AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP President: ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಅಚ್ಚರಿಯ ಪಟ್ಟಿಯಲ್ಲಿದೆ ಕರ್ನಾಟಕದ ನಾಯಕನ ಹೆಸರು!

ಮೋದಿ 3.0 ಕ್ಯಾಬಿನೆಟ್ ರಚನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ 71 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಜೆಪಿ ನಡ್ಡಾ ಕೂಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾದರೆ, ಮುಂದಿನ ಬಿಜೆಪಿ ಅಧ್ಯಕ್ಷ ಯಾರಾಗಲಿದ್ದಾರೆ? ಸಂಭಾವ್ಯ ಹೆಸರುಗಳ ಪಟ್ಟಿ ಇಲ್ಲಿದೆ.

BJP President: ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಅಚ್ಚರಿಯ ಪಟ್ಟಿಯಲ್ಲಿದೆ ಕರ್ನಾಟಕದ ನಾಯಕನ ಹೆಸರು!
ನರೇಂದ್ರ ಮೋದಿ- ಜೆಪಿ ನಡ್ಡಾ
ಸುಷ್ಮಾ ಚಕ್ರೆ
|

Updated on: Jun 10, 2024 | 5:35 PM

Share

ನವದೆಹಲಿ: ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ನರೇಂದ್ರ ಮೋದಿ ಸಂಪುಟದಲ್ಲಿ (Narendra Modi Cabinet) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೆಪಿ ನಡ್ಡಾ (JP Nadda) ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯದಲ್ಲಿ ಕೊನೆಯಾಗಲಿದೆ. ಜೂನ್ ಕೊನೆಯವರೆಗೆ ಜೆಪಿ ನಡ್ಡಾ ಬಿಜೆಪಿ ಮುಖ್ಯಸ್ಥರಾಗಿರುತ್ತಾರೆ. ಅವರ ಅಧಿಕಾರಾವಧಿಯು 2023ರ ಜನವರಿಯಲ್ಲಿ ಕೊನೆಗೊಂಡಿತ್ತು. ಆದರೆ, ಲೋಕಸಭೆ ಚುನಾವಣೆಯ (Lok Sabha Elections 2024) ಹಿನ್ನೆಲೆಯಲ್ಲಿ ಅದನ್ನು ಜೂನ್ 2024ರವರೆಗೆ ವಿಸ್ತರಿಸಲಾಗಿತ್ತು. ಹಾಗಾದರೆ, ಇನ್ನು ಮುಂದೆ ಬಿಜೆಪಿಯ ಸಾರಥ್ಯ ವಹಿಸುವ ನಾಯಕ ಯಾರು?

ಬಿಜೆಪಿಯ ಮುಂದಿನ ಅಧ್ಯಕ್ಷ ಯಾರಾಗಬಹುದು? ಎಂಬ ಊಹಾಪೋಹಕ್ಕೆ ತೆರೆ ಎಳೆದಿದೆ. ಸಿ.ಆರ್ ಪಾಟೀಲ್, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಭೂಪೇಂದರ್ ಯಾದವ್ ಅವರಂತಹ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಬಹುದು ಎನ್ನಲಾಗುತ್ತಿದೆ. ಸದ್ಯಕ್ಕೆ ಸಂಭಾವ್ಯ ಪಟ್ಟಿಯಲ್ಲಿ ಕರ್ನಾಟಕದ ಬಿಜೆಪಿ ನಾಯಕರ ಹೆಸರು ಕೂಡ ಇದೆ. ಬಿಜೆಪಿ ಅಧ್ಯಕ್ಷರ ರೇಸ್​ನಲ್ಲಿರುವ 7 ನಾಯಕರ ಪಟ್ಟಿ ಇಲ್ಲಿದೆ.

ಸುನಿಲ್ ಬನ್ಸಾಲ್:

ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಯಶಸ್ಸಿನ ಶಿಲ್ಪಿ ಎಂದು ಪರಿಗಣಿಸಲಾಗಿದೆ. ಅವರು 2014ರಲ್ಲಿ ಅಮಿತ್ ಶಾ ಅವರೊಂದಿಗೆ ಉತ್ತರ ಪ್ರದೇಶದ ಸಹ-ಪ್ರಭಾರಿಯಾಗಿದ್ದರು. 2017ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶ ರಾಜ್ಯದ ಮುಖ್ಯ ಉಸ್ತುವಾರಿಯಾಗಿದ್ದರು. ಉತ್ತರ ಪ್ರದೇಶದ ಯಶಸ್ಸಿನ ನಂತರ, ಒಡಿಶಾ ಮತ್ತು ತೆಲಂಗಾಣದಲ್ಲಿ ಬಿಜೆಪಿಯ ಬಲವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು.

