ಟಿಎಂಸಿ ನಿಧಿಯಲ್ಲಿ ಶೇಖ್ ಷಹಜಹಾನ್ ಭೂ ಭ್ರಷ್ಟಾಚಾರದ ಹಣ; ಚಾರ್ಜ್​ಶೀಟ್‌ನಲ್ಲಿ ಇಡಿ ಉಲ್ಲೇಖ

Sheikh Shahjahan: ಟಿಎಂಸಿ ನಾಯಕ ಶೇಖ್ ಷಹಜಹಾನ್‌ಗೆ ನಿಕಟವಾಗಿರುವ 5 ಜನರು ಪ್ರಸ್ತುತ ಇಡಿ ನಿಗಾದಲ್ಲಿದ್ದಾರೆ. ಅವರೆಲ್ಲರ ಹುಡುಕಾಟ ನಡೆಯುತ್ತಿದೆ. ಅವರ ಹೆಸರಿನಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿಕೊಂಡಿದೆ. ಶೇಖ್ ಷಹಜಹಾನ್ ಅವರ ನಿಕಟವರ್ತಿಯಾಗಿರುವ ಶಿವಪ್ರಸಾದ್ ಹಜ್ರಾ ಅವರು ಜೆಲಿಯಾಖಾಲಿಯಲ್ಲಿ ಭಾರೀ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಡಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಟಿಎಂಸಿ ನಿಧಿಯಲ್ಲಿ ಶೇಖ್ ಷಹಜಹಾನ್ ಭೂ ಭ್ರಷ್ಟಾಚಾರದ ಹಣ; ಚಾರ್ಜ್​ಶೀಟ್‌ನಲ್ಲಿ ಇಡಿ ಉಲ್ಲೇಖ
ಶೇಖ್ ಷಹಜಹಾನ್
Follow us
|

Updated on: Jun 11, 2024 | 5:02 PM

ಕೊಲ್ಕತ್ತಾ: ಟಿಎಂಸಿ ನಾಯಕ ಶೇಖ್ ಷಹಜಹಾನ್ (Sheikh Shahajahan) ಬಗ್ಗೆ ಇಡಿ ಸ್ಫೋಟಕ ಮಾಹಿತಿಗಳನ್ನು ಬಿಡುಗಡೆ ಮಾಡುತ್ತಿದೆ. ಆರೋಪಪಟ್ಟಿಯಲ್ಲಿ ಕೇಂದ್ರೀಯ ತನಿಖಾ ಗುಪ್ತಚರ ಸಂಸ್ಥೆಯು ಷಹಜಹಾನ್ ಅವರ ಭೂ ಭ್ರಷ್ಟಾಚಾರದ ಹಣ (land corruption money) ತೃಣಮೂಲ ಕಾಂಗ್ರೆಸ್ ನಿಧಿಗೆ ತಲುಪಿದೆ ಎಂದು ಉಲ್ಲೇಖಿಸಿದೆ. ಸಂದೇಶಖಾಲಿಯ ಸ್ವಯಂಘೋಷಿತ ‘ಹುಲಿ’ ಶೇಖ್ ಷಹಜಹಾನ್ ಹೇಳಿಕೆಗಳಿಂದ ಸ್ಫೋಟಕ ಮಾಹಿತಿ ವರದಿಯಾಗಿದೆ. ಮೀನು ರಫ್ತು ಹೆಸರಿನಲ್ಲಿ ಷಹಜಹಾನ್ 5 ವರ್ಷಗಳಲ್ಲಿ 198 ಕೋಟಿ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂದು ಇಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಶೇಖ್ ಷಹಜಹಾನ್‌ಗೆ ನಿಕಟವಾಗಿರುವ ಐವರು ಪ್ರಸ್ತುತ ಇಡಿ ನಿಗಾದಲ್ಲಿದ್ದಾರೆ. ಅವರೆಲ್ಲರ ಹುಡುಕಾಟ ನಡೆಯುತ್ತಿದೆ. ಅವರ ಹೆಸರಿನಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿಕೊಂಡಿದೆ. ಶೇಖ್ ಷಹಜಹಾನ್ ಅವರ ನಿಕಟವರ್ತಿಯಾಗಿರುವ ಶಿವಪ್ರಸಾದ್ ಹಜ್ರಾ ಅವರು ಜೆಲಿಯಾಖಾಲಿಯಲ್ಲಿ 900 ಬಿಘಾ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್, ತಪ್ಪಿದ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ!

