ಭಯೋತ್ಪಾದಕರ ಸಂಭವನೀಯ ದಾಳಿ ತಡೆದ ಬಿಎಸ್ಎಫ್; ಸ್ವಾತಂತ್ರ್ಯ ದಿನಾಚರಣೆ ಮುನ್ನ ದಾಳಿಗೆ ಸಂಚು

ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಮಂಕೋಟೆಯ ಸಂಗಡ್ ಹಳ್ಳಿಯ ಅರಣ್ಯ ಪ್ರದೇಶದಿಂದ ಜಮ್ಮುನಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (BSF) ವಕ್ತಾರರು ಹೇಳಿದ್ದಾರೆ.

ಭಯೋತ್ಪಾದಕರ ಸಂಭವನೀಯ ದಾಳಿ ತಡೆದ ಬಿಎಸ್ಎಫ್; ಸ್ವಾತಂತ್ರ್ಯ ದಿನಾಚರಣೆ ಮುನ್ನ ದಾಳಿಗೆ ಸಂಚು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 09, 2021 | 5:42 PM

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸೋಮವಾರ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಐದು ದಿನಗಳ ಮುಂಚೆ ಎಕೆ 47 ದಾಳಿ ರೈಫಲ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು, ಡಿಟೋನೇಟರ್‌ಗಳು ಮತ್ತು ಪಿಸ್ತೂಲ್‌ಗಳನ್ನು ಒಳಗೊಂಡಂತೆ ಒಂದು ದೊಡ್ಡ ಸಂಗ್ರಹವನ್ನು ವಶಪಡಿಸಿಕೊಳ್ಳುವ ಮೂಲಕ ಭಯೋತ್ಪಾದಕ ಯೋಜನೆಯನ್ನು ವಿಫಲಗೊಳಿಸಿವೆ. ಇನ್ನೊಂದು ಘಟನೆಯಲ್ಲಿ ಕಿಶ್ತ್‌ವಾರ್ ಜಿಲ್ಲೆಯ ಹಿಜ್ಬುಲ್ ಮುಜಾಹಿದ್ದೀನ್​​ನ ಹೊಸದಾಗಿ ನೇಮಕಗೊಂಡ ಇಬ್ಬರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ)ಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಮಂಕೋಟೆಯ ಸಂಗಡ್ ಹಳ್ಳಿಯ ಅರಣ್ಯ ಪ್ರದೇಶದಿಂದ ಜಮ್ಮುನಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (BSF) ವಕ್ತಾರರು ಹೇಳಿದ್ದಾರೆ.

ಶೋಧ ಕಾರ್ಯಾಚರಣೆಗಳ ಸಮಯದಲ್ಲಿ ಎರಡು ಎಕೆ -47 ದಾಳಿ ರೈಫಲ್‌ಗಳು, 4 ಎಕೆ ಮ್ಯಾಗಜಿನ್, ಒಂದು ಚೈನೀಸ್ ಪಿಸ್ತೂಲ್, 10 ಪಿಸ್ತೂಲ್ ಮ್ಯಾಗಜಿನ್, ಒಂದು ವೈರ್‌ಲೆಸ್ ಸೆಟ್ ಐ-ಕಾಮ್, ನಾಲ್ಕು ಚೀನೀ ಹ್ಯಾಂಡ್ ಗ್ರೆನೇಡ್‌ಗಳು, ನಾಲ್ಕು ಡಿಟೋನೇಟರ್‌ಗಳು (ವಿದ್ಯುತ್ ರಹಿತ), ಒಂಬತ್ತು ವಿದ್ಯುತ್ ಡಿಟೋನೇಟರ್‌ಗಳು , ಚೀನೀ ಗ್ರೆನೇಡ್‌ಗಳ ಡಿಟೋನೇಟರ್‌ಗಳಿಗೆ 15 ಫ್ಯೂಸ್, 16 ಮೀಟರ್ ಕಾರ್ಡೆಕ್ಸ್ ವೈರ್, 257 ಸುತ್ತು ಎಕೆ ಮದ್ದುಗುಂಡು, 68 ಸುತ್ತು 9 ಎಂಎಂ ಮದ್ದುಗುಂಡು, 23 ಸುತ್ತು 7.65 ಎಂಎಂ ಮದ್ದುಗುಂಡು, ಎರಡು ನೋಕಿಯಾ ಮೊಬೈಲ್ ಫೋನ್‌ಗಳು, 12 ಬ್ಯಾಟರಿ ಮೊಬೈಲ್ ಚಾರ್ಜರ್‌ಗಳು ಮತ್ತು ಎರಡು 9V ಬ್ಯಾಟರಿಗಳನ್ನು ವಶಪಡಿಸಲಾಗಿದೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನೊಂದು ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಕಿಶ್ತ್‌ವಾರ್ ಜಿಲ್ಲೆಯ ಹಿಜ್ಬುಲ್ ಮುಜಾಹಿದ್ದೀನ್​ನ ಹೊಸದಾಗಿ ನೇಮಕಗೊಂಡ ಇಬ್ಬರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಅವರನ್ನು ಜಿಲ್ಲೆಯ ದಹನ್ ತಹಸಿಲ್‌ನ ಸೌಂದರ್‌ನ ಗುಲಾಂ ರಸೂಲ್ ಅವರ ಪುತ್ರ ಯಾಸಿರ್ ಹುಸೇನ್ ಮತ್ತು ಜಿಲ್ಲೆಯ ಅದೇ ತಹಸಿಲ್‌ನ ಟ್ಯಾಂಡರ್‌ನ ಗುಲಾಂ ಖಾದಿರ್ ಅವರ ಮಗ ಉಸ್ಮಾನ್ ಖಾದಿರ್ ಎಂದು ಗುರುತಿಸಲಾಗಿದೆ.

