Shocking News: ವೈವಾಹಿಕ ಕಲಹದಿಂದ ಗಲಾಟೆ; ಪತ್ನಿ, ಅಪ್ರಾಪ್ತ ಮಗಳು, ಅತ್ತೆಗೆ ಇರಿದ ಗಂಡ!

| Updated By: ಸುಷ್ಮಾ ಚಕ್ರೆ

Updated on: Aug 29, 2022 | 10:15 AM

ಚಾಕುವಿನಿಂದ ಇರಿತಕ್ಕೊಳಗಾದವರನ್ನು ಸಿದ್ಧಾರ್ಥ್ ಅವರ ಪತ್ನಿ ಅದಿತಿ ಶರ್ಮಾ (37), ಆಕೆಯ 8 ವರ್ಷದ ಮಗಳು ಮತ್ತು ಆಕೆಯ ತಾಯಿ ಮಾಯಾ ದೇವಿ (60) ಎಂದು ಗುರುತಿಸಲಾಗಿದೆ.

Shocking News: ವೈವಾಹಿಕ ಕಲಹದಿಂದ ಗಲಾಟೆ; ಪತ್ನಿ, ಅಪ್ರಾಪ್ತ ಮಗಳು, ಅತ್ತೆಗೆ ಇರಿದ ಗಂಡ!
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ, ಮಗಳು ಮತ್ತು ಅತ್ತೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪದ ಮೇಲೆ ದೆಹಲಿಯಲ್ಲಿ (Delhi) ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಗುರುಗಾಂವ್‌ನಲ್ಲಿ ಇಂಜಿನಿಯರ್ ಆಗಿದ್ದ ಸಿದ್ಧಾರ್ಥ್ (37) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದವರನ್ನು ಸಿದ್ಧಾರ್ಥ್ ಅವರ ಪತ್ನಿ ಅದಿತಿ ಶರ್ಮಾ (37), ಆಕೆಯ 8 ವರ್ಷದ ಮಗಳು ಮತ್ತು ಆಕೆಯ ತಾಯಿ ಮಾಯಾ ದೇವಿ (60) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ವಸುಂಧರಾ ಎನ್‌ಕ್ಲೇವ್‌ನ ಧರ್ಮಶಿಲಾ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ ಪೊಲೀಸ್ ಆಯುಕ್ತ (ಪೂರ್ವ) ಪ್ರಿಯಾಂಕಾ ಕಶ್ಯಪ್ ಪ್ರಕಾರ, ವೈವಾಹಿಕ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣ ಎಂದು ನಂಬಲಾಗಿದೆ. ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಅಸಭ್ಯ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಕ್ಕೆ ಬಾಲಕಿಗೆ ಚಾಕು ಇರಿದು ಕೊಲೆ; ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಈ ವಾರದ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ, ದಕ್ಷಿಣ ದೆಹಲಿಯ ದಕ್ಷಿಣಪುರಿ ಪ್ರದೇಶದಲ್ಲಿ 29 ವರ್ಷದ ಮಹಿಳೆಯೊಬ್ಬಳಿಗೆ ಆಕೆ ಕುಡುಕ ಪತಿ ಅನೇಕ ಬಾರಿ ಇರಿದಿದ್ದನು. ಸಂತ್ರಸ್ತೆ ತನ್ನ ಪತಿಯಿಂದ ದೂರವಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದರು. ಆಕೆಯ ಗಂಡ ಮಕ್ಕಳನ್ನು ಭೇಟಿ ಮಾಡಿದಾಗ ಆ ಮಹಿಳೆ ಗಲಾಟೆ ಮಾಡಿದಾಗ ಈ ಘಟನೆ ಸಂಭವಿಸಿದೆ.

ಆರೋಪಿಯನ್ನು ಸೋಫಾ ರಿಪೇರಿ ಮಾಡುವ ಬೋಬಿ (32) ಎಂದು ಗುರುತಿಸಲಾಗಿತ್ತು. ಅವರು ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕುಡಿತದ ಚಟದಿಂದ ಈತನ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು, ಕಳೆದ 3 ತಿಂಗಳಿಂದ ದೂರ ವಾಸವಾಗಿದ್ದ ಪತ್ನಿ. ಮಹಿಳೆ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