ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moose Wala) ಹತ್ಯೆಯ ಹೊಣೆ ಹೊತ್ತಿರುವ ಕೆನಡಾ ಮೂಲದ ದರೋಡೆಕೋರ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ನ್ನು ಯುನೈಟೆಡ್ ಸ್ಟೇಟ್ಸ್ (US) ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬಂಧನದ ಬಗ್ಗೆ ಭಾರತೀಯ ಏಜೆನ್ಸಿಗಳು ಇನ್ನೂ ದೃಢೀಕರಿಸಿಲ್ಲ. ಅದರ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಭಾರತ ಮೂಲದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪರವಾಗಿ ಬ್ರಾರ್, ಮೂಸೆವಾಲಾ ಹತ್ಯೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. ಕೊಲೆ, ಕ್ರಿಮಿನಲ್ ಸಂಚು, ಅಕ್ರಮ ಬಂದೂಕುಗಳ ಪೂರೈಕೆ ಮತ್ತು ಕೊಲೆ ಯತ್ನದ ಆರೋಪದಡಿ ಪಂಜಾಬ್‌ನ ಮುಕ್ತಸರ ಮೂಲದ ಬ್ರಾರ್ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿ ಮಾಡಲಾಗಿತ್ತು.
ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು, ಬ್ರಾರ್ ಇತ್ತೀಚೆಗೆ ಕೆನಡಾದಿಂದ ಯುಎಸ್‌ಗೆ ತೆರಳಿದ್ದು ನವೆಂಬರ್ 20 ರಂದು ನಾಪತ್ತೆಯಾಗಿದ್ದ ಎಂದಿದ್ದಾರೆ. ಕೆನಡಾ ಮೂಲದ ಬ್ರಾರ್, ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ, ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ, ಚರಂಜಿತ್ ಸಿಂಗ್ ಅಲಿಯಾಸ್ ಬಿಹ್ಲಾ, ರಮಣದೀಪ್ ಸಿಂಗ್ ಅಲಿಯಾಸ್ ರಾಮನ್ ಜಡ್ಜ್, ಗುರ್ಪಿಂದರ್ ಸಿಂಗ್ ಅಲಿಯಾಸ್ ಬಾಬಾ ದಲ್ಲಾ ಮತ್ತು ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ ಸೇರಿದಂತೆ ಕೆನಡಾ ಮೂಲದ ಪಂಜಾಬ್ ದರೋಡೆಕೋರರನ್ನು ಭಾರತೀಯ ಏಜೆನ್ಸಿಗಳು ಪತ್ತೆಹಚ್ಚುತ್ತಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಅಧಿಕೃತ ಚಾನೆಲ್‌ಗಳ ಮೂಲಕ ಅಮೆರಿಕ ಅಧಿಕಾರಿಗಳೊಂದಿಗೆ ಹೆಚ್ಚಿನ ವಿವರಗಳನ್ನು ಪಡೆಯಲು ಮತ್ತು ನೇರವಾಗಿ ಭಾರತಕ್ಕೆ ಬ್ರಾರ್‌ನ ಗಡೀಪಾರು ಮಾಡುವುದನ್ನು ಮುಂದುವರಿಸಬಹುದೇ ಎಂದು ನೋಡಲು ಅಧಿಕೃತ ಚಾನೆಲ್‌ಗಳ ಮೂಲಕ ಸಂಪರ್ಕಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ಏಜೆನ್ಸಿ “ದೊಡ್ಡ ಪಿತೂರಿ ಬಗ್ಗೆ ಶಂಕಿಸಿದೆ. ಏಕೆಂದರೆ ಒಮ್ಮೊಮ್ಮೆ ಗ್ಯಾಂಗ್‌ಗಳು ಬಹಳ ದೊಡ್ಡ ಸಂಘಟಿತ ಸಿಂಡಿಕೇಟ್‌ಗಳಾಗಿ ಕಾರ್ಯವೆಸಗುತ್ತಿದ್ದು ಇವು ಉನ್ನತ ಮಟ್ಟದ ಒಪ್ಪಂದದ ಹತ್ಯೆಗಳು ಮತ್ತು ಪಾಕಿಸ್ತಾನ ಮತ್ತು ಇತರ ದೇಶಗಳಿಂದ ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ಪರಿಣತಿ ಪಡೆದಿವೆ. ಈ ಗುಂಪು AK47 ಮತ್ತು ಗ್ರೆನೇಡ್‌ಗಳಂತಹ ಅಪಾಯಕಾರಿ ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ.