ಶನಿವಾರ ಯುವಕರು ಇಬ್ಬರೂ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುವ ಉದ್ದೇಶದಿಂದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸ್ ವಕ್ತಾರರು ಹೇಳಿದರು.

ಭಾನುವಾರ ಪೊಲೀಸ್ ಉಪ ಅಧೀಕ್ಷಕರಾದ (ಎಸ್‌ಪಿ) ಕಾರ್ಯಾಚರಣೆಗಳ ನೇತೃತ್ವದ ಪೋಲಿಸ್ ಪಾರ್ಟಿ, ದೇವಿಂದರ್ ಸಿಂಗ್ ಬಂದ್ರಾಲ್, ಇನ್‌ಸ್ಪೆಕ್ಟರ್ ದಿಲ್‌ರಾಜ್ ಸಿಂಗ್ ಮತ್ತು ಭಾರತೀಯ ಸೇನೆಯ 17 ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 52 ಬೆಟಾಲಿಯನ್ ಯೋಧರೊಂದಿಗೆ ಸಹಾಯ ಮಾಡಿದರು. ಇಬ್ಬರು ಭಯೋತ್ಪಾದಕರು ಜಿಲ್ಲೆಯ ಟ್ಯಾಂಡರ್-ದಚನ್ ಪ್ರದೇಶದಲ್ಲಿ ಇರುವುದಾಗಿ ಮಾಹಿತಿ ನೀಡಿದ ನಂತರ ಶೋಧ ಕಾರ್ಯಾಚರಣೆ ಇಬ್ಬರನ್ನೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಟ್ಯಾಂಡರ್-ದಚನ್ ನ ಕಲೈಂಗಸ್ಸು ಪ್ರದೇಶದಿಂದ ಬಂಧಿಸಲಾಗಿದೆ ಎಂದು ವಕ್ತಾರರು ಹೇಳಿದರು. ಆ ಪ್ರದೇಶದಲ್ಲಿ ಮತ್ತಷ್ಟು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದರು.

ಸೋಮವಾರ ಜಮ್ಮು, ಸಾಂಬಾ, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಅನುಮಾನಾಸ್ಪದ ಚಲನವಲನಗಳ ವರದಿಯ ನಂತರ ಭದ್ರತಾ ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಗಳನ್ನು ಆರಂಭಿಸಿವೆ.

ಇದನ್ನೂ ಓದಿ: ದೆಹಲಿಯ ಜಂತರ್ ಮಂತರ್​​ನಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆ, ಎಫ್ಐಆರ್ ದಾಖಲು

ಇದನ್ನೂ ಓದಿ:  ಸ್ವಾತಂತ್ರ್ಯ ಬಂದ ಮೇಲೆ ಮೋದಿ ಹುಟ್ಟಿದ್ದು; ನಾನು ಮೋದಿಗಿಂತ ಸೀನಿಯರ್ ಗೊತ್ತಾ? ನಮಗೇ ಪಾಠ ಮಾಡ್ತಾರೆ: ಸಿದ್ದರಾಮಯ್ಯ

(Security forces in Jammu and Kashmir claimed to have foiled a terror plot five days before the 75th Independence Day)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್