‘ನನ್ನಂಥ ಹಿರಿಯ ನಾಯಕನನ್ನು ನಡೆಸಿಕೊಳ್ಳುವುದು ಹೀಗೇನಾ?‘-ಮತ್ತೆ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಮರಿಂದರ್ ಸಿಂಗ್​

ಅಮರಿಂದರ್ ಸಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಪ್ರಿಯಾ ಶ್ರೀನೇತ್​ ರಾಜಕಾರಣದಲ್ಲಿ ಸಿಟ್ಟು, ಅಸೂಯೆ, ವೈರತ್ವ, ವೈಯಕ್ತಿಕ ಟೀಕೆ, ದ್ವೇಷಗಳಿಗೆ ಅವಕಾಶ ಇಲ್ಲ ಎಂದು ಹೇಳಿದ್ದರು.

‘ನನ್ನಂಥ ಹಿರಿಯ ನಾಯಕನನ್ನು ನಡೆಸಿಕೊಳ್ಳುವುದು ಹೀಗೇನಾ?‘-ಮತ್ತೆ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಮರಿಂದರ್ ಸಿಂಗ್​
ಅಮರಿಂದರ್ ಸಿಂಗ್​
Follow us
TV9 Web
| Updated By: Lakshmi Hegde

Updated on: Sep 24, 2021 | 6:28 PM

ಚಂಡಿಗಢ್​: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್ ಸಿಂಗ್(Amarinder Singh)​ ಇದೀಗ ಕಾಂಗ್ರೆಸ್​ ಪಕ್ಷದ ಮೇಲೆಯೇ ಮುನಿಸಿಕೊಂಡಂತೆ ಇದೆ. ತಾವು ಅವಮಾನವನ್ನು ಸಹಿಸಲಾಗದೆ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದ ಕ್ಯಾಪ್ಟನ್​, ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ.  ಈ ಮೂಲಕ ತಮ್ಮ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನೇತ್​ ಮತ್ತು ಪಂಜಾಬ್​ ಕಾಂಗ್ರೆಸ್​ ಪ್ರದೇಶ ಸಮಿತಿ ಮುಖ್ಯಸ್ಥ ನವಜೋತ್​ ಸಿಂಗ್​  ಮತ್ತು ಇಡೀ ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ.

‘ರಾಜಕಾರಣದಲ್ಲಿ ಸಿಟ್ಟಿಗೆ ಅವಕಾಶ ಇಲ್ಲ. ಕೋಪ ಮಾಡಿಕೊಂಡರೆ ನಡೆಯುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಕಾಂಗ್ರೆಸ್​​ನಂಥ ಹಳೆಯ ಮತ್ತು ದೊಡ್ಡ ಪಕ್ಷದಲ್ಲಿ ಅವಮಾನ, ಅಗೌರವಕ್ಕೆ ಅವಕಾಶ ಇದೆಯೇ? ನನ್ನಂಥ ಹಿರಿಯ ನಾಯಕನನ್ನು ಕಾಂಗ್ರೆಸ್​ ಹೀಗೆ ಅವಮಾನಯುತವಾಗಿ ನಡೆಸಿಕೊಳ್ಳಬಹುದೇ? ನನಗೇ ಹೀಗಾದರೆ, ಕಾರ್ಯಕರ್ತರು ಏನೆಲ್ಲ ಅನುಭವಿಸಬೇಕಾಗಬಹುದು’ ಎಂದು ಇಡೀ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮರಿಂದರ್ ಸಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಪ್ರಿಯಾ ಶ್ರೀನೇತ್​, ರಾಜಕಾರಣದಲ್ಲಿ ಸಿಟ್ಟು, ಅಸೂಯೆ, ವೈರತ್ವ, ವೈಯಕ್ತಿಕ ಟೀಕೆ, ದ್ವೇಷಗಳಿಗೆ ಅವಕಾಶ ಇಲ್ಲ. ಅವರು ಹುದ್ದೆ ಬಿಡುವುದಾದರೆ ಬಿಡಲಿ. ಆ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ. ವಯಸ್ಸಾದವರು ಹೀಗೆ ಸದಾ ಕೋಪಗೊಳ್ಳುತ್ತಾರೆ ಮತ್ತು ಏನೇನನ್ನೋ ಹೇಳುತ್ತಾರೆ. ಹಾಗೇ. ನಾವು ಅಮರಿಂದರ್​ ಸಿಂಗ್​ ಸಿಟ್ಟು, ವಯಸ್ಸು, ಅನುಭವಕ್ಕೆ ಗೌರವ ಕೊಡುತ್ತೇವೆ. ಕಾಂಗ್ರೆಸ್​ ಅವರನ್ನು 9 ವರ್ಷದ 9 ತಿಂಗಳುಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಿದೆ’ ಎಂದು ಹೇಳಿದ್ದರು.

ಪಂಜಾಬ್​​ನಲ್ಲಿ ವಿಧಾನಸಭೆ ಹತ್ತಿರ ಬರುತ್ತಿರುವಾಗಲೇ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಮತ್ತು ಪಿಸಿಸಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಬಹುಕಾಲದ ಜಗಳಕ್ಕೆ ಪರಿಹಾರವಾಗಿ ಅಮರಿಂದರ್ ಸಿಂಗ್​ ಅವರೇ ಹುದ್ದೆಯಿಂದ ಕೆಳಗಿಳಿಯುವಂತಾಗಿದೆ. ಇನ್ನು ಸಿಎಂ ಹುದ್ದೆ ಬಿಟ್ಟ ನಂತರವೂ ಕ್ಯಾಪ್ಟನ್​ ಅಮರಿಂದರ್ ಸಿಂಗ್​ ನವಜೋತ್​ ಸಿಂಗ್​ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: 6ರಿಂದ ದ್ವಿತೀಯ ಪಿಯುಸಿವರೆಗೆ ಸಂಪೂರ್ಣ ಹಾಜರಾತಿಗೆ ಅವಕಾಶ, ವಾರದಲ್ಲಿ 5 ದಿನ ತರಗತಿ: ಸಿಎಂ ಬೊಮ್ಮಾಯಿ

ಎನ್​ಡಿಎ, ನೌಕಾದಳ ಅಕಾಡೆಮಿ ಪರೀಕ್ಷೆಗೆ ಅವಿವಾಹಿತ ಮಹಿಳೆಯರಿಗೆ ಅವಕಾಶ; ಯುಪಿಎಸ್​ಸಿಯಿಂದ ಅರ್ಜಿ ಆಹ್ವಾನ

(There is space for humiliation and insult Congress Says Amarinder Singh)