ಪಟ್ನಾ: ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ ನಂತರ 1 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದಕ್ಕಾಗಿ ಸಮಸ್ತಿಪುರದ ಲೋಕ ಜನಶಕ್ತಿ ಪಕ್ಷದ ಸಂಸದ ಪ್ರಿನ್ಸ್ ರಾಜ್ ನಾಲ್ಕು ತಿಂಗಳ ನಂತರ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ ಮಾಡಿದ್ದಾರೆ. ಈವರೆಗೆ ಎಫ್‌ಐಆರ್ ದಾಖಲಾಗಿಲ್ಲ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದ ಐದು ಎಲ್‌ಜೆಪಿ ಸಂಸದರಲ್ಲಿ ಪ್ರಿನ್ಸ್ ರಾಜ್ ಕೂಡ ಇದ್ದಾರೆ. ಮಂಗಳವಾರ, ಚಿರಾಗ್ ತಮ್ಮ ಚಿಕ್ಕಪ್ಪ ಮತ್ತು ಹಾಜಿಪುರ ಸಂಸದ ಪಶುಪತಿ ಕುಮಾರ್ ಪಾರಸ್ ಅವರಿಗೆ ಮಾರ್ಚ್ 29 ರಂದು ಬರೆದ ಪತ್ರ ಹಂಚಿಕೊಂಡಿದ್ದು, ಅದರಲ್ಲಿ ಅವರು ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
ಚಿರಾಗ್ ಟ್ವೀಟ್ ಮಾಡಿದ ಪತ್ರದಲ್ಲಿ (ಹಿಂದಿಯಲ್ಲಿ ಬರೆದಿರುವುದು ) ಹೀಗಿದೆ: “ಸ್ವಲ್ಪ ಸಮಯದ ಹಿಂದೆ, ಪಕ್ಷದೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರಿನ್ಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡುವ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ನನ್ನ ಹಿರಿಯನಾಗಿರುವ ನಿಮ್ಮಿಂದ ಈ ವಿಷಯದ ಬಗ್ಗೆ ಸಲಹೆ ಪಡೆದಿದ್ದೆ, ಆದರೆ ನೀವು ಈ ಗಂಭೀರ ವಿಷಯವನ್ನು ಕಡೆಗಣಿಸಿದ್ದೀರಿ. ನೀವು ಅದನ್ನು ಕಡೆಗಣಿಸಿದ ನಂತರ, ನಾನು ಪ್ರಿನ್ಸ್‌ಗೆ ಪೊಲೀಸರ ಬಳಿಗೆ ಹೋಗಬೇಕೆಂದು ಸಲಹೆ ನೀಡಿದ್ದೆ, ಇದರಿಂದ ಸತ್ಯ ಮತ್ತು ಸುಳ್ಳುಗಳು ಹೊರಬರುತ್ತವೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬಹುದು.
ಈ ವಾರದ ಆರಂಭದಲ್ಲಿ, ಐವರು ಸಂಸದರು ಪಾರಸ್ ಅವರನ್ನು ತಮ್ಮ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಪ್ರಿನ್ಸ್ ರಾಜ್ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ರಾಮ್ ಚಂದ್ರ ಪಾಸ್ವಾನ್ ಅವರ ಮಗ.
ಬುಧವಾರ ಈ ವಿಷಯವನ್ನು ಉಲ್ಲೇಖಿಸಿದ ಚಿರಾಗ್ ನಾನು ಇದನ್ನು ಮೊದಲ ಬಾರಿಗೆ ಜನವರಿ 8 ರ ಸುಮಾರಿಗೆ ಕೇಳಿದೆ. ಆಪಾದಿತ ಸಂತ್ರಸ್ತೆ ಬರೆದ ಪತ್ರವನ್ನು ನನಗೆ ನೀಡಲಾಯಿತು. ಅವರು ತಮಗೆ ಸಂಭವಿಸಿದ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಆರೋಪಿಸಿದ ಸಂಸದ, ನನ್ನ ಸಹೋದರ ಪ್ರಿನ್ಸ್ ರಾಜ್, ನಾನು ಇದನ್ನು ಅವನಿಗೆ ಹೇಳಿದಾಗ ಅವನು ನನ್ನ ಮುಂದೆ ಮತ್ತೊಂದು ರೀತಿಯಲ್ಲಿ ಹೇಳಿದನು. ಅವನು ಹೇಳಿದ್ದು ಸಂಪೂರ್ಣವಾಗಿ ಭಿನ್ನವಾಗಿತ್ತು. ನಾನು ಯಾವುದೇ ತನಿಖಾ ಪ್ರಾಧಿಕಾರವಲ್ಲ, ಮತ್ತು ಇಬ್ಬರೂ ಪೊಲೀಸರ ಬಳಿಗೆ ಹೋಗಬೇಕೆಂದು ನಾನು ಸೂಚಿಸಿದೆ. ”
ಪೊಲೀಸರ ಪ್ರಕಾರ ಪ್ರಿನ್ಸ್ ರಾಜ್ ಮಹಿಳೆ ಮತ್ತು ಆಕೆಯ ಸಂಗಾತಿಯ ವಿರುದ್ಧ ಸುಲಿಗೆ ಮಾಡಿದ ದೂರು ದಾಖಲಿಸಿದ್ದರು. ಈ ವರ್ಷದ ಫೆಬ್ರವರಿ 10 ರಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಸ್ 384 (ಸುಲಿಗೆ) ಮತ್ತು 389 (ಅಪರಾಧ, ಸುಲಿಗೆ ಮಾಡುವ ಸಲುವಾಗಿ ವ್ಯಕ್ತಿಯನ್ನು ಆರೋಪದ ಭಯದಲ್ಲಿರಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ .ಆಮೇಲೆ ಈ ಪ್ರಕರಣವನ್ನು ನವದೆಹಲಿ ಜಿಲ್ಲೆಯ ವಿಶೇಷ ಸಿಬ್ಬಂದಿಗೆ ವರ್ಗಾಯಿಸಲಾಯಿತು. ಈವರೆಗೆ ಯಾವುದೇ ಬಂಧನ ನಡೆದಿಲ್ಲ.
“ಕಳೆದ ವರ್ಷ ರಾಜಕೀಯ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದ ಮಹಿಳೆಯನ್ನು ಭೇಟಿಯಾಗಿದ್ದೆ ಎಂದು ಪ್ರಿನ್ಸ್ ರಾಜ್ ಪೊಲೀಸರಿಗೆ ತಿಳಿಸಿದ್ದಾನೆ. ಅವರು ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು, ಮಾತನಾಡಲು ಪ್ರಾರಂಭಿಸಿದರು ಮತ್ತು ಸ್ನೇಹಿತರಾದರು. ಪ್ರಿನ್ಸ್ ಹೇಳಿಕೆ ಪ್ರಕಾರ, ಜೂನ್ 18 ರಂದು (2020), ಅವಳು ನನ್ನನ್ನು ಗಾಜಿಯಾಬಾದ್‌ನಲ್ಲಿರುವ ತನ್ನ ಮನೆಗೆ ಆಹ್ವಾನಿಸಿದಳು. ಅಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದರು. ಪ್ರಿನ್ಸ್ ಹಲವಾರು ಬಾರಿ ಆಕೆಯ ಮನೆಗೆ ಭೇಟಿ ನೀಡಿದ್ದರು ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್‌ನಿಂದ ಉಲ್ಲೇಖಿಸಿ ಹೇಳಿರುವುದಾದಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕೆಲವು ತಿಂಗಳ ನಂತರ ಆ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧದಲ್ಲಿದ್ದಾಳೆ ಎಂದು ತಿಳಿಯಿತು. ಈ ಬಗ್ಗೆ ಪ್ರಿನ್ಸ್ ಆಕೆಯನ್ನು ಪ್ರಶ್ನಿಸಿದ್ದನು. ಆಗಸ್ಟ್‌ನಿಂದ, ಅವನು ಅವಳನ್ನು ತಪ್ಪಿಸಲು ಪ್ರಾರಂಭಿಸಿದನು ಮತ್ತು ಆಕೆಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದನು. ಒಂದು ದಿನ, ಆಕೆಯ ಸ್ನೇಹಿತ ತನ್ನ ಸಂಖ್ಯೆಯಿಂದ ಕರೆ ಮಾಡಿ, ಅವನ ಮತ್ತು ಮಹಿಳೆಯ ಆಕ್ಷೇಪಾರ್ಹ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಿನ್ಸ್ ಆರೋಪಿಸಿದ್ದಾನೆ. ವಿಡಿಯೋ ಬಿಡುಗಡೆ ಮಾಡದೇ ಇರಲು ಅವರು ತನ್ನಿಂದ 1 ಕೋಟಿ ರೂ.ಗಳನ್ನು ಕೋರಿದ್ದಾರೆ ಎಂದು ಪ್ರಿನ್ಸ್ ರಾಜ್ ಆರೋಪಿಸಿದ್ದಾರೆ.
ಪ್ರಿನ್ಸ್ ರಾಜ್ ಅವರು 2 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ, ಆದರೆ ಅವರು 1 ಕೋಟಿ ರೂ. “ಫೆಬ್ರವರಿ 9 ರಂದು (2021) ಅವರು ದೆಹಲಿ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯೊಂದಿಗೆ ಸಂಭಾಷಣೆಗಳನ್ನು ಸಲ್ಲಿಸಿದರು. ಅವನು ಅವಳ ನಾಲ್ಕು ದೂರವಾಣಿ ಸಂಖ್ಯೆಗಳನ್ನು ಸಹ ಹಂಚಿಕೊಂಡನು ಮತ್ತು ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ ”ಎಂದು ಅಧಿಕಾರಿ ಹೇಳಿದರು.
ಮಂಗಳವಾರ ಸಂಜೆ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಕೊನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಮೂರು ಪುಟಗಳ ದೂರು ಸಲ್ಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ತನ್ನ ದೂರಿನಲ್ಲಿ, ಪ್ರಿನ್ಸ್ ರಾಜ್ ತನ್ನ ಅಮಲು ಪದಾರ್ಥ ಬೆರೆಸಿದ ಡ್ರಿಂಕ್ಸ್ ನೀಡಿದ್ದು ನಾನು ಪ್ರಜ್ಞೆ ತಪ್ಪಿದ ಎಂದು ಮಹಿಳೆ ಆರೋಪಿಸಿದ್ದಾಳೆ. ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಅವನು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ಹೆಚ್ಚಿನ ವಿಚಾರಣೆ ನಡೆಸುವ ಮೊದಲು ಅವರು ತನಿಖೆ ನಡೆಸಿ ಕಾನೂನು ಅಭಿಪ್ರಾಯ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Chirag Paswan ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಯಿತು’: ಚಿರಾಗ್ ಪಾಸ್ವಾನ್
ಇದನ್ನೂ ಓದಿ: Explainer: ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿಸಿದ ಎಲ್‌ಜೆಪಿ ಪಕ್ಷ ಮಗ ಚಿರಾಗ್ ಪಾಸ್ವಾನ್ ಕೈಯಿಂದ ಜಾರಿದ್ದು ಹೇಗೆ?