ದೆಹಲಿ: ದೆಹಲಿಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರಿಗಾಗಿ (Transgender) ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ, ದೆಹಲಿ ಸರ್ಕಾರ ಮತ್ತು ರಾಷ್ಟ್ರ ರಾಜಧಾನಿಯ ಎಲ್ಲಾ ಪುರಸಭೆಗಳಿಗೆ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಅರ್ಜಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸಮಯ ನೀಡಿದ್ದು ಸೆಪ್ಟೆಂಬರ್ 13 ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.
ಅರ್ಜಿದಾರರಾದ ಕಾನೂನು ವಿದ್ಯಾರ್ಥಿ ಜಾಸ್ಮಿನ್ ಕೌರ್ ಛಬ್ರಾ, ಲಿಂಗಬೇಧವಿಲ್ಲದೆ ಪ್ರತಿಯೊಬ್ಬ ಮನುಷ್ಯನೂ ಕೆಲವು ಮೂಲಭೂತ ಮಾನವ ಹಕ್ಕುಗಳನ್ನು ಹೊಂದಿದ್ದಾನೆ, ಇದರಲ್ಲಿ ಪ್ರತ್ಯೇಕ ಸಾರ್ವಜನಿಕ ಶೌಚಾಲಯವನ್ನು ಹೊಂದುವ ಹಕ್ಕಿದೆ. “ಯಾವುದೇ ಒಂದು ನಿರ್ದಿಷ್ಟ ಲಿಂಗಕ್ಕಿರುವ ಸಾರ್ವಜನಿಕ ಶೌಚಾಲಯವನ್ನು ಬೇರೆ ಯಾವುದೇ ಲಿಂಗದವರು ಬಳಸಲು ಹೇಳುವುದು ಮೂಲಭೂತವಾಗಿ ಅಥವಾ ನೈತಿಕವಾಗಿ ನ್ಯಾಯಯುತವಾಗಿ ಸರಿಯಲ್ಲ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರತ್ಯೇಕ ಸಾರ್ವಜನಿಕ ವಾಶ್ ರೂಂ ಬಳಸಲು ಸೌಲಭ್ಯವಿಲ್ಲದಿರುವುದು ಸಂವಿಧಾನದ 14 ಮತ್ತು 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಛಬ್ರಾ ವಾದಿಸಿದರು. “ಮೂರನೇ ಲಿಂಗವು ಗಂಡು ಮತ್ತು ಹೆಣ್ಣುಗಾಗಿ ತಯಾರಿಸಿದ ವಾಶ್‌ರೂಮ್‌ಗಳನ್ನು ಬಳಸಿದಾಗ, ಅವರ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಲಾಗುತ್ತದೆ” ಎಂದು ಅರ್ಜಿದಾರರು ಹೇಳಿದರು, ಅವರು ಪುರುಷರಿಗಾಗಿ ನಿರ್ಮಿಸಲಾದ ಶೌಚಾಲಯಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಗುರಿಯಾಗುತ್ತಾರೆ.
2017 ರಲ್ಲಿ ಹೊರಡಿಸಲಾದ ಸ್ವಚ್ಛ ಭಾರತ್ ಮಿಷನ್ (ನಗರ) ಪರಿಷ್ಕೃತ ಮಾರ್ಗಸೂಚಿಗಳು ಟ್ರಾನ್ಸ್ಜೆಂಡರ್ಗಳ ಶೌಚಾಲಯಕ್ಕಾಗಿ ಪ್ರತ್ಯೇಕ ಆಸನಗಳನ್ನು ರಚಿಸಲು ಶಿಫಾರಸು ಮಾಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಲೈಂಗಿಕ ಓರಿಯೆಟೇಶನ್ ಅಥವಾ ಲಿಂಗ ಗುರುತಿಸುವಿಕೆಯ ಆಧಾರದ ಮೇಲೆ ತಾರತಮ್ಯವು ಕಾನೂನಿನ ಮುಂದೆ ಸಮಾನತೆಯನ್ನು ಮತ್ತು ಕಾನೂನಿನ ಸಮಾನ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ.
ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 (Transgender Persons (Protection of Rights) Act) ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ, ಚಳುವಳಿ ಮತ್ತು ವಾಸಿಸುವ ಹಕ್ಕಿನಲ್ಲಿ ಒಬ್ಬ ಟ್ರಾನ್ಸ್ಜೆಂಡರ್ ವ್ಯಕ್ತಿಯ ವಿರುದ್ಧದ ತಾರತಮ್ಯವನ್ನು ಅಪರಾಧೀಕರಿಸುತ್ತದೆ ಎಂದು ಸಲ್ಲಿಸಿದ ಅರ್ಜಿದಾರ, ಪ್ರತ್ಯೇಕ ಶೌಚಾಲಯಗಳ ಅನುಪಸ್ಥಿತಿಯನ್ನು ಉಲ್ಲೇಖಿಸುತ್ತಾ, “ಇದು ಒಂದು ಟ್ರಾನ್ಸ್ಜೆಂಡರ್ ಸಮುದಾಯದ ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಗಂಭೀರ ಮತ್ತು ಸಂಬಂಧಿಸಿದ ವಿಷಯ.ಈ ಬಗ್ಗೆ ಗೌರವಾನ್ವಿತ ಸುಪ್ರೀಂ ಕೋರ್ಟ್ ಮತ್ತು ಇತರ ಹೈಕೋರ್ಟ್‌ಗಳು ನೀಡಿದ ಹಲವಾರು ತೀರ್ಪುಗಳು ಮತ್ತು ಆದೇಶಗಳ ನಂತರವೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದುಹೇಳಿದ್ದಾರೆ.
ಇದನ್ನೂ ಓದಿ: BS Yediyurappa: ಸಂಧ್ಯಾ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ; ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ ..
ಇದನ್ನೂ ಓದಿ: ಶಿಕಾರಿಪುರ: ಬಿಎಸ್ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್; ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
(Seeking separate toilets for Transgender Delhi High Court issued notice to the Centre Delhi government)