ತೆಲಂಗಾಣ ಮುಖ್ಯಮಂತ್ರಿಯನ್ನು ಡಿಕ್ಟೇಟರ್ ಎಂದು ಕರೆದ ಸಚಿವೆ ಸ್ಮೃತಿ ಇರಾನಿ
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಡಿಕ್ಟೇಟರ್ ಎಂದು ಉದ್ಘರಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಗೆಂದು ಹೈದರಾಬಾದ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಬಾರದಿರುವ ಕೆಸಿಆರ್ ವಿರುದ್ಧ ಸ್ಮೃತಿ ಇರಾನಿ ಗುಡುಗಿದ್ದು, ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ.

ಮೋದಿಯ ಸ್ವಾಗತಕ್ಕೆ ಬಾರದೆ ಪ್ರಧಾನಿಗೆ ಅಗೌರವ ಸೂಚಿಸಿದ್ದಾರೆ. ಕೆಸಿಆರ್ ಸಾಂವಿಧಾನಿಕ ಮಾತ್ರವಲ್ಲದೆ ಸಾಂಸ್ಕೃತಿಕ ಸಂಪ್ರದಾಯಗಳನ್ನೂ ಉಲ್ಲಂಘಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಪ್ರಚಾರದ ವೇಳೆ ಮುಖ್ಯಮಂತ್ರಿ ಕೆಸಿಆರ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥರು ಪ್ರಧಾನಿ ಮೋದಿಯನ್ನು “ಸೇಲ್ಸ್‌ಮ್ಯಾನ್” ಎಂದು ಕರೆದಿದ್ದರು. ಪ್ರಧಾನಿ ಮೋದಿಯನ್ನು ಸ್ವಾಗತಿಸದೇ ಇದ್ದರೂ, ಕೆಲವು ಗಂಟೆಗಳ ಮೊದಲು ಅವರು ಯಶವಂತ್ ಸಿನ್ಹಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.
ರಾಜಕಾರಣವು ಕೆಸಿಆರ್ ಕುಟುಂಬಕ್ಕೆ ಸರ್ಕಸ್ ಆಗಿರಬಹುದು. ನಮಗೆ ಅದು ರಾಷ್ಟ್ರೀಯ ನೀತಿಯ ಮಾಧ್ಯಮ. ತೆಲಂಗಾಣ ಇಂದು ವಂಶಪಾರಂಪರ್ಯ ರಾಜಕಾರಣ ನಡೆಸುತ್ತಿದೆ.
ಭಾರತ ಇದನ್ನು ಎಂದಿಗೂ ಎಂದಿರುವ ಅವರು, ಪ್ರಧಾನಿ ಮೋದಿ ಅವರು ಕೆಸಿಆರ್ ಅವರನ್ನು ಅತ್ಯಂತ ಘನತೆ ಮತ್ತು ಗೌರವದಿಂದ ಭೇಟಿಯಾಗುತ್ತಾರೆ ಎಂದಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಅವರ ನಡೆ ಸರ್ಕಾರಕ್ಕೆ ಮಾಡಿರುವ ಅವಮಾನ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದ್ದಾರೆ.
ತೆಲಂಗಾಣದ ಅಭಿವೃದ್ಧಿ ಮಾದರಿಯನ್ನು ದೇಶದ ಇತರೆ ರಾಜ್ಯಗಳು ಅನುಸರಿಸಬೇಕು ಎಂಬ ಕೆಸಿಆರ್ ಹೇಳಿಕೆಯನ್ನು ಪ್ರಶ್ನಿಸಿದ ಸ್ಮೃತಿ ಇರಾನಿ, ಪ್ರಧಾನಿಗೇ ಗೌರವ ಸೂಚಿಸದ ರಾಜ್ಯ ಯಾರಿಗೂ ಮಾದರಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.