AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳಸಿದ ದಾಲ್, ಶಾಸಕ ಸಂಜಯ್ ದೂರು, ಎಂಎಲ್​ಎ ಗೆಸ್ಟ್​ಹೌಸ್ ಕ್ಯಾಂಟೀನ್ ಪರವಾನಗಿ ರದ್ದು

ಮುಂಬೈನ ಶಾಸಕರ ವಸತಿಗೃಹದಲ್ಲಿರುವ ಕ್ಯಾಂಟೀನ್​​ನಲ್ಲಿ ಹಳಸಿದ ದಾಲ್ ನೀಡಿರುವ ಆರೋಪದ ಮೇಲೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕ್ಯಾಂಟೀನ್ ಪರವಾನಗಿ ರದ್ದುಗೊಳಿಸಿದೆ. ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ನಿಮಿತ್ತ ಶಾಸಕರೆಲ್ಲರೂ ಮುಂಬೈಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಕೂಡ ಎಂಎಲ್ಎ ಗೆಸ್ಟ್​ಹೌಸ್​​ನಲ್ಲಿ ತಂಗಿದ್ದರು.

ಹಳಸಿದ ದಾಲ್, ಶಾಸಕ ಸಂಜಯ್ ದೂರು, ಎಂಎಲ್​ಎ ಗೆಸ್ಟ್​ಹೌಸ್ ಕ್ಯಾಂಟೀನ್ ಪರವಾನಗಿ ರದ್ದು
ಕ್ಯಾಂಟೀನ್
ನಯನಾ ರಾಜೀವ್
|

Updated on:Jul 10, 2025 | 11:27 AM

Share

ಮುಂಬೈ, ಜುಲೈ 10: ಮುಂಬೈನ ಶಾಸಕರ ವಸತಿಗೃಹದಲ್ಲಿರುವ ಕ್ಯಾಂಟೀನ್​​ನಲ್ಲಿ ಹಳಸಿದ ದಾಲ್ ನೀಡಿರುವ ಆರೋಪದ ಮೇಲೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕ್ಯಾಂಟೀನ್ ಪರವಾನಗಿ ರದ್ದುಗೊಳಿಸಿದೆ. ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ನಿಮಿತ್ತ ಶಾಸಕರೆಲ್ಲರೂ ಮುಂಬೈಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್(Sanjay Gaikwad) ಕೂಡ ಎಂಎಲ್ಎ ಗೆಸ್ಟ್​ಹೌಸ್​​ನಲ್ಲಿ ತಂಗಿದ್ದರು.

ಆ ಸಮಯದಲ್ಲಿ ಊಟಕ್ಕೆಂದು ಕ್ಯಾಂಟೀನ್​​ಗೆ ಹೋಗಿದ್ದರು. ಅಲ್ಲಿ ಹಳಸಿದ್ದ ದಾಲ್ ನೀಡಿದ್ದರು. ಅದಕ್ಕೆ ಆಕ್ರೋಶಗೊಂಡ ಶಾಸಕರು ಕ್ಯಾಂಟೀನ್ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದರು. ಹಾಗೆಯೇ ಕ್ಯಾಂಟೀನ್ ಆಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ದೂರು ನೀಡಿದ್ದರು.

ಎಫ್​ಡಿಎ ತುರ್ತು ಕ್ರಮ ಕೈಗೊಂಡಿದೆ. ಅಜಂತಾ ಕ್ಯಾಟರರ್ಸ್​​ ಅನ್ನು ಅಮಾನತು ಮಾಡಲಾಗಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಪ್ರಮುಖ ನಿಬಂಧನೆಗಳನ್ನು ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ) ನಿಯಮಗಳು, 2011 ಅನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ಮತ್ತಷ್ಟು ಓದಿ: Video: ಮುಂಬೈ: ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್

ಪನೀರ್, ಶೇಜ್ವಾನ್ ಚಟ್ನಿ, ಎಣ್ಣೆ ಮತ್ತು ತೊಗರಿ ಬೇಳೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಮತ್ತು 14 ದಿನಗಳಲ್ಲಿ ವರದಿ ಬರಲಿದೆ ಎಂದು ಎಫ್‌ಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಶಾಸಕರ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಹೊಡೆದ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರೂ ಯಾವುದೇ ಸರಿಪಡಿಸುವ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಕ್ಷಮೆಯಾಚಿಸಲು ನಿರಾಕರಿಸಿರುವ ಶಾಸಕರು ನಾನು ಮಾಡಿದ ಕೆಲಸಕ್ಕೆ ಯಾವುದೇ ವಿಷಾದವಿಲ್ಲ ಎಂದಿದ್ದಾರೆ. ಎಲ್ಲಾ ಶಾಸಕರಿಂದಲೂ ಅಧಿಕಾರ ದುರುಪಯೋಗವಾಗುತ್ತಿದೆ ಎಂಬ ತಪ್ಪು ಸಂದೇಶ ಜನರಲ್ಲಿ ಮೂಡುತ್ತಿದೆ  ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:19 am, Thu, 10 July 25