‘ಶಹೆನ್‌ಶಾ ಪರಿಕಲ್ಪನೆ’: ರಾಷ್ಟ್ರಪತಿ ಭವನದ ನಡೆ ಬಗ್ಗೆ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ ದರ್ಬಾರ್ ಹಾಲ್ ಮತ್ತು ಅಶೋಕ್ ಹಾಲ್ ಅನ್ನು ಕ್ರಮವಾಗಿ ಗಣತಂತ್ರ ಮಂಟಪ ಮತ್ತು ಅಶೋಕ್ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ದೇಶದಲ್ಲಿ "ದರ್ಬಾರ್ ಪರಿಕಲ್ಪನೆ ಇಲ್ಲ ಆದರೆ ಶಹೆನ್‌ಶಾ ಪರಿಕಲ್ಪನೆ ಇದೆ" ಎಂದಿದ್ದಾರೆ. ವಸಾಹತುಶಾಹಿ ಪರಂಪರೆಯನ್ನು ಪ್ರತಿಬಿಂಬಿಸುವ ಸಭಾಂಗಣಗಳ ಹೆಸರುಗಳನ್ನು ಬದಲಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರಪತಿಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

‘ಶಹೆನ್‌ಶಾ ಪರಿಕಲ್ಪನೆ’: ರಾಷ್ಟ್ರಪತಿ ಭವನದ ನಡೆ ಬಗ್ಗೆ ಪ್ರಿಯಾಂಕಾ ಗಾಂಧಿ ವ್ಯಂಗ್ಯ
ಪ್ರಿಯಾಂಕಾ ಗಾಂಧಿ ವಾದ್ರಾ
Follow us
ರಶ್ಮಿ ಕಲ್ಲಕಟ್ಟ
|

Updated on:Jul 25, 2024 | 4:48 PM

ದೆಹಲಿ ಜುಲೈ 25: ರಾಷ್ಟ್ರಪತಿ ಭವನದ ದರ್ಬಾರ್ ಮತ್ತು ಅಶೋಕ್ ಹಾಲ್‌ಗಳ ಮರುನಾಮಕರಣದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ “ಶಹೆನ್‌ಶಾ (ರಾಜ)” ಪರಿಕಲ್ಪನೆಯು ಇನ್ನೂ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ. “ದರ್ಬಾರ್ ಪರಿಕಲ್ಪನೆ ಇಲ್ಲ ಆದರೆ ಶಹೆನ್‌ಶಾ ಪರಿಕಲ್ಪನೆ ಇದೆ” ಎಂದಿದ್ದಾರೆ ಕಾಂಗ್ರೆಸ್ ನಾಯಕಿ.

ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ ದರ್ಬಾರ್ ಹಾಲ್ ಮತ್ತು ಅಶೋಕ್ ಹಾಲ್ ಅನ್ನು ಕ್ರಮವಾಗಿ ಗಣತಂತ್ರ ಮಂಟಪ ಮತ್ತು ಅಶೋಕ್ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಿಸಿದರು. ವಸಾಹತುಶಾಹಿ ಪರಂಪರೆಯನ್ನು ಪ್ರತಿಬಿಂಬಿಸುವ ಸಭಾಂಗಣಗಳ ಹೆಸರುಗಳನ್ನು ಬದಲಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮರುನಾಮಕರಣವು “ರಾಷ್ಟ್ರಪತಿ ಭವನದ ವಾತಾವರಣವನ್ನು ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ನಿರಂತರ ಪ್ರಯತ್ನದ” ಭಾಗವಾಗಿದೆ ಎಂದು ರಾಷ್ಟ್ರಪತಿಯವರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.  ‘ದರ್ಬಾರ್’ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷ್ ರಾಜ್ ನ್ಯಾಯಾಲಯಗಳನ್ನು ಸೂಚಿಸುತ್ತದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಭಾರತ ಗಣರಾಜ್ಯವಾದಾಗ ಅದು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತು ಎಂದು ಹೇಳಿಕೆಯಲ್ಲಿದೆ.

