿಶೇಷ ಅನ್ನಿಸ್ತಾರೆ. ಅಪ್ಪಟ ಗೃಹಿಣಿಯಾಗಿರುವ ಇವರು ಸದ್ಯ ಯೂಟ್ಯೂಬ್ ಸ್ಟಾರ್​. ಲಕ್ಷಾಂತರ ಜನ ಫಾಲೋವರ್ಸ್​ ಕೂಡ ಇವರಿಗೆ ಇದ್ದಾರೆ.

ಮೊನಾಲಿಸಾ ತಾವು ಬುಲೆಟ್​, ಟ್ರಕ್​ ಓಡಿಸುವ ವಿಡಿಯೋಗಳನ್ನು ತಮ್ಮ ಯೂಟ್ಯೂಬ್​ ಚಾನಲ್​​ಗಳಲ್ಲಿ ಪೋಸ್ಟ್ ಮಾಡುತ್ತಾರೆ. 2016ರ ಮೇ ತಿಂಗಳಲ್ಲಿ ಇವರ ಯೂಟ್ಯೂಬ್​ ಚಾನಲ್​ ಕ್ರಿಯೇಟ್​ ಆಗಿದ್ದು, ಸದ್ಯ 2.26 ಮಿಲಿಯನ್​ ಮಂದಿ ಸಬ್​ಸ್ಕ್ರೈಬ್​​ ಆಗಿದ್ದಾರೆ.

ಮೊನಾಲಿಸಾ ತನ್ನ ಸಾಧನೆಯ ಎಲ್ಲ ಕ್ರೆಡಿಟ್​​ನ್ನೂ ಪತಿ ಬದ್ರಿ ನಾರಾಯಣ ಭದ್ರಾ ಅವರಿಗೇ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದು, ಕ್ರಿಯೇಟಿವ್​ ಡೈರೆಕ್ಟರ್​ ಕೂಡ ಹೌದು. ಬದ್ರಿ ನಾರಾಯಣ್​ ಅವರೇ ತಮ್ಮ ಪತ್ನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದು. ಈಗ ಮೊನಾಲಿಸಾ ಯೂಟ್ಯೂಬ್​​ನಲ್ಲಿ ತಮ್ಮ ಒಂದು ವಿಡಿಯೋ ಅಪ್​ಲೋಡ್​ ಮಾಡಿದರೆ ಸುಮಾರು1.5 ಲಕ್ಷ ರೂ.ಗೂ ಅಧಿಕ ಹಣ ಗಳಿಸುತ್ತಿದ್ದಾರೆ. ಇವರ ಚಾನೆಲ್​​ಗೆ ಭೇಟಿ ನೀಡಿದರೆ, ಅಲ್ಲಿ ಮೊನಾಲಿಸಾ ಅವರು ಗದ್ದೆ ಹೂಳುವುದು, ನೆಟ್ಟಿ ಮಾಡುವುದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ವೋಲ್ವೋ ಬಸ್​ ಚಾಲನೆ ಮಾಡಿದ್ದು ಸೇರಿ ಹಲವು ವಿಧದ ವಿಡಿಯೋಗಳನ್ನು ನೋಡಬಹುದು. ಆದರೆ ಪ್ರತಿಕೆಲಸವನ್ನೂ ಸಂಪ್ರದಾಯಬದ್ಧವಾಗಿ ಸೀರೇ ಉಟ್ಟೇ ಮಾಡುತ್ತಾರೆ. ಇದರ ಹೊರತಾಗಿ ಮೊನಾಲಿಸಾ ಪ್ರಾಣಿ ಪ್ರಿಯೆಯೂ ಹೌದು. ಕೋತಿ ಮರಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತನ್ನ ಮಗಳೊಂದಿಗೆ ಸೇರಿ ಆ ಮರಿಗಳಿಗೆ ಆಹಾರ ಉಣಬಡಿಸುತ್ತಾರೆ. ಹಲವು ಸಾಕುಪ್ರಾಣಿಗಳಿರುವ ಇವರ ಮನೆ ಥೇಟ್​ ಝೂನಂತೆ ಕಾಣುತ್ತದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಹೋರಾಟಗಾರ್ತಿ ನಾಝಿಯಾ ಅಫ್ರಿನ್​, ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿ ಮಹಿಳೆಯರು ನಾಲ್ಕು ಗೋಡೆ ಮಧ್ಯೆಯೇ ಇರಬೇಕು ಎಂದು ಪುರುಷರು ಬಯಸುತ್ತಾರೆ. ಅದೇ ಕಾರಣಕ್ಕೆ ಹಿಂಸಿಸಲ್ಪಡುತ್ತಾರೆ. ಹೀಗಿರುವಾಗ ಮೊನಾಲಿಸಾ ಅವರನ್ನು ನೋಡಿದರೆ ಖುಷಿಯಾಗುತ್ತದೆ. ಇವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.

Published On - 4:13 pm, Mon, 7 June 21