ಗ್ಯಾಂಗ್‌ಗಳು ಏಜೆನ್ಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಮನಕ್ಕೆ ಆದೇಶ ನೀಡಿದ್ದಾರೆ. ದೆಹಲಿ ಪೊಲೀಸರು ಆಗಸ್ಟ್‌ನಲ್ಲಿ ಒಂದೆರಡು ಪ್ರಕರಣಗಳನ್ನು ದಾಖಲಿಸಿದ್ದು, ಅದನ್ನು ಎನ್‌ಐಎ ವಹಿಸಿಕೊಂಡಿದೆ. ದೆಹಲಿ, ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲೂ ದಾಳಿ ನಡೆಸಲಾಗಿದೆ.
ಡಿಸೆಂಬರ್ 2021 ರ ಲುಧಿಯಾನ ಕೋರ್ಟ್ ಬಾಂಬ್ ಸ್ಫೋಟದ ಹಿಂದಿನ ಪ್ರಮುಖ ಸಂಚುಕೋರ, ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾನನ್ನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಯಿತು.
ಪಂಜಾಬ್‌ನ ಅಮೃತಸರ ನಿವಾಸಿ ಸಿಂಗ್ನ್ನು ಪತ್ತೆ ಹಚ್ಚಿದರೆ ₹ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಕೌಲಾಲಂಪುರದಿಂದ ವಿಮಾನ ನಿಲ್ದಾಣಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಎನ್‌ಐಎ ಈತನನ್ನು ಬಂಧಿಸಿದೆ. ಲುಧಿಯಾನದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದರು ಮತ್ತು ಆರು ಮಂದಿ ಗಾಯಗೊಂಡರು. ಇದಕ್ಕೆ ಸಂಬಂಧಿಸಿದ ಪ್ರಕರಣವನ್ನು ಆರಂಭದಲ್ಲಿ ಲುಧಿಯಾನ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಎನ್‌ಐಎ ಜನವರಿಯಲ್ಲಿ ಪ್ರಕರಣವನ್ನು ಮರು ದಾಖಲಿಸಿದೆ.ಪಾಕಿಸ್ತಾನ ಮೂಲದ ಸ್ವಯಂ-ಘೋಷಿತ ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಅವರ ಸಹವರ್ತಿ ಸಿಂಗ್, ರೋಡೆ ಜೊತೆಗೆ ಲುಧಿಯಾನ ಸ್ಫೋಟದ ಸಂಚುಕೋರರಲ್ಲಿ ಒಬ್ಬ ಎಂದು ಎನ್ಐಎ ಹೇಳಿದೆ. ಲುಧಿಯಾನ ಕೋರ್ಟ್ ಕಾಂಪ್ಲೆಕ್ಸ್ ಸ್ಫೋಟದಲ್ಲಿ ಬಳಸಲಾದ ಪಾಕಿಸ್ತಾನದಿಂದ ಭಾರತ ಮೂಲದ ತನ್ನ ಸಹಚರರಿಗೆ ಕಳುಹಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಯ ವಿತರಣೆಯನ್ನು ರೋಡೆಯ ನಿರ್ದೇಶನದಂತೆ ಅವರು ಸಂಯೋಜಿಸಿದರು ಎಂದು ಎನ್ಐಎ ಹೇಳಿದೆ.ಬಂಧಿತ ಆರೋಪಿಗಳು ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Fri, 2 December 22