AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಯೋಗಿ ಆದಿತ್ಯನಾಥ್​ರನ್ನು ಹೊಗಳಿದ ಶಿಯಾ ಧರ್ಮಗುರು; ಬಿಜೆಪಿಗೇ ಮತ ಹಾಕುವಂತೆ ಸ್ವಧರ್ಮೀಯರಿಗೆ ಮನವಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನಷ್ಟೇ ಅಲ್ಲ ಉತ್ತರ ಪ್ರದೇಶ ಕಾನೂನು ಸಚಿವ ಬ್ರಿಜೇಶ್​ ಪಾಠಕ್​​ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ದಿನೇಶ್ ಶರ್ಮಾರನ್ನೂ ಶಿಯಾ ಧರ್ಮಗುರು ಹೊಗಳಿದ್ದಾರೆ

ಸಿಎಂ ಯೋಗಿ ಆದಿತ್ಯನಾಥ್​ರನ್ನು ಹೊಗಳಿದ ಶಿಯಾ ಧರ್ಮಗುರು; ಬಿಜೆಪಿಗೇ ಮತ ಹಾಕುವಂತೆ ಸ್ವಧರ್ಮೀಯರಿಗೆ ಮನವಿ
ಮೌಲಾನಾ ಕಲ್ಬೆ ಜಾವದ್
TV9 Web
| Edited By: |

Updated on:Feb 22, 2022 | 6:41 PM

Share

ಉತ್ತರ ಪ್ರದೇಶದಲ್ಲಿ (Uttar Pradesh) ಭ್ರಷ್ಟಾಚಾರವನ್ನು ಹತ್ತಿಕ್ಕಲು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಶಿಯಾ ಮುಸ್ಲಿಂ ಧರ್ಮಗುರು ಮೌಲಾನಾ ಕಲ್ಬೆ ಜಾವದ್​ (Maulana Kalbe Jawad) ಹೊಗಳಿದ್ದಾರೆ. ಇವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಯೋಗಿ ಆದಿತ್ಯನಾಥ್​​ರಿಗೆ ಧನ್ಯವಾದ ಸಲ್ಲಿಸುವ ಜತೆ, ಮುಸ್ಲಿಂನ ಶಿಯಾ ಸಮುದಾಯದ ಜನರು ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನಷ್ಟೇ ಅಲ್ಲ ಉತ್ತರ ಪ್ರದೇಶ ಕಾನೂನು ಸಚಿವ ಬ್ರಿಜೇಶ್​ ಪಾಠಕ್​​ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ದಿನೇಶ್ ಶರ್ಮಾರನ್ನೂ ಶಿಯಾ ಧರ್ಮಗುರು ಹೊಗಳಿದ್ದಾರೆ. ಇವರಲ್ಲರೂ ಮುಸ್ಲಿಂ ಸಮುದಾಯದ ಜನರಿಗೆ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಯೋಗಿ ಸರ್ಕಾರದ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ದಂಗೆಗಳನ್ನು ನಿಯಂತ್ರಣ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸೂಕ್ತವಾಗಿದೆ. ಹೀಗಾಗಿ ಶಿಯಾ ಜನಾಂಗದವರು ಬಿಜೆಪಿಗೇ ಮತ ಹಾಕಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ರನ್ನು ಟೀಕಿಸಿದ  ಮೌಲಾನಾ ಕಲ್ಬೆ ಜಾವದ್​, ಅತ್ಯಂತ ಭ್ರಷ್ಟ ಶಾಸಕ ಅಮಾನಾತುಲ್ಲಾ ಖಾನ್​ರನ್ನು ದೆಹಲಿ ವಕ್ಫ್​ ಬೋರ್ಡ್​​ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.  2019ರ ಲೋಕಸಭೆ ಚುನಾವಣೆ ವೇಳೆ ಮೌಲಾನಾ ಜಾವದ್​ ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್​ರನ್ನು ಹೊಗಳಿದ್ದರು.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೂರು ಹಂತದ ಮತದಾನ ಮುಕ್ತಾಯಗೊಂಡಿದೆ. ಯುಪಿಯಲ್ಲಿ ಬಿಜೆಪಿಗೆ ಸಮಾಜವಾದಿ ಪಕ್ಷವೇ ನೇರ ಪ್ರತಿಸ್ಪರ್ಧಿಯಾಗಿದೆ. ಫೆ.24 ಮತ್ತು 25ರಂದು ನಾಲ್ಕು ಮತ್ತು ಐದನೇ ಹಂತದ ಮತದಾನ ನಡೆಯಲಿದ್ದು, ಆರು ಮತ್ತು ಏಳನೇ ಹಂತದ ಮತದಾನ ಮಾರ್ಚ್​ 3 ಮತ್ತು 7ಕ್ಕೆ ಇದೆ. ಮಾರ್ಚ್ 10ರಂದು ಮತಎಣಿಕೆ ನಡೆಯಲಿದೆ.

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: 6 ಆರೋಪಿಗಳ ಬಂಧನ, 13 ಎಫ್​ಐಆರ್ ದಾಖಲು- ಎಸ್​ಪಿ ಮಾಹಿತಿ

Published On - 9:10 am, Tue, 22 February 22