ಕಾಶ್ಮೀರದಲ್ಲಿ ಎಲ್ಲಾ ಮೂರು ಉಗ್ರರು ಹತ; ಸೇನೆಯ ಸೂಪರ್​ಹೀರೋ ‘ಫ್ಯಾಂಟಮ್’ ಹುತಾತ್ಮ

Terrorism in Jammu and Kashmir: ಜಮ್ಮು ಜಿಲ್ಲೆಯ ಅಖ್ನೂರ್ ಸೆಕ್ಟರ್​ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಸಂಹರಿಸಿವೆ. ಈ ಉಗ್ರರು ಸೋಮವಾರ ಬೆಳಗ್ಗೆ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ಎಸಗಿದ್ದರು. ನಿನ್ನೆ ಸಂಜೆ ಒಬ್ಬ, ಇವತ್ತು ಬೆಳಗ್ಗೆ ಇಬ್ಬರು ಉಗ್ರರು ವಧೆಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸೇನೆಯ ವೀರ ಶ್ವಾನ ಎನಿಸಿದ ‘ಫ್ಯಾಂಟಂ’ ಬಲಿಯಾಗಿದೆ.

ಕಾಶ್ಮೀರದಲ್ಲಿ ಎಲ್ಲಾ ಮೂರು ಉಗ್ರರು ಹತ; ಸೇನೆಯ ಸೂಪರ್​ಹೀರೋ ‘ಫ್ಯಾಂಟಮ್’ ಹುತಾತ್ಮ
ಆರ್ಮಿ ಡಾಗ್

Updated on: Oct 29, 2024 | 10:38 AM

ಜಮ್ಮು, ಅಕ್ಟೋಬರ್ 29: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್​ನಲ್ಲಿ ನಿನ್ನೆ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ್ದ ಎಲ್ಲಾ ಮೂವರು ಉಗ್ರಗಾಮಿಗಳು ಹತರಾಗಿದ್ದಾರೆ. ನಿನ್ನೆ ಸಂಜೆಯೇ ಒಬ್ಬ ಉಗ್ರನನ್ನು ಕೊಲ್ಲಲಾಗಿತ್ತು. ಇಂದು ಮಂಗಳವಾರ ಇಬ್ಬರು ಭಯೋತ್ಪಾದಕರನ್ನು ಸೈನಿಕರು ವಧಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಸೇನೆಯ ನಾಲ್ಕು ವರ್ಷದ ಶ್ವಾನ ‘ಫ್ಯಾಂಟಂ’ ಹುತಾತ್ಮವಾಗಿದೆ.

ಸೇನೆಯ ವಿಶೇಷ ಪಡೆಗಳು ಮತ್ತು ಎನ್​ಎಸ್​ಜಿ ಕಮಾಂಡೋಗಳು ಸೋಮವಾರ ಬೆಳಗ್ಗೆಯಿಂದಲೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿವೆ. ಸೋಮವಾರ ಬೆಳಗ್ಗೆ ಎಲ್​ಒಸಿ ಸಮೀಪ ಸೇನಾ ವಾಹನಗಳು ಹಾದು ಹೋಗುತ್ತಿದ್ದಾಗ, ಆಂಬುಲೆನ್ಸ್​ವೊಂದರ ಮೇಲೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದ. ಆತ ಹಾಗೂ ಆತನ ಜೊತೆ ಇದ್ದ ಉಗ್ರರ ಗುಂಪು ಅಲ್ಲಿಂದ ತಪ್ಪಿಸಿಕೊಂಡು ಹೋದರು.

ಇದನ್ನೂ ಓದಿ: ಕೇರಳದ ಕಾಸರಗೋಡಿನಲ್ಲಿ ಪಟಾಕಿ ಅವಘಡ: ಭಯಾನಕ ವಿಡಿಯೋ ಇಲ್ಲಿದೆ

ಅದೇ ಪ್ರದೇಶದಲ್ಲಿ ಇದ್ದ ಹಾಸನ ದೇವಸ್ಥಾನದಲ್ಲಿನ ವಿಗ್ರಹಗಳನ್ನು ಉಗ್ರರು ವಿರೂಪಗೊಳಿಸಿ ಹೋಗಿದ್ದರು. ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶದ ಸುತ್ತಮುತ್ತ ನಾಕಾಬಂದಿ ಹಾಕಿ, ಶೋಧ ಕಾರ್ಯಾಚರಣೆ ಆರಂಭಿಸಿದವು.

ಉಗ್ರರನ್ನು ಹುಡುಕಲು ಬಿಎಂಪಿ-2 ಇನ್​ಫ್ಯಾಂಟ್ರಿ ಕಾಂಬ್ಯಾಟ್ ವಾಹನಗಳು ಹೆಲಿಕಾಪ್ಟರ್ ಮತ್ತು ಡ್ರೋನ್​ಗಳನ್ನು ಬಳಸಲಾಯಿತು.

ಸೇನಾ ಶ್ವಾನ ‘ಫ್ಯಾಂಟಂ’ ವೀರಮರಣ

ಭದ್ರತಾ ಪಡೆಗಳು ಉಗ್ರರನ್ನು ಪತ್ತೆ ಮಾಡಿ ಅವರನ್ನು ಸುತ್ತುವರಿಯತೊಡಗಿದಾಗ ಉಗ್ರರು ಗುಂಡಿನ ದಾಳಿ ಎಸಗಿದರು. ಈ ವೇಳೆ ನಾಲ್ಕು ವರ್ಷದ ಸೇನಾ ಶ್ವಾನ ‘ಫ್ಯಾಂಟಂ’ ಬಲಿಯಾಗಿದೆ.

ಇದನ್ನೂ ಓದಿ: ಜಮ್ಮುವಿನ ಅಖ್ನೂರ್​ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಉಗ್ರರ ದಾಳಿ; ಗುಲ್ಮಾರ್ಗ್​ನಲ್ಲಿ ಗುಂಡಿನ ಚಕಮಕಿ

‘ಧೈರ್ಯಶಾಲಿ ಸೇನಾ ಶ್ವಾನವಾದ ಫ್ಯಾಂಟಂ ನಿಜವಾದ ಹೀರೋ, ಈ ನಾಯಿಯ ಬಲಿದಾನಕ್ಕೆ ನಮ್ಮ ಸಲ್ಯೂಟ್. ಫ್ಯಾಂಟಂನ ಧೈರ್ಯ, ವಿಧೇಯತೆ ಮತ್ತು ಬದ್ಧತೆಯನ್ನು ಯಾವತ್ತೂ ಮರೆಯಲು ಆಗಲ್ಲ’ ಎಂದು ಜಮ್ಮುವಿನ ವೈಟ್ ನೈಟ್ ಕಾರ್ಪ್ಸ್ ವಿಭಾಗವು ತನ್ನ ಎಕ್ಸ್ ಪೋಸ್ಟ್​ನಲ್ಲಿ ಬರೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