ಸಹಕಾರಿಗಳ ಮಹಾ ಸಮ್ಮೇಳನದಲ್ಲಿ ಅಮಿತ್ ಶಾ ಮಾತು: ವರ್ಚುವಲ್ ಸಭೆಯಲ್ಲಿ 8 ಕೋಟಿ ಮಂದಿ ಪಾಲ್ಗೊಳ್ಳುವ ನಿರೀಕ್ಷೆ
Sehkarita Sammelan: ಈ ವರ್ಚುವಲ್ ಗೋಷ್ಠಿಯಲ್ಲಿ ಸುಮಾರು 8 ಕೋಟಿ ಮಂದಿ ಪಾಲ್ಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. 2000 ಮಂದಿ ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ.
ದೆಹಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೇಂದ್ರ ಸಹಕಾರ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಅಮಿತ್ ಶಾ ದೇಶದ ವಿವಿಧ ರಾಜ್ಯಗಳ ಹಲವು ಸಹಕಾರ ಸಂಘಗಳ ಸದಸ್ಯರೊಂದಿಗೆ ಶನಿವಾರ (ಸೆ.25) ಸಂವಾದ ನಡೆಸಲಿದ್ದಾರೆ. ಈ ವರ್ಚುವಲ್ ಗೋಷ್ಠಿಯಲ್ಲಿ ಸುಮಾರು 8 ಕೋಟಿ ಮಂದಿ ಪಾಲ್ಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಸಹಕಾರಿತ ಸಮ್ಮೇಶನ ಅಥವಾ ರಾಷ್ಟ್ರೀಯ ಸಹಕಾರ ಗೋಷ್ಠಿ ಹೆಸರಿನ ಸಮ್ಮೇಳನದಲ್ಲಿ 2000 ಮಂದಿ ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ. 8 ಕೋಟಿ ಜನರು ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಹಕಾರ ಇಲಾಖೆಯ ದೃಷ್ಟಿಕೋನವನ್ನು ಈ ಸಮಾರಂಭ ತೆರೆದಿಡಲಿದೆ. ಇಂಥ ಸಮಾರಂಭ ನಡೆಯುತ್ತಿರುವುದು ಇದೇ ಮೊದಲು ಎಂದು ಕಾರ್ಯಕ್ರಮ ಆಯೋಜನೆಯಲ್ಲಿ ಸಕ್ರಿಯರಾಗಿರುವ ಅಧಿಕಾರಿಯೊಬ್ಬರು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವರ್ಷದ ಆರಂಭದಲ್ಲಿ ಸಹಕಾರ ಇಲಾಖೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಈವರೆಗೆ ಸಹಕಾರ ಇಲಾಖೆಯು ಕೃಷಿ ಇಲಾಖೆಯ ಅಧೀನದಲ್ಲಿಯೇ ಇತ್ತು. ಅಮಿತ್ ಶಾ ನೇತೃತ್ವದಲ್ಲಿ ಹೊಸದಾಗಿ ಸಹಕಾರ ಇಲಾಖೆಯನ್ನು ರಚಿಸಲಾಗಿತ್ತು. ಕೇರಳ ಕೇಡರ್ನ ಅಧಿಕಾರಿ ದೇವೇಂದ್ರ ಕುಮಾರ್ ಸಿಂಗ್ ಅವರನ್ನು ಬುಧವಾರವಷ್ಟೇ ಇಲಾಖೆಯ ಸಚಿವರಾಗಿ ನೇಮಿಸಲಾಗಿತ್ತು.
