ಇದು ಊಸರವಳ್ಳಿಯಂತೆ ಬಣ್ಣ ಬದಲಿಸುವ ಸೀರೆ

|

Updated on: Sep 26, 2023 | 1:10 PM

ಚೇತನ ಕಲಾರತ್ನ ಪ್ರಶಸ್ತಿ ಪುರಸ್ಕೃತರಾದ ನಲ್ಲ ವಿಜಯ್ ಎಂಬುವವರು ನೂತನ ವಿನ್ಯಾಸದ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಯು ಊಸರವಳ್ಳಿಯಂತೆ ಬದಲಾಯಿಸುತ್ತೆ ಎಂಬುದೇ ವಿಶೇಷ. ಇದು ಮೂರು ಬಣ್ಣಗಳನ್ನು ಬದಲಾಯಿಸಲಿದೆ. ವಿಜಯ್ ಅವರ ತಂದೆ ರಾಜಣ್ಣ ಸಿರಸಿಲ್ಲ ಇಬ್ಬರೂ ಸೇರಿ ಈ ಅದ್ಭುತ ಸೀರೆಯನ್ನು ನೇಯ್ದಿದ್ದಾರೆ.

ಇದು ಊಸರವಳ್ಳಿಯಂತೆ ಬಣ್ಣ ಬದಲಿಸುವ ಸೀರೆ
ಸೀರೆ
Follow us on

ಚೇತನ ಕಲಾರತ್ನ ಪ್ರಶಸ್ತಿ ಪುರಸ್ಕೃತರಾದ ನಲ್ಲ ವಿಜಯ್ ಎಂಬುವವರು ನೂತನ ವಿನ್ಯಾಸದ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಯು ಊಸರವಳ್ಳಿಯಂತೆ ಬದಲಾಯಿಸುತ್ತೆ ಎಂಬುದೇ ವಿಶೇಷ. ಇದು ಮೂರು ಬಣ್ಣಗಳನ್ನು ಬದಲಾಯಿಸಲಿದೆ. ವಿಜಯ್ ಅವರ ತಂದೆ ರಾಜಣ್ಣ ಸಿರಸಿಲ್ಲ ಇಬ್ಬರೂ ಸೇರಿ ಈ ಅದ್ಭುತ ಸೀರೆಯನ್ನು ನೇಯ್ದಿದ್ದಾರೆ.

ಇಷ್ಟು ದಿನ ನೀವು ಸಾವಿರಾರು ತರಹದ ಸೀರೆಗಳನ್ನು ನೋಡಿರುತ್ತೀರಿ ಒಂದು ಸೀರೆಯಲ್ಲಿ ಹತ್ತಾರು ಬಣ್ಣಗಳಿರಬಹುದು, ಒಂದು ಕಡೆಯಿಂದ ಒಂದು ಬಣ್ಣ ಮತ್ತೊಂದು ಕಡೆಯಿಂದ ಮತ್ತೊಂದು ಶೇಡ್​ ಇರುವ ಸೀರೆಯನ್ನು ಕೂಡ ನೋಡಿರಬಹುದು ಆದರೆ. ಮೂರು ಬಣ್ಣವನ್ನು ಬದಲಿಸುವ ಊಸರವಳ್ಳಿಯಂಥಾ ಸೀರೆಯನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ.

ಈ ಸೀರೆಯನ್ನು ನೇಯಲು ವಿಜಯ್ 2.80 ಲಕ್ಷ ರೂ. ಖರ್ಚು ಮಾಡಿದ್ದಾರೆ. ವಿಜಯ್ ಅವರ ಕೈಚಳಕದಿಂದ ಪ್ರಭಾವಿತರಾದ ಹೈದರಾಬಾದ್ ನ ಉದ್ಯಮಿ ವಿಷ್ಣು ಪ್ರಸಾದ್ ಸೀರೆಗೆ ಆರ್ಡರ್ ಮಾಡಿದ್ದಾರೆ.

ಸಚಿವ ಕೆಟಿ ರಾಮರಾವ್ ಅವರು ಸೋಮವಾರ ಹೈದರಾಬಾದ್‌ನಲ್ಲಿ ಸೀರೆಯನ್ನು ಅನಾವರಣಗೊಳಿಸಿದರು. ಸೀರೆಯು 6.30 ಮೀಟರ್ ಉದ್ದ, 48 ಇಂಚು ಅಗಲ ಮತ್ತು 600 ಗ್ರಾಂ ತೂಕವನ್ನು ಹೊಂದಿದೆ. ಈ ಸೀರೆ ತಯಾರಿಕೆಯಲ್ಲಿ ವಿಜಯ್ 30 ಗ್ರಾಂ ಚಿನ್ನ ಮತ್ತು 500 ಗ್ರಾಂ ಬೆಳ್ಳಿಯನ್ನು ಮಿಶ್ರಣ ಮಾಡಿದ್ದಾರೆ.

25 ಲಕ್ಷ ರೂಪಾಯಿ ವೆಚ್ಚದ ಇನ್ನೊಂದು ಸೀರೆಯನ್ನೂ ಅವರು ನೇಯುತ್ತಿದ್ದಾರೆ. ಕೆಟಿಆರ್ ಅವರಿಂದ ಶೀಘ್ರದಲ್ಲೇ ಸಿರಸಿಲ್ಲಾದಲ್ಲಿ ಅನಾವರಣಗೊಳ್ಳಲಿದೆ.

ಮತ್ತಷ್ಟು ಓದಿ: Viral Video: ಸೀರೆಯುಟ್ಟು ಹೈಹೀಲ್ಸ್ ಧರಿಸಿ ನೃತ್ಯ ಮಾಡಿದ ಮಹಿಳೆಯ ವಿಡಿಯೋ ವೈರಲ್

ಈ ಹಿಂದೆ ವಿಜಯ್ ಅವರು ಸುಗಂಧ ಸೂಸುವ ಸೀರೆಯನ್ನು ತಯಾರಿಸಿದ್ದರು. ಅದನ್ನು ತಯಾರಿಸಲು ಅವರು ಗಿಡಮೂಲಿಕೆಗಳನ್ನು ಬಳಸಿದರು. ಸೂಜಿಯ ಕಣ್ಣಿನಲ್ಲಿ ಹಾದು ಹೋಗುವಂತಹ ಸೀರೆಯನ್ನೂ ಮಾಡಿಸಿದರು. ಅವರ ತಂದೆ ದಿವಂಗತ ಪರಂದಾಮುಲು ಅವರು ಬೆಂಕಿಕಡ್ಡಿಯೊಳಗೆ ಹೊಂದಿಕೊಳ್ಳುವ ಸೀರೆಯನ್ನು ತಯಾರಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