ಗಣೇಶ ಮೂರ್ತಿ ವಿಸರ್ಜನೆ ವೇಳೆ ಶಿವಸೇನೆಯ ಠಾಕ್ರೆ ಮತ್ತು ಶಿಂಧೆ ಬಣ ಮುಖಾಮುಖಿ, ಗುಂಡಿನ ದಾಳಿಯ ಆರೋಪ

ಮುಂಬೈನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಶಿಂಧೆ ಬಣದ ನಡುವಿನ ಜಟಾಪಟಿ ಹೆಚ್ಚುತ್ತಿದೆ. ಇನ್ನು ದಾದರ್ ನಲ್ಲೂ ಗಣೇಶ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಶಿವಸೇನೆಯ ಠಾಕ್ರೆ ಮತ್ತು ಶಿಂಧೆ ಬಣ ಮುಖಾಮುಖಿ, ಗುಂಡಿನ ದಾಳಿಯ ಆರೋಪ
Ganesh Immersion
Image Credit source: NDTV
Edited By:

Updated on: Sep 12, 2022 | 10:32 AM

ಮುಂಬೈನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಶಿಂಧೆ ಬಣದ ನಡುವಿನ ಜಟಾಪಟಿ ಹೆಚ್ಚುತ್ತಿದೆ. ಇನ್ನು ದಾದರ್ ನಲ್ಲೂ ಗಣೇಶ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸೆಪ್ಟೆಂಬರ್ 9 ರಂದು ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮದ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು.

ಶನಿವಾರ ರಾತ್ರಿ ವಿವಾದ ತಾರಕಕ್ಕೇರಿತ್ತು. ದಾದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೂ ಬಣಗಳು ಮತ್ತೊಮ್ಮೆ ಮುಖಾಮುಖಿಯಾದವು.
ಈ ಘರ್ಷಣೆ ಮತ್ತು ಗುಂಡಿನ ದಾಳಿಯಲ್ಲಿ ಶಿವಸೇನೆಯ ವಿಭಾಗದ ಮುಖ್ಯಸ್ಥ ಮಹೇಶ್ ಸಾವಂತ್ ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಈ ಆರೋಪಗಳನ್ನು ಸರವಣಕರ್ ತಳ್ಳಿ ಹಾಕಿದ್ದಾರೆ. ರಾತ್ರಿಯಿಡೀ ನಡೆದ ಗಲಾಟೆ ಬೆಳಗಿನ ಜಾವ 4ರ ಸುಮಾರಿಗೆ ಒಂದು ಹಂತಕ್ಕೆ ಬಂದಿತ್ತು. ಪೊಲೀಸರನ್ನು ವಿಚಾರಣೆಗೊಳಪಡಿಸಿದ ಬಳಿಕ ಸರವಣಕರ್ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಠಾಣೆಯಿಂದ ಹೊರ ಬಂದಿದ್ದಾರೆ.

ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ದಾದರ್ ಪೊಲೀಸ್ ಠಾಣೆಯಲ್ಲಿ ಸಂತೋಷ್ ತೆಲವನೆ ದೂರಿನ ಮೇರೆಗೆ ಠಾಕ್ರೆ ಬಣದ ಮಹೇಶ್ ಸಾವಂತ್ ಸೇರಿದಂತೆ 35 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜೂನ್‌ನಲ್ಲಿ, ಶಿಂಧೆ ಮತ್ತು ಶಿವಸೇನೆಯ 55 ಶಾಸಕರಲ್ಲಿ 39 ರ ಬಂಡಾಯವು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದ ಪತನಕ್ಕೆ ಕಾರಣವಾಯಿತು.

MVA ಸರ್ಕಾರದ ಪತನದ ನಂತರ, ಶಿಂಧೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೊಸ ಸರ್ಕಾರದಲ್ಲಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿದ್ದಾರೆ.

 

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