ಗೇಟ್ ತೆರೆಯುವುದು ತಡವಾಗಿದ್ದಕ್ಕೆ ಸೆಕ್ಯುರಿಟಿ ಗಾರ್ಡ್ಗೆ ಕಪಾಳಮೋಕ್ಷ; ಸೊಕ್ಕು ತುಂಬಿದ ಮಹಿಳೆಯ ವಿಡಿಯೋ ವೈರಲ್
ಉತ್ತರಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ ಎಸಗಲಾಗಿದೆ. ಗೇಟೆ ತೆರೆಯುವುದು ತಡವಾಯಿತು ಎಂದು ಆರೋಪಿಸಿ ಸೆಕ್ಯುರಿಟಿ ಗಾರ್ಡ್ಗೆ ಮಹಿಳೆಯೊಬ್ಬಳು ಕಪಾಳಮೋಕ್ಷ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ನೋಯ್ಡಾ: ಗೇಟ್ ತೆರೆಯಲು ತಡ ಮಾಡಿದರು ಎಂಬ ಸಣ್ಣ ಕಾರಣಕ್ಕೆ ಮಹಿಳೆಯೊಬ್ಬರು ಸೆಕ್ಯುರಿಟಿ ಗಾರ್ಡ್ ಮೇಲೆ ರೇಗಾಡಿದ್ದಲ್ಲದೆ ಕಪಾಳಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಎರಡನೇ ಅಮಾನವೀಯ ಕೃತ್ಯ ಇದಾಗಿದೆ. ಸದ್ಯ ಇದರ ವಿಡಿಯೋ ವೈರಲ್ ಆಗುತ್ತಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಮಹಿಳಾ ಪ್ರೊಫೆಸರ್ ಸುತಾಪ ದಾಸ್ ಎಂಬವರು ತಮ್ಮ ಕಾರಿನಿಂದ ಇಳಿದು ಕೋಪದಿಂದ ಸೆಕ್ಯುರಿಟಿ ಗಾರ್ಡ್ಗೆ ಬೆರಳನ್ನು ತೋರಿಸಿ ಬೈಯುತ್ತಾ ಗೇಟ್ ಮುಂದೆ ಬಂದಿದ್ದಲ್ಲದೆ ಕಪಾಳಮೋಕ್ಷ ಮಾಡಿದ್ದಾರೆ. ಅಷ್ಟಾದರೂ ಆಕೆಯ ಕೋಪ ತಣ್ಣಗಾದ ಹಾಗೆ ಕಾಣಿಸುತ್ತಿಲ್ಲ, ಏಕೆಂದರೆ ಮಹಿಳೆಯ ಒಂದು ಏಟು ತಿಂದ ಸಿಬ್ಬಂದಿ ಹಿಂದೆ ಸರಿದಿದ್ದಾರೆ. ಈ ವೇಳೆ ಗೇಟ್ ಒಳಗೆ ಬಂದ ಮಹಿಳೆ ಮತ್ತೆ ಎರಡು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಉಳಿದ ಸಿಬ್ಬಂದಿಗಳು ಸಹಾಯಕ್ಕೆ ದಾವಿಸಿಲ್ಲ, ಆದರೆ ಸಿಬ್ಬಂದಿಯೊಬ್ಬರು ಮೊಬೈಲ್ನಲ್ಲಿ ದೃಶ್ಯಾವಳಿಯನ್ನು ಸೆರೆಹಿಡಿದಿದ್ದಾರೆ.
ನೋಯ್ಡಾದ ಕ್ಲಿಯೋ ಕೌಂಟಿಯ ಈ ಕೃತ್ಯ ಎಸಗಲಾಗಿದ್ದು, ಸಿಬ್ಬಂದಿತ ಕೆನ್ನೆಗೆ ಬಾರಿಸುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸಂತ್ರಸ್ತ ಸಿಬ್ಬಂದಿ ಸಚಿನ್, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಸಂಬಂಧ ಪೊಲೀಸರು ದಾಸ್ ಅವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ 3ನೇ ಹಂತದ ಪೊಲೀಸ್ ಠಾಣೆಯ ಅಧಿಕಾರಿ ವಿಜಯ್ ಕುಮಾರ್, ಕಾವಲುಗಾರನ ದೂರಿನ ಆಧಾರದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದರಂತೆ ಆಕೆಯನ್ನು ಬಂಧಿಸಲಾಗಿದ್ದು, ನಂತರ ಆಕೆಗೆ ಜಾಮೀನು ನೀಡಲಾಗಿದೆ ಎಂದಿದ್ದಾರೆ.
ಸಿಬಂದಿ ಗೇಟ್ ತೆರೆಯಲು ತಡ ಮಾಡಿದ್ದಾರೆ ಎಂಬುದು ಪ್ರಾಧ್ಯಾಪಕಿ ದಾಸ್ ಅವರ ಆರೋಪವಾಗಿದೆ. ಆದರೆ “ನಾವು RFID ಕೆಲಸ ಮಾಡುತ್ತಿದ್ದೆವು. RFID ನಲ್ಲಿ ಆಕೆಯ ಕಾರ್ ಸಂಖ್ಯೆ ತೋರಿಸುತ್ತಿಲ್ಲ. ಇದಾದ ನಂತರವೂ ನಾವು ಕಾರನ್ನು ಒಳಗೆ ಅನುಮತಿಸಿದ್ದೇವೆ. ಆದರೆ ಅವರು ಹೊರಬಂದು ನಿಂದಿಸಲು ಮತ್ತು ಹೊಡೆಯಲು ಪ್ರಾರಂಭಿಸಿದರು. ಈ ವೇಳೆ ನಾವು 112ಗೆ ಕರೆ ಮಾಡಿ ಮಾಹಿತಿ ನೀಡಿದೆವು” ಎಂದು ಗಾರ್ಡ್ ಸಚಿನ್ ಹೇಳಿದ್ದಾರೆ.
Another Video of #ThappadBaaz Women in #Noida, Security guard was slapped after a minor altercation, The slapping woman caught in #CCTV, Professor is a woman by Profession, #CleoCountySociety Case#VideoViral pic.twitter.com/SNgeW4GEeE
— Anuj Tomar journalist (@THAKURANUJTOMAR) September 11, 2022
ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಇದು ಎರಡನೇ ಪ್ರಕರಣವಾಗಿದೆ. ಕಳೆದ ತಿಂಗಳು ಉತ್ತರಪ್ರದೇಶದ ಗುರ್ಗಾಂವ್‌ನಲ್ಲಿ ಒಬ್ಬ ವ್ಯಕ್ತಿ ಅಪಾರ್ಟ್ಮೆಂಟ್ನ ಇಬ್ಬರು ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 am, Mon, 12 September 22