ಮಾಜಿ ಆರೆಸ್ಸೆಸ್ ಪ್ರಚಾರಕ, ಸುನಿಲ್ ಬನ್ಸಾಲ್ ರಾಜಸ್ಥಾನದಿಂದ ಬಂದವರು ಮತ್ತು ಅಮಿತ್ ಶಾಗೆ ಆಪ್ತರಾಗಿದ್ದಾರೆ. ಅವರು ಆರ್‌ಎಸ್‌ಎಸ್‌ನ ಒಂದು ವಿಭಾಗದ ಬೆಂಬಲವನ್ನೂ ಹೊಂದಿದ್ದಾರೆ.

ವಿನೋದ್ ತಾವ್ಡೆ:

ಸುನಿಲ್ ಬನ್ಸಾಲ್ ಅವರಂತೆ ವಿನೋದ್ ತಾವ್ಡೆ ಕೂಡ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಉತ್ತಮ ಪ್ರದರ್ಶನ ನೀಡಿದ ನಂತರ ಬಡ್ತಿ ಪಡೆದಿದ್ದಾರೆ. 2022ರ ಚುನಾವಣೆ ನಡೆದ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಾರದ ಸಂಯೋಜಕರಾಗಿದ್ದರು.

ಇದನ್ನೂ ಓದಿ: Modi 3.0 Cabinet: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತೆಗೆದುಕೊಂಡ ಮೊದಲ ನಿರ್ಧಾರ ಇದು

ವಿನೋದ್ ತಾವ್ಡೆ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಆರ್​ಎಸ್​ಎಸ್​) ಹಿನ್ನೆಲೆಯಿಂದ ಬಂದವರು ಮತ್ತು ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದಾರೆ. ವಿನೋದ್ ತಾವ್ಡೆ ಮಹಾರಾಷ್ಟ್ರ ರಾಜ್ಯದಿಂದ ರಾಷ್ಟ್ರ ರಾಜಕಾರಣಕ್ಕೆ ಬರುವ ಸಾಧ್ಯತೆಯಿದೆ. ಅವರು ಕೂಡ ಮೀಸಲಾತಿ ಆಂದೋಲನದಿಂದ ಸ್ತಬ್ಧಗೊಂಡಿರುವ ಮರಾಠ ಸಮುದಾಯದವರಾಗಿದ್ದಾರೆ. ತಾವ್ಡೆ ಅವರನ್ನು ಬಿಜೆಪಿ ಮುಖ್ಯಸ್ಥರನ್ನಾಗಿ ಮಾಡುವುದರಿಂದ ಈ ವರ್ಷಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗಳಿಗೆ ಮುಂಚಿತವಾಗಿ ಪಾಸಿಟಿವ್ ಸಂದೇಶವನ್ನು ಕಳುಹಿಸುತ್ತದೆ.

ಓಂ ಬಿರ್ಲಾ:

ಲೋಕಸಭೆಯ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಕೂಡ ಆರೆಸ್ಸೆಸ್ ಮತ್ತು ಎಬಿವಿಪಿ ಹಿನ್ನೆಲೆಯಿಂದ ಬಂದವರು. ಕೋಟ ಕ್ಷೇತ್ರದಿಂದ ಕಡಿಮೆ ಅಂತರದಲ್ಲಿಯಾದರೂ ಮರು ಆಯ್ಕೆಯಾಗಿದ್ದಾರೆ. ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಾಗೂ ಆರ್‌ಎಸ್‌ಎಸ್‌ನ ವಿಶ್ವಾಸವನ್ನು ಹೊಂದಿದ್ದಾರೆ.

