Shocking News: ಹೆತ್ತ ತಾಯಿಯನ್ನೇ ಕೊಂದು, ಮಂಚದ ಕೆಳಗೆ ಶವ ಬಚ್ಚಿಟ್ಟ ಮಗರಾಯ!
ಬೀಗ ಹಾಕಿರುವ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ದೂರು ನೀಡಿದ್ದರು. ಈ ಕೊಲೆಗೆ ಬಳಸಿದ ಚಾಕು, ಬೀಗದ ಕೀ ಮತ್ತು ಆರೋಪಿಯ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗುರುಗ್ರಾಮ: ತನ್ನ ತಾಯಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ (Extra Marital Affair) ಎಂದು ತಿಳಿದು ಕೋಪಗೊಂಡಿದ್ದ ಮಗ ತನ್ನ ಅಮ್ಮನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟೇ ಅಲ್ಲದೆ, ಅಮ್ಮನನ್ನು ಕೊಂದ (Murder) ಬಳಿಕ ಆಕೆಯ ಮೃತದೇಹವನ್ನು ಬೆಡ್ರೂಂನ (Bed Room) ಮಂಚದ ಅಡಿಯಲ್ಲಿ ಮುಚ್ಚಿಟ್ಟಿದ್ದಾನೆ. ಹರಿಯಾಣದಲ್ಲಿ ಈ ಆಘಾತಕಾರಿ ಘಟನೆ (Shocking News) ನಡೆದಿದೆ. ಅಪ್ಪ ತೀರಿಹೋದಾಗಿನಿಂದ ಅಮ್ಮನ ಜೊತೆ ವಾಸವಾಗಿದ್ದ ಮಗನಿಗೆ ತನ್ನ ತಾಯಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿತ್ತು.
ಈ ವಿಷಯಕ್ಕೆ ಅಮ್ಮ-ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಜಗಳದಿಂದ ತನ್ನ ತಾಯಿಯನ್ನು ಆತ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊಲೆಯ ಆರೋಪದ ಮೇಲೆ ಆರೋಪಿ ಯುವಕನನ್ನು ಹರಿಯಾಣದ ರೋಹ್ಟಕ್‌ನಲ್ಲಿ ಬಂಧಿಸಲಾಗಿದೆ. ಮಹಿಳೆಯ ಮೇಲೆ ಹಲವು ಬಾರಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮೃತರನ್ನು ಸೋನಾದೇವಿ (40) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Big News: ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣ: ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ವಜಾ
ತನಿಖೆಯ ಸಮಯದಲ್ಲಿ, ಪೊಲೀಸರು ಕೋಣೆಯಲ್ಲಿ ಒಂದು ಮಂಚದ ಕೆಳಗೆ ಬಿದ್ದಿದ್ದ ಮಹಿಳೆಯ ಕೊಳೆತ ದೇಹವನ್ನು ಪತ್ತೆಹಚ್ಚಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬೀಗ ಹಾಕಿರುವ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ದೂರು ನೀಡಿದ್ದರು. ಈ ಕೊಲೆಗೆ ಬಳಸಿದ ಚಾಕು, ಬೀಗದ ಕೀ ಮತ್ತು ಆರೋಪಿಯ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಗಂಡು-ಹೆಣ್ಣಿನ ಬೆತ್ತಲೆ ಮೆರವಣಿಗೆ; ಆರೋಪಿಯ ಹೆಂಡತಿ ಬಂಧನ
ಪತಿಯ ಸಾವಿನ ನಂತರ, ಕೆಲವು ತಿಂಗಳುಗಳಿಂದ ಸೋನಾ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ತೊರೆದ ಆಕೆ ಗರ್ಹಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಪ್ರವೇಶ್ ಎಂಬಾತ ಸೋನಿಪತ್‌ನಲ್ಲಿ ಉಳಿದುಕೊಂಡು ಆಗಾಗ ಆಕೆಯನ್ನು ಭೇಟಿ ಮಾಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಯು ತನ್ನ ತಾಯಿ ಯಾರೊಂದಿಗೋ ಫೋನ್‌ನಲ್ಲಿ ದೀರ್ಘಕಾಲ ಮಾತನಾಡುತ್ತಿರುವುದನ್ನು ನೋಡಿದ್ದಾಗಿ ತಿಳಿಸಿದ್ದಾನೆ. ಇದರಿಂದಾಗಿ ಆಕೆಗೆ ಅಕ್ರಮ ಸಂಬಂಧವಿದೆ ಎಂದು ನನಗೆ ಖಚಿತವಾಗಿತ್ತು. ಆಗಸ್ಟ್ 6ರಂದು ರಾತ್ರಿ ತನ್ನ ತಾಯಿಯನ್ನು ಭೇಟಿಯಾಗಲು ಬಂದಿದ್ದ ಆತ ಆಕೆಯನ್ನು ಹಲವು ಬಾರಿ ಇರಿದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆಯನ್ನು ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದ. ಅವನು ತನ್ನ ತಾಯಿಯ ಫೋನ್ ತೆಗೆದುಕೊಂಡು ಕೋಣೆಗೆ ಹೊರಗಿನಿಂದ ಬೀಗ ಹಾಕಿ ಓಡಿಹೋಗಿದ್ದ ಎಂದು ಗುರ್ಗಾಂವ್ ಪೊಲೀಸ್ ವಕ್ತಾರ ಸುಭಾಷ್ ಬೋಕೆನ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Sat, 13 August 22