Shocking News: ಶಾಲೆಯಲ್ಲೇ ಗರ್ಭಿಣಿ ಶಿಕ್ಷಕಿಯ ಕೂದಲು ಹಿಡಿದು ಎಳೆದಾಡಿದ ಬಾಲಕರು; ಕಾರಣ ಕೇಳಿದರೆ ಶಾಕ್ ಆಗ್ತೀರ
ಆ ಶಿಕ್ಷಕಿ ತನ್ನ ವಿದ್ಯಾರ್ಥಿಗಳು ಸರಿಯಾಗಿ ಓದುತ್ತಿಲ್ಲ ಎಂದು ಹಾಗೂ ಶಾಲೆಯಲ್ಲಿ ಅವರ ನಡವಳಿಕೆ ಸರಿಯಾಗಿಲ್ಲವೆಂದು ಆ ವಿದ್ಯಾರ್ಥಿಗಳ ಪೋಷಕರಿಗೆ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಆ ಹುಡುಗರು ಶಿಕ್ಷಕಿಯ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ನವದೆಹಲಿ: ಅಸ್ಸಾಂನ (Assam) ದಿಬ್ರುಗಢ್ ಜಿಲ್ಲೆಯ ವಿದ್ಯಾರ್ಥಿಗಳ ಗುಂಪೊಂದು 5 ತಿಂಗಳ ಗರ್ಭಿಣಿ ಶಿಕ್ಷಕಿಯೊಬ್ಬರನ್ನು (Pregnant Teacher) ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲೇ ಆ ಶಿಕ್ಷಕಿಯ ಕೂದಲನ್ನು ಹಿಡಿದೆಳೆದು, ಚಿತ್ರಹಿಂಸೆ ನೀಡಿದ್ದಾರೆ. ಆ ಶಿಕ್ಷಕಿ ತನ್ನ ವಿದ್ಯಾರ್ಥಿಗಳು ಸರಿಯಾಗಿ ಓದುತ್ತಿಲ್ಲ ಎಂದು ಹಾಗೂ ಶಾಲೆಯಲ್ಲಿ ಅವರ ನಡವಳಿಕೆ ಸರಿಯಾಗಿಲ್ಲವೆಂದು ಆ ವಿದ್ಯಾರ್ಥಿಗಳ ಪೋಷಕರಿಗೆ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಆ ಹುಡುಗರು ಶಿಕ್ಷಕಿಯ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರೊಂದಿಗೆ ಶಿಕ್ಷಕಿ ಸಭೆ ನಡೆಸಿದ ದಿನ ಸಂಜೆಯೇ ಈ ಘಟನೆ ನಡೆದಿದೆ. ಈ ಸಭೆಯ ನಂತರ ಕೆಲವು ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಮುಖ್ಯ ಶೈಕ್ಷಣಿಕ ಬ್ಲಾಕ್‌ನ ಮುಂದೆ ಶಿಕ್ಷಕರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಅವರಲ್ಲಿ ಕೆಲವರು ಆ ಶಿಕ್ಷಕಿಯನ್ನು ತಳ್ಳಿದರು. ಒಬ್ಬ ವಿದ್ಯಾರ್ಥಿ ಅವರ ಕೂದಲನ್ನು ಎಳೆದನು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Shocking News: ತುಂಬು ಗರ್ಭಿಣಿಯನ್ನು ಅಡ್ಮಿಟ್ ಮಾಡಿಕೊಳ್ಳಲು ಒಪ್ಪದ ಆಸ್ಪತ್ರೆ; ರಸ್ತೆಯಲ್ಲೇ ಮಹಿಳೆಗೆ ಹೆರಿಗೆ!
ಆಕೆಯನ್ನು ಇತರ ಕೆಲವು ಮಹಿಳಾ ಶಿಕ್ಷಕರು, ಶಾಲಾ ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿನಿಯರು ಆ ಹುಡುಗರಿಂದ ರಕ್ಷಿಸಿದ್ದಾರೆ. ಇದ್ದಕ್ಕಿದ್ದಂತೆ ತನ್ನ ಮೇಲೆ ನಡೆದ ದಾಳಿಯಿಂದ ಗಾಬರಿಯಾಗಿ ಆ ಶಿಕ್ಷಕಿ ಕುಸಿದು ಬೀಳುವ ಹಂತದಲ್ಲಿದ್ದರು. ತಕ್ಷಣ ಮಹಿಳಾ ಅಟೆಂಡರ್ ಜೊತೆಗೆ ಆಕೆಯನ್ನು ಶಾಲಾ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು.
“ಈ ಘಟನೆಯಲ್ಲಿ 10 ಮತ್ತು 11ನೇ ತರಗತಿಯ 22 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ನಡೆದ ಮರುದಿನ ಬೆಳಿಗ್ಗೆ ನನ್ನ ನಿವಾಸದಲ್ಲಿ ತುರ್ತು ಸಭೆ ನಡೆಸಿದ ನಂತರ ನಾನು ಆ ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿದೆ. ಇದರಿಂದ ಇನ್ನಷ್ಟು ಕೋಪಗೊಂಡ ವಿದ್ಯಾರ್ಥಿಗಳು ನನಗೆ ಫೋನ್ ಮೂಲಕ ಬೆದರಿಕೆ ಹಾಕಿದರು. ನನ್ನ ಮೇಲೆ ದಾಳಿ ಮಾಡಲು ನನ್ನ ಕ್ವಾರ್ಟರ್ಸ್ ಕಡೆಗೆ ಬಂದರು” ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಇದನ್ನೂ ಓದಿ: ಕಾಣೆಯಾಗಿದ್ದ ಅಪ್ರಾಪ್ತ ತನ್ನ ಸೀನಿಯರ್ ಮನೆಯಲ್ಲಿ ಪತ್ತೆ: ಗರ್ಭಿಣಿ ವಿದ್ಯಾರ್ಥಿನಿ ಬಂಧನ
ಬಳಿಕ, ಪೊಲೀಸರು ಶಾಲಾ ಆವರಣಕ್ಕೆ ಬಂದು ವಿದ್ಯಾರ್ಥಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಅಪ್ರಾಪ್ತ ವಿದ್ಯಾರ್ಥಿಗಳ ವಿರುದ್ಧ ಔಪಚಾರಿಕ ದೂರು ದಾಖಲಾಗಬೇಕಾಗಿರುವುದರಿಂದ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Thu, 1 December 22