ಈ ಕುರಿತು ಇಡಿ ವಕೀಲ ಅರಿಜಿತ್ ಚಕ್ರವರ್ತಿ ಮಾಹಿತಿ ನೀಡಿದ್ದು, “ಎಸ್‌ಕೆ ಸಬೀನಾ ಅವರು ಮೀನು ರಫ್ತು ಮಾಡುವ ಮೂಲಕ ಒಟ್ಟು 90 ಕೋಟಿ ಆದಾಯ ಗಳಿಸುತ್ತಿದ್ದಾರೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ” ಎಂದಿದ್ದಾರೆ.

ಇನ್ನು ಶೇಖ್ ಷಹಜಹಾನ್ ಪರ ವಕೀಲರು ಕೂಡ ಪ್ರತಿಕ್ರಿಯೆ ನೀಡಿದ್ದು, “ನನ್ನ ಕಕ್ಷಿದಾರನನ್ನು ಬಂಧಿಸಲಾಗಿದೆ. 24 ಗಂಟೆಗಳ ಒಳಗೆ ನ್ಯಾಯಾಲಯಕ್ಕೆ ಕರೆದೊಯ್ಯಲಿಲ್ಲ. ಇದು ಅಕ್ರಮ ಅಲ್ಲವೇ? ಎಂದು ನ್ಯಾಯಾಲಯವನ್ನು ಕೇಳಿದ್ದೇನೆ” ಎಂದಿದ್ದಾರೆ. ಮತ್ತೊಂದೆಡೆ, ಇಡಿ ಪರ ವಕೀಲರು, “ನ್ಯಾಯಾಲಯವು ಅವರ ಹಕ್ಕನ್ನು ತಿರಸ್ಕರಿಸಿತು. ಷಹಜಹಾನ್‌ನನ್ನು ಬಂಧಿಸುವುದರಲ್ಲಿ ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಾಲಯ ಹೇಳಿದೆ” ಎಂದಿದ್ದಾರೆ.

ಇದನ್ನೂ ಓದಿ: BJP President: ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಅಚ್ಚರಿಯ ಪಟ್ಟಿಯಲ್ಲಿದೆ ಕರ್ನಾಟಕದ ನಾಯಕನ ಹೆಸರು!

ಬಿಜೆಪಿಯ ರಾಜ್ಯಸಭಾ ಸಂಸದ ಶಮಿಕ್ ಭಟ್ಟಾಚಾರ್ಯ, “ಇಡಿ ಖಂಡಿತವಾಗಿಯೂ ಹೈಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸುತ್ತಿದೆ. ಎರಡೂ ಕಡೆ ವಕೀಲರಿದ್ದಾರೆ. ಈಗ ಈ ಘಟನೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಭಾಗಿಯಾಗಿದೆ” ಎಂದಿದ್ದಾರೆ.

ಸಂದೇಶಖಾಲಿಯ ಟಿಎಂಸಿ ನಾಯಕ ಶೇಖ್ ಷಹಜಹಾನ್ 2013ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಎಡರಂಗದ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ 2 ವರ್ಷಗಳ ನಂತರ ಪಕ್ಷಕ್ಕೆ ಸೇರಿದರು. ಅಂದಿನಿಂದಲೇ ಅವರು ಪಕ್ಷದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಅವರು ಅನೇಕ ಶಾಸಕರು ಮತ್ತು ಮಂತ್ರಿಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್