ಕೇಂದ್ರ ಸಚಿವ ನಿತಿನ್ ಗಡ್ಕರಿಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯ ಬಂಧನ

ಕೇಂದ್ರ ಸಚಿವ ನಿತಿನ್ ಗಡ್ಕರಿಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರತನ್ ಕಾರ್ತಿಕ್ ಕಸ್ತೂರಿ (33) ಎಂದು ಗುರುತಿಸಲಾಗಿದೆ. ಗಡ್ಕರಿಯವರ ಆಪ್ತ ಸಹಾಯಕ ಕೌಸ್ತುಭ್ ಫಲ್ಟಂಕರ್ ನೀಡಿದ ದೂರಿನ ಪ್ರಕಾರ, ರತನ್​​ನನ್ನು ಬಂಧಿಸಲಾಗಿದೆ. ಕೌಸ್ತುಭ್ ಅವರ ಪತ್ನಿ ಬಂಗಲೆಯ ನೆಲ ಮಹಡಿಯಲ್ಲಿ ವಕೀಲರ ಕಚೇರಿ ನಡೆಸುತ್ತಿದ್ದಾರೆ

ಕೇಂದ್ರ ಸಚಿವ ನಿತಿನ್ ಗಡ್ಕರಿಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯ ಬಂಧನ
ನಿತಿನ್ ಗಡ್ಕರಿ

Updated on: Oct 23, 2025 | 9:46 AM

ನಾಗ್ಪುರ, ಅಕ್ಟೋಬರ್ 23: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari)ಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರತನ್ ಕಾರ್ತಿಕ್ ಕಸ್ತೂರಿ (33) ಎಂದು ಗುರುತಿಸಲಾಗಿದೆ. ಗಡ್ಕರಿಯವರ ಆಪ್ತ ಸಹಾಯಕ ಕೌಸ್ತುಭ್ ಫಲ್ಟಂಕರ್ ನೀಡಿದ ದೂರಿನ ಪ್ರಕಾರ, ರತನ್​​ನನ್ನು ಬಂಧಿಸಲಾಗಿದೆ.

ಕೌಸ್ತುಭ್ ಅವರ ಪತ್ನಿ ಬಂಗಲೆಯ ನೆಲ ಮಹಡಿಯಲ್ಲಿ ವಕೀಲರ ಕಚೇರಿ ನಡೆಸುತ್ತಿದ್ದಾರೆ. ರಾತ್ರಿ 10.55 ರ ಸುಮಾರಿಗೆ, ಇತ್ತೀಚೆಗೆ ಬಂಗಲೆಯ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡ ಕಸ್ತೂರಿ, ಕಚೇರಿಗೆ ಪ್ರವೇಶಿಸಿ ಕದಿಯುವ ಉದ್ದೇಶದಿಂದ ಡ್ರಾಯರ್ ತೆರೆಯಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ನನ್ನ ವಿರುದ್ಧ ಪೇಯ್ಡ್ ಅಭಿಯಾನ; ಆನ್‌ಲೈನ್‌ನಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆ ಕುರಿತ ಟೀಕೆಗೆ ನಿತಿನ್ ಗಡ್ಕರಿ ಬೇಸರ

ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕೆಲಸಗಾರ ಅದನ್ನು ಗಮನಿಸಿ ಫಾಲ್ಟಂಕರ್ ಅವರಿಗೆ ತಿಳಿಸಿದಾಗ, ಅವರು ಕಚೇರಿಗೆ ಬೀಗ ಹಾಕಿ ಪೊಲೀಸರಿಗೆ ಕರೆ ಮಾಡಿದರು. ಬೆಲ್ತರೋಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 305 (2) (ವಾಸದ ಮನೆಯಲ್ಲಿ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us