ಓಂ ಮಾಥುರ್:

ರಾಜಸ್ಥಾನದ ಹಿರಿಯ ನಾಯಕ ಓಂ ಮಾಥೂರ್ ಅವರು ಆರ್‌ಎಸ್‌ಎಸ್‌ನ ಪ್ರಚಾರಕರಾಗಿದ್ದಾರೆ ಮತ್ತು ಸಾಕಷ್ಟು ಸಂಘಟನಾ ಅನುಭವವನ್ನು ಹೊಂದಿದ್ದಾರೆ. ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪಕ್ಷದ ಪ್ರಚಾರವನ್ನು ಅವರು ನಿರ್ವಹಿಸಿದ್ದಾರೆ.

ಅನುರಾಗ್ ಠಾಕೂರ್:

ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಬಾರಿಯ ಕೇಂದ್ರ ಸಚಿವ ಸಂಪುಟದಿಂದ ಅನಿರೀಕ್ಷಿತವಾಗಿ ಹೊರಗಿಟ್ಟವರಲ್ಲಿ ಒಬ್ಬರು. ಅವರು ಹಿಂದಿನ ಮೋದಿ ಸರ್ಕಾರದಲ್ಲಿ ಕ್ರೀಡೆ ಮತ್ತು ಮಾಹಿತಿ ಮತ್ತು ಪ್ರಸಾರದಂತಹ ಖಾತೆಗಳನ್ನು ನಿಭಾಯಿಸಿದ್ದರು. ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಬಿಜೆಪಿಯ ಯುವ ಘಟಕದ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಸಂಘಟನಾ ಕಾರ್ಯಕ್ಕೆ ಹೊಸಬರಲ್ಲ. ಜೆ.ಪಿ. ನಡ್ಡಾ ಕೂಡ ಹಿಮಾಚಲಪ್ರದೇಶದವರಾಗಿದ್ದಾರೆ.

ಇದನ್ನೂ ಓದಿ: ಒಡಿಶಾದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಜೂ.12ಕ್ಕೆ ಮುಂದೂಡಿಕೆ

ಬಿಎಲ್ ಸಂತೋಷ್:

ಕರ್ನಾಟಕದ ಬಿಎಲ್ ಸಂತೋಷ್ ಅವರು ಪ್ರಸ್ತುತ ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿದ್ದಾರೆ ಮತ್ತು ಈಗಾಗಲೇ ಪಕ್ಷದ ಶಕ್ತಿ ಕೇಂದ್ರವಾಗಿದ್ದಾರೆ. ಅವರು ಆರ್‌ಎಸ್‌ಎಸ್ ಪ್ರಚಾರಕರೂ ಆಗಿದ್ದಾರೆ. ಕರ್ನಾಟಕ ಬಿಜೆಪಿಯ ಒಂದು ವಿಭಾಗವು ರಾಜ್ಯದಲ್ಲಿ 2023ರ ಚುನಾವಣಾ ಸೋಲಿಗೆ ಬಿ.ಎಲ್. ಸಂತೋಷ್ ಅವರೇ ಕಾರಣವೆಂದು ಆರೋಪಿಸುತ್ತದೆ. ಇದು ಅವರಿಗೆ ನೆಗೆಟಿವ್ ಅಂಶವಾಗಬಹುದು. ಆದರೆ, ಬಿಎಲ್ ಸಂತೋಷ್ ಅವರ ಮಾತಿಗೆ ಬಿಜೆಪಿಯಲ್ಲಿ ಮಾನ್ಯತೆಯೇನೂ ಕಡಿಮೆಯಾಗಿಲ್ಲ. ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ ಮತ್ತು ಓಂ ಮಾಥುರ್ ಅವರಂತೆ ಬಿಎಲ್ ಸಂತೋಷ್ ಅವರು ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

ಕೆ. ಲಕ್ಷ್ಮಣ್:

ತೆಲಂಗಾಣದ ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಅವರ ಹೆಸರು ಕೂಡ ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್​ನಲ್ಲಿ ಕೇಳಿಬರುತ್ತಿದೆ. ಆಂಧ್ರಪ್ರದೇಶದ ನಂತರ ತೆಲಂಗಾಣ ಬಿಜೆಪಿಯ ಮುಂದಿನ ಟಾರ್ಗೆಟ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ್ ಅವರು ಬಿಜೆಪಿ ಸಾರಥ್ಯ ವಹಿಸಲು ಸಮರ್ಥ ಎನ್ನಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