AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸಿಕ್​ನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿದ್ದ 7 ಅರ್ಚಕರಿಗೆ ಜಾಮೀನು; ವಾಹನದಿಂದ ಪತ್ತೆಯಾಗಿತ್ತು ಪಿಸ್ತೂಲ್, ಹರಿತವಾದ ಆಯುಧ

ಪೊಲೀಸರು ಅರ್ಚಕರ ವಾಹನವನ್ನು ತಪಾಸಣೆ ನಡೆಸಿದ್ದು, 11 ಗುಂಡುಗಳು, ಕುಡುಗೋಲು, ಚಾಕು ಮುಂತಾದ ಹರಿತವಾದ ಆಯುಧಗಳು, ಹಾಕಿ ಸ್ಟಿಕ್‌ನೊಂದಿಗೆ ಕಂಟ್ರಿಮೇಡ್ ಪಿಸ್ತೂಲ್ ಪತ್ತೆಯಾಗಿದೆ.

ನಾಸಿಕ್​ನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿದ್ದ 7 ಅರ್ಚಕರಿಗೆ ಜಾಮೀನು; ವಾಹನದಿಂದ ಪತ್ತೆಯಾಗಿತ್ತು ಪಿಸ್ತೂಲ್, ಹರಿತವಾದ ಆಯುಧ
ತ್ರಯಂಬಕೇಶ್ವರ ದೇವಸ್ಥಾನದಲ್ಲಿ
TV9 Web
| Edited By: |

Updated on: Dec 09, 2021 | 6:05 PM

Share

ನಾಸಿಕ್(ಮಹಾರಾಷ್ಟ್ರ): ನಾಸಿಕ್‌ನಲ್ಲಿ (Nashik) ಇತ್ತೀಚೆಗೆ ಶಸ್ತ್ರಾಸ್ತ್ರ ಕಾಯ್ದೆಯಡಿ( Arms Act) ಬಂಧಿತರಾಗಿದ್ದ ಏಳು ಅರ್ಚಕರನ್ನು ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸರ ಪ್ರಕಾರ, ತ್ರಯಂಬಕೇಶ್ವರ ದೇವಸ್ಥಾನದಲ್ಲಿ (Trimbakeshwar temple) ವಿಶೇಷ ಆಚರಣೆಗಳನ್ನು (ಪೂಜೆ) ನಡೆಸುವ ಬಗ್ಗೆ ಅರ್ಚಕರು ಪರಸ್ಪರ ಜಗಳವಾಡುತ್ತಿದ್ದರು.  ಆಗ ಗಸ್ತು ಪೊಲೀಸರು ಆಗಮಿಸಿ ಜಗಳವನ್ನು ತಡೆಯಲು ಮಧ್ಯಪ್ರವೇಶಿಸಿದರು.  ಪೊಲೀಸರು ಅರ್ಚಕರ ವಾಹನವನ್ನು ತಪಾಸಣೆ ನಡೆಸಿದ್ದು, 11 ಗುಂಡುಗಳು, ಕುಡುಗೋಲು, ಚಾಕು ಮುಂತಾದ ಹರಿತವಾದ ಆಯುಧಗಳು, ಹಾಕಿ ಸ್ಟಿಕ್‌ನೊಂದಿಗೆ ಕಂಟ್ರಿಮೇಡ್ ಪಿಸ್ತೂಲ್ ಪತ್ತೆಯಾಗಿದೆ. ಆಯುಧ ಪತ್ತೆ ಮಾಡಿದ ನಂತರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  ವಿಶೇಷ ಪೂಜೆಗಳಲ್ಲಿ (ಪ್ರಾರ್ಥನೆಗಳು) ಪಾಲ್ಗೊಳ್ಳಲು ಭಾರತದಾದ್ಯಂತದ ಭಕ್ತರು ತ್ರಯಂಬಕೇಶ್ವರಕ್ಕೆ ಬರುತ್ತಾರೆ. ನಾಸಿಕ್ ನಗರದ ಪಂಚವಟಿ ಪೊಲೀಸ್ ವ್ಯಾಪ್ತಿಯ ಹಿರವಾಡಿ ರಸ್ತೆಯಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಜಗಳದ ಬಗ್ಗೆ ಮಾಹಿತಿ ನೀಡಲಾಗಿತ್ತು.

ಅರ್ಚಕರು ಮಧ್ಯಪ್ರದೇಶದವರಾಗಿದ್ದು, ಪರಸ್ಪರ ಪರಿಚಿತರು. ಅವರು ಹಿರವಾಡಿಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಈ ಜಗಳ ವೃತ್ತಿಪರ ಪೈಪೋಟಿಗೆ ಸಂಬಂಧಿಸಿದ್ದಾಗಿತ್ತು . ನಾವು ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಬಂಧಿಸಿದ್ದು ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದೇವೆ ಎಂದು ತನಿಖಾಧಿಕಾರಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ್ ಕಾಸರಾಳೆ ಹೇಳಿದ್ದಾರೆ.

ಆರೋಪಿಗಳನ್ನು ವೀರೇಂದ್ರ ತ್ರಿವೇದಿ, ಆಶಿಶ್ ತ್ರಿವೇದಿ, ಮನೀಶ್ ತ್ರಿವೇದಿ, ಸುನಿಲ್ ತಿವಾರಿ, ಆಕಾಶ್ ತ್ರಿಪಾಠಿ, ಅನಿಕೇತ್ ತಿವಾರಿ ಮತ್ತು ಸಚಿನ್ ಪಾಂಡೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:  2021ರಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಟ್ವೀಟ್​​ಗಳಲ್ಲಿ ಹೆಚ್ಚು ಮರುಟ್ವೀಟ್ ಆಗಿದ್ದು ಮೋದಿ ಕೊವಿಡ್ ಲಸಿಕೆ ಪಡೆಯುತ್ತಿರುವ ಚಿತ್ರ