ಅತಿದೊಡ್ಡ ಸಹಕಾರ ಸಂಘಟನೆಯಾದ ಇಫ್ಕೊ (Indian Farmers Fertiliser Cooperative Limited – IFFCO) ಸೇರಿದಂತೆ ಹಲವು ಸಂಸ್ಥೆಗಳು ಈ ಗೋಷ್ಠಿಯನ್ನು ಆಯೋಜಿಸಿವೆ. ದೇಶದ ಸಹಕಾರಿಗಳು ನೇರವಾಗಿ ಸಚಿವರಿಂದಲೇ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಈ ಗೋಷ್ಠಿ ಅವಕಾಶ ನೀಡುತ್ತದೆ. ಸಹಕಾರ ಕ್ಷೇತ್ರದಲ್ಲಿ ಸಮೃದ್ಧಿ ತರಲು ಇದು ಮೊದಲ ಹೆಜ್ಜೆ ಎಂದು ಇಫ್ಕೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಹಕಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಮಿತ್ ಶಾ ವಿವಿಧ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತನಾಡಿದ್ದರು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎಲ್ಲ ಸಹಕಾರಿಗಳು ಮತ್ತು ಸಹಕಾರ ಸಂಸ್ಥೆಗಳನ್ನು ಸದೃಢಗೊಳಿಸಲು ನಾವು ಬದ್ಧನಾಗಿದ್ದೇವೆ ಎಂದು ಹೇಳಿದ್ದರು.
ದೇಶದ ಸಹಕಾರ ಚಳವಳಿಗೆ ಇನ್ನಷ್ಟು ಬಲ ತುಂಬಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ನಿರೂಪಣೆಯ ಹಂದರ ಒದಗಿಸಲಿದೆ ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ಹೊರಡಿಸಿದ್ದ ಹೇಳಿಕೆ ತಿಳಿಸಿತ್ತು.
ಸಹಕಾರ ಸಂಸ್ಥೆಗಳ ಸುಸೂತ್ರ ಕಾರ್ಯನಿರ್ವಹಣೆಗೆ ನೆರವಾಗುವ ಹಲವು ಅಂಶಗಳನ್ನು ಈ ಸಮ್ಮೇಳನವು ಪರಿಶೀಲಿಸಲಿದೆ. ಬಹುರಾಜ್ಯ ಸಹಕಾರ ಸಂಸ್ಥೆಗಳ (Multi-State Cooperative Societies – MSCS) ಅಭಿವೃದ್ಧಿಗೆ ಬೇಕಿರುವ ಸೌಕರ್ಯಗಳ ಬಗ್ಗೆ ಸಮ್ಮೇಳನವು ಒತ್ತು ನೀಡಲಿದೆ. ಗ್ರಾಮೀಣ ಆರ್ಥಿಕತೆ ಸುಧಾರಿಸುವಲ್ಲಿ ಸಹಕಾರ ಕ್ಷೇತ್ರ ಹೇಗೆ ನೆರವಾಗಬಹುದು ಎಂಬ ಅಂಶವೂ ಈ ಸಂದರ್ಭದಲ್ಲಿ ಪ್ರಸ್ತಾಪವಾಗಲಿದೆ. ದೇಶದ ವಿವಿಧೆಡೆ ನಡೆಯುತ್ತಿರುವ ರೈತರ ನಿರಂತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ಸಹಕಾರ ಸಮ್ಮೇಳನ ಪ್ರಾಮುಖ್ಯತೆ ಪಡೆದುಕೊಂಡಿದೆ.
केन्द्रीय गृह एवं सहकारिता मंत्री श्री @AmitShah जी कल (25 सितंबर, 2021) ‘राष्ट्रीय सहकारिता सम्मेलन’ को संबोधित करेंगे।
समय: सुबह 11 बजे स्थान: आईजीआई स्टेडियम, नई दिल्ली#SahkarSeSamriddhi@MinOfCooperatn pic.twitter.com/P943HJRv1O
— Office of Amit Shah (@AmitShahOffice) September 24, 2021
(Sehkarita Sammelan Amit Shah to Address First Mega Meet as Minister of Cooperation)
ಇದನ್ನೂ ಓದಿ: ಸಹಕಾರ ವಿಧೇಯಕ ಅಂಗೀಕಾರ: ನೌಕರರ ಸ್ಪರ್ಧೆಗೆ ನಿರ್ಬಂಧ
ಇದನ್ನೂ ಓದಿ: ನಮ್ಮ ಶಾಸಕರೇ ಡಿಸಿಸಿ ಬ್ಯಾಂಕ್‌ಗಳಲ್ಲಿ 245 ಕೋಟಿ ಸಾಲ ಪಡೆದು ಒಂದೇ ಒಂದು ರೂ ಕಟ್ಟಿಲ್ಲ! ಸಹಕಾರ ಸಚಿವ ಸೋಮಶೇಖರ್ ಅಳಲು
Published On - 7:49 pm, Fri, 24 September 21