‘ದರ್ಬಾರ್ ಹಾಲ್’ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನದಂತಹ ಪ್ರಮುಖ ಸಮಾರಂಭಗಳು ಮತ್ತು ಆಚರಣೆಗಳು ನಡೆಯುವ ಸ್ಥಳವಾಗಿದೆ. ‘ದರ್ಬಾರ್’ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷರ ನ್ಯಾಯಾಲಯಗಳು ಮತ್ತು ಅಸೆಂಬ್ಲಿಗಳನ್ನು ಸೂಚಿಸುತ್ತದೆ. ಭಾರತವು ಗಣರಾಜ್ಯವಾದ ನಂತರ ಅದು ಪ್ರಸ್ತುತತೆಯನ್ನು ಕಳೆದುಕೊಂಡಿತು. ‘ಗಣತಂತ್ರ’ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದೆ, ‘ಗಣತಂತ್ರ ಮಂಟಪ’ವು ಸ್ಥಳಕ್ಕೆ ಸೂಕ್ತ ಹೆಸರಾಗಿದೆ, ”ಎಂದು ಅದು ಹೇಳಿದೆ.

ಅಶೋಕ್ ಹಾಲ್ ಅನ್ನು ಮರುನಾಮಕರಣ ಮಾಡುವುದು ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕುತ್ತದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ರಾಷ್ಟ್ರಪತಿ ಭವನದ ದರ್ಬಾರ್​ ಹಾಲ್ ಹಾಗೂ ಅಶೋಕ ಹಾಲ್​ಗೆ ಮರುನಾಮಕರಣ

“ಅಶೋಕ್ ಹಾಲ್” ಮೂಲತಃ ಒಂದು ಬಾಲ್ ರೂಂ ಆಗಿತ್ತು. ‘ಅಶೋಕ್’ ಎಂಬ ಪದವು ‘ಎಲ್ಲಾ ದುಃಖಗಳಿಂದ ಮುಕ್ತ’ ಅಥವಾ ‘ಯಾವುದೇ ದುಃಖದಿಂದ ದೂರವಿರುವ’ ವ್ಯಕ್ತಿಯನ್ನು ಸೂಚಿಸುತ್ತದೆ. ಅಲ್ಲದೆ, ‘ಅಶೋಕ’ ಸಾಮ್ರಾಟ ಅಶೋಕನನ್ನು ಸೂಚಿಸುತ್ತದೆ, ಇದು ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ. ಭಾರತದ ಗಣರಾಜ್ಯದ ರಾಷ್ಟ್ರೀಯ ಲಾಂಛನವು ಸಾರನಾಥದಿಂದ ಅಶೋಕನ ಸಿಂಹ ತಲೆ ಆಗಿದೆ.. ಈ ಪದವು ಭಾರತೀಯ ಧಾರ್ಮಿಕ ಸಂಪ್ರದಾಯಗಳು ಮತ್ತು ಕಲೆ ಮತ್ತು ಸಂಸ್ಕೃತಿಯಲ್ಲಿ ಆಳವಾದ ಪ್ರಾಮುಖ್ಯತೆಯನ್ನು ಹೊಂದಿರುವ ಅಶೋಕ ಮರವನ್ನು ಸಹ ಉಲ್ಲೇಖಿಸುತ್ತದೆ. ‘ಅಶೋಕ್ ಹಾಲ್’ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ ಮಾಡುವುದರಿಂದ ಭಾಷೆಯಲ್ಲಿ ಏಕರೂಪತೆ ಬರುತ್ತದೆ ಮತ್ತು ಅಶೋಕ್ ಪದಕ್ಕೆ ಸಂಬಂಧಿಸಿದ ಪ್ರಮುಖ ಮೌಲ್ಯಗಳನ್ನು ಎತ್ತಿಹಿಡಿಯುವಾಗ ಆಂಗ್ಲೀಕರಣದ ಕುರುಹುಗಳನ್ನು ತೆಗೆದುಹಾಕುತ್ತದೆ, ”ಎಂದು ಹೇಳಿಕೆ ಉಲ್ಲೇಖಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Thu, 25 July 24

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